ಗುರುವಾರ , ಫೆಬ್ರವರಿ 27, 2020
19 °C
ಅತ್ಯಾಚಾರ, ವಂಚನೆ ಆರೋಪ

ಅತ್ಯಾಚಾರ: ತೆಲಂಗಾಣ ಪೊಲೀಸರಿಂದ ಬೀದರ್‌ನ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಮತ್ತು ಬರುವ ಪಾನೀಯ ಕೊಟ್ಟು ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್‌ ಮಾಡಿದ ಆರೋಪದ ಮೇಲೆ ಬೀದರ್‌ನ ವಕೀಲ ಸೇರಿ ಮೂವರನ್ನು ತೆಲಂಗಾಣದ ಪೊಲೀಸರು ಈಚೆಗೆ ಬಂಧಿಸಿದ್ದಾರೆ.

ಗುಂಪಾದ ವಕೀಲ ಸಂಜೀವ್ ರೆಡ್ಡಿ, ಬ್ಯಾಂಕೊಂದರಲ್ಲಿ ಅಧಿಕಾರಿಯಾಗಿರುವ ಅವರ ಪತ್ನಿ ಕವಿತಾ, ಸೋದರಳಿಯ ವಿಶಾಲ್ ರೆಡ್ಡಿ ಅವರನ್ನು ಹೈದರಾಬಾದ್‌ನ ಬಚುಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸಂಜೀವ್ ರೆಡ್ಡಿ ಫೇಸ್‌ಬುಕ್‌ ಮೂಲಕ ಅಮೆರಿಕದಲ್ಲಿ ನೆಲೆಸಿರುವ ಹೈದರಾಬಾದ್‌ ಮೂಲದ ಮಹಿಳೆಯ ಪರಿಚಯ ಮಾಡಿಕೊಂಡಿದ್ದರು. ಎರಡು ವರ್ಷಗಳಿಂದ ಅವಳೊಂದಿಗೆ ಸಲುಗೆಯಿಂದ ಇದ್ದರು. ಹಿಂದೊಮ್ಮೆ ಮಹಿಳೆ ಹೈದರಾಬಾದ್‌ಗೆ ಬಂದಿದ್ದಾಗ ಮೂವರೂ ಊಟಕ್ಕೆಂದು ಹೋಟೆಲ್‌ಗೆ ಕರೆದಿದ್ದರು. ಊಟ ಮಾಡಲು ನಿರಾಕರಿಸಿದಾಗ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆ ಹಾಕಿದ್ದರು. ಸಂಜೀವರೆಡ್ಡಿ ಅತ್ಯಾಚಾರ ಎಸಗಿದ್ದು, ಉಳಿದ ಇಬ್ಬರು ಮೊಬೈಲ್‌ನಲ್ಲಿ ಚಿತ್ರ ಸೆರೆ ಹಿಡಿದಿದ್ದರು ಎಂದು ಆರೋಪಿಸಲಾಗಿದೆ.

‘ನನ್ನ ಚಿತ್ರ ತೋರಿಸಿ ₹50 ಲಕ್ಷ ವಸೂಲಿ ಮಾಡಿದ್ದಾರೆ. ಈಗ ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ’ ಎಂದು ಮಹಿಳೆ ತೆಲಂಗಾಣ ಪೊಲೀಸರಿಗೆ ದೂರು ನೀಡಿದ್ದರು. ಫೆ. 7 ರಂದು ತೆಲಂಗಾಣ ಪೊಲೀಸರ ತಂಡ ರೆಡ್ಡಿಯವರ ನಿವಾಸದ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದೆ. ದಾಳಿ ವೇಳೆ ದೊರೆತ ಡೈರಿಯಲ್ಲಿ ಮಹಿಳೆಯರ ಅನೇಕ ಮೊಬೈಲ್‌ ಸಂಖ್ಯೆಗಳು ಪತ್ತೆಯಾಗಿವೆ. ಆರೋಪಿಗಳು ಇನ್ನೂ ಕೆಲ ಮಹಿಳೆಯರಿಗೆ ವಂಚಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು