ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ನಲ್ಲಿ ಧಾರಾಕಾರ ಮಳೆ

Published 7 ಜೂನ್ 2024, 12:30 IST
Last Updated 7 ಜೂನ್ 2024, 12:30 IST
ಅಕ್ಷರ ಗಾತ್ರ

ಬೀದರ್‌: ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಯಿತು.

ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಗುಡುಗು ಸಹಿತ ಆರಂಭಗೊಂಡ ಮಳೆ 4.30ರ ವರೆಗೆ ಧಾರಾಕಾರವಾಗಿ ಸುರಿಯಿತು. ಆನಂತರ ತುಂತುರು ಹನಿಗಳು ಉದುರಿದವು. ಧಾರಾಕಾರ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರ ನಿಧಾನಗೊಂಡಿತು. ಸತತ ಮೂರನೇ ದಿನವೂ ಮಳೆಯಾಗಿರುವುದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ.

ತಾಲ್ಲೂಕಿನ ಅಮಲಾಪುರ, ಚಿಟ್ಟಾವಾಡಿ, ಚಿಟ್ಟಾ, ಗೋರನಳ್ಳಿ, ಗುನ್ನಳ್ಳಿ, ಘೋಡಂಪಳ್ಳಿ, ಶಹಾಪುರ, ಅಯಾಸಪುರ, ಯದಲಾಪುರ, ಯಾಕತಪುರ, ಮನ್ನಳ್ಳಿ, ಸಿಂದೋಲ್‌, ಅಷ್ಟೂರ, ಕಂಗಟಿ ಸೇರಿದಂತೆ ಹಲವೆಡೆ ಮಳೆಯಾಗಿದೆ. ಭಾಲ್ಕಿ ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲೂ ವರ್ಷಧಾರೆಯಾಗಿದೆ. ಮಿಕ್ಕುಳಿದ ತಾಲ್ಲೂಕುಗಳಲ್ಲಿ ಕಾರ್ಮೋಡ ಕವಿದಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT