ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಬೇಡ್ಕರ್‌ ಶಕ್ತಿಯಾಗಿದ್ದ ರಮಾಬಾಯಿ: ಪ್ರೊ. ಶಿವಶರಣಪ್ಪ

Published 8 ಫೆಬ್ರುವರಿ 2024, 15:44 IST
Last Updated 8 ಫೆಬ್ರುವರಿ 2024, 15:44 IST
ಅಕ್ಷರ ಗಾತ್ರ

ಬೀದರ್‌: ‘ರಮಾಬಾಯಿ ಅವರು ಡಾ. ಬಿ.ಆರ್‌. ಅಂಬೇಡ್ಕರ್ ಅವರಿಗೆ ಶಕ್ತಿಯಾಗಿದ್ದರು. ಅವರ ಬೆಂಬಲದಿಂದಾಗಿಯೇ ಅಂಬೇಡ್ಕರ್‌ ಸಂವಿಧಾನ ರಚಿಸಿ ಸಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಲು ಸಾಧ್ಯವಾಯಿತು’ ಎಂದು ಪ್ರೊ. ಶಿವಶರಣಪ್ಪ ಹುಗ್ಗಿಪಾಟೀಲ ಹೇಳಿದರು.

ಭಾರತೀಯ ಬೌದ್ಧ ಮಹಾಸಭಾ ತಾಲ್ಲೂಕು ಘಟಕ ಹಾಗೂ ಆನಂದನಗರ ಅಭಿವೃದ್ಧಿ ಮಂಡಳಿ ವತಿಯಿಂದ ಇಲ್ಲಿಯ ಆನಂದನಗರದ ಬೌದ್ಧ ವಿಹಾರದಲ್ಲಿ ಆಯೋಜಿಸಿದ್ದ ರಮಾಬಾಯಿ ಅಂಬೇಡ್ಕರ್ ಅವರ 126ನೇ ಜಯಂತಿ ಆಚರಣೆ ಹಾಗೂ ಭಾರತೀಯ ಬೌದ್ಧ ಮಹಾಸಭಾದ ಮಹಿಳಾ ಘಟಕದ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪತಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇಶಕ್ಕಾಗಿ ರಮಾಬಾಯಿ ಅವರು ಮಾಡಿದ ತ್ಯಾಗ ಸ್ಮರಣೀಯ ಎಂದರು.

ಭಂತೆ ಮಿಲಿಂದ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಆನಂದನಗರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಕಾಶೀನಾಥ ಚಲ್ವಾ, ತಥಾಗತ ನೌಕರರ ಮಿತ್ರ ಮಂಡಳಿ ಅಧ್ಯಕ್ಷ ಪಾಂಡುರಂಗ ಬೆಲ್ದಾರ್,
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷೆ ಮಂಜುಳಾ ಬಾವಿದೊಡ್ಡಿ, ನಗರ ಘಟಕದ ಅಧ್ಯಕ್ಷ ಮಾರುತಿರಾವ್ ಕಾಂಬಳೆ, ಆನಂದನಗರ ಘಟಕದ ಅಧ್ಯಕ್ಷೆ ಶಾರಾಬಾಯಿ ಚೆನ್ನಮಲ್, ಪ್ರಮುಖರಾದ ನಿರ್ಮಲಾ ಚಲ್ವಾ, ಪುಷ್ಪಾ ಬಲ್ಲೂರೆ, ಕಮಲಾಬಾಯಿ ಮೇಟಿ, ಭಾರತಿಬಾಯಿ ಕಾಂಬಳೆ, ಉಷಾರಾಣಿ ಬೆಲ್ದಾರ್, ತುಳಸಿರಾಮ ಬಡಿಗೇರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT