ಬುಧವಾರ, ಜನವರಿ 29, 2020
28 °C

ರಂಗೋಲಿ ಸ್ಪರ್ಧೆ ಸಂಗೀತಾ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಹನುಮಾನ ಸೇವಾ ಸಮಾಜ ಸಂಘದ ವತಿಯಿಂದ ಸವಿತಾ ಮಹರ್ಷಿ ಜಯಂತಿ ಪ್ರಯುಕ್ತ ಹಳ್ಳದಕೇರಿಯಲ್ಲಿ ಈಚೆಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಆರ್ಬಿಟ್‌ನ ಬೀದರ್‌ ತಾಲ್ಲೂಕು ಸಂಯೋಜಕಿ ಸಿಸ್ಟರ್‌ ಪ್ರೀಡಾ ಉದ್ಘಾಟಿಸಿದರು. ಅತಿಥಿಗಳಾಗಿ ರಾಜೇಶ್ವರಿ ಪಾಂಚಾಳ, ಯುವ ಮುಖಂಡ ಕಿರಣ ಪಾಲಮ, ವಿಶೇಷ ಆಹ್ವಾನಿತರಾಗಿ ಸವಿತಾ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶಕುಮಾರ ಡಿ.ಪಾಲ್ಗೊಂಡಿದ್ದರು.

ಸಂಘದ ಅಧ್ಯಕ್ಷ ಶಿವಕುಮಾರ ಶಾಹಾಪೂರೆ ಅಧ್ಯಕ್ಷತೆ ವಹಿಸಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ಸಂಗೀತಾ ಶ್ರೀನಿವಾಸ, ಭಾರತಿ ನರಸಿಂಗ್‌ರಾವ್‌, ವೈಷ್ಣವಿ ಸುಧಾಕರ್, ಓಟದ ಸ್ಪರ್ಧೆಯಲ್ಲಿ ಶಿವಕುಮಾರ ರಾಜಕುಮಾರ, ಸೋಮನಾಥ, ಕಿರಣ ಹಾಗೂ ಅನಿಲ, ಪ್ರಾಥಮಿಕ ಶಾಲಾ ವಿಭಾಗದ ಓಟದ ಸ್ಪರ್ಧೆಯಲ್ಲಿ ವಿಶಾಲ ಶಿವಕುಮಾರ. ಲಿಂಬು ಸ್ಪರ್ಧೆಯಲ್ಲಿ ನವ್ಯ ಶ್ರೀನಿವಾಸ ಬಹುಮಾನ ಪಡೆದುಕೊಂಡರು.

ಪ್ರತಿಕ್ರಿಯಿಸಿ (+)