ಬೀದರ್: ‘ಕುರ್ಆನ್ ಸೃಷ್ಟಿಕರ್ತ-ಮಾನವ ಹಾಗೂ ಮಾನವ-ಮಾನವ ಸಂಬಂಧ ಹೇಗಿರಬೇಕು ಎಂಬುದರ ಮಾರ್ಗದರ್ಶಿಯಾಗಿದೆ’ ಎಂದು ಅನುಪಮ ಮಹಿಳಾ ಮಾಸಿಕ ಉಪ ಸಂಪಾದಕಿ ಸಬೀಹಾ ಫಾತಿಮಾ ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಶಾಂತಿ ಮತ್ತು ಸಮೃದ್ಧಿ ಕುರ್ಆನ್ ಬೆಳಕಿನಲ್ಲಿ’ ಪ್ರವಚನ ಕಾರ್ಯಕ್ರಮದಲ್ಲಿ ಕುರ್ಆನ್ ಅಧ್ಯಾಯ 17ರ ಸೂಕ್ತ 23 ರಿಂದ 30ರ ವರೆಗೆ ಪಠಿಸಿ, ಅವುಗಳ ವಿವರಣೆ ನೀಡಿದರು.

‘ಸೃಷ್ಟಿಕರ್ತ-ಮಾನವ ಮತ್ತು ಮಾನವ- ಮಾನವರ ಮಧ್ಯದ ಸಂಬಂಧ ಗಟ್ಟಿಯಾದರೆ ಶಾಂತಿ, ಸಮೃದ್ಧಿ ನೆಲೆಗೊಳ್ಳುತ್ತದೆ. ಅಸ್ಸಲಾಮ್ ಅಲೈಕುಮ್ ರಹಮತುಲ್ಲಾಹೀ ಬರಕಾತುಹು’ ಎನ್ನುವುದು ಅಲ್ಲಾಹನು ನಿಮ್ಮ ಮೇಲೆ ಶಾಂತಿ, ಕರುಣೆ ಹಾಗೂ ಸಮೃದ್ಧಿ ವರ್ಷಿಸಲಿ ಎಂಬ ಪ್ರಾರ್ಥನೆಯಾಗಿದೆ. ನಾವು ಶಾಂತಿಗಾಗಿ ಪ್ರಾರ್ಥಿಸುವವರು’ ಎಂದು ಹೇಳಿದರು.

ಉಪಸ್ಥಿತಿ ವಹಿಸಿದ್ದ ಬಸವ ಮಂಟಪದ ಮಾತೆ ಸತ್ಯದೇವಿ ಮಾತನಾಡಿ, ‘ಪ್ರಸ್ತುತ ಶಾಂತಿಯನ್ನು ಉಳಿಸಿ, ಬೆಳೆಸಬೇಕಿದೆ. ಶಾಂತಿ ಎನ್ನುವುದು ಸಂಪತ್ತು ಹಾಗೂ ಅಪಾರ ಸಾಧನಗಳಿಂದ ದೊರೆಯುವಂಥದ್ದಲ್ಲ’ ಎಂದರು ಬಣ್ಣಿಸಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಮಾತನಾಡಿ, ದೇವರು ಪ್ರೇಮ, ಶಾಂತಿ, ಶಕ್ತಿಯ ಸಾಗರ. ಆತನಿಂದಲೇ ಶಾಂತಿ ದೊರೆಯುತ್ತದೆ ಎಂದು ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಷ್ಕೀಲಾ ಖಾನಂ ಮಾತನಾಡಿ, ‘ದ್ವೇಷ, ಅನ್ಯಾಯ, ವೈರತ್ವ ತೊರೆದು, ಪ್ರೀತಿ, ನ್ಯಾಯ, ಸಮಾನತೆ ಪಾಲಿಸಿದರೆ ಶಾಂತಿ ಸಾಧ್ಯ’ ಎಂದರು.

ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ಸಂಚಾಲಕಿ ಆಸ್ಮಾ ಸುಲ್ತಾನಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಮಂದೀಪ್ ಕೌರ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕಿ ಮೇಹರ್ ಸುಲ್ತಾನಾ, ಹಿರಿಯ ಸ್ತ್ರೀ ರೋಗ ತಜ್ಞರಾದ ಡಾ. ಶೇಖ್ ಸುಮಯ್ಯಾ ಕುಲ್ಸುಮ್, ಡಾ. ವಿಜಯಶ್ರೀ ಎಸ್. ಬಶೆಟ್ಟಿ, ಡಾ. ಸುಮಯ್ಯ ಫಾತಿಮಾ, ಸಾಹಿತಿ ಡಾ. ಸುನಿತಾ ಕೂಡ್ಲಿಕರ್, ಡಾ. ಅಮಲ್ ಷರೀಫ್, ಡಾ. ದೀಪಾ ನಂದಿ, ಬಿಲ್ಕೀಸ್ ಫಾತಿಮಾ, ಬುಶ್ರಾ ಜಮಾಲ್, ಬುತುಲ್ ಸಯೀದ್ ಫಾತಿಮಾ, ವಿದ್ಯಾವತಿ ಹಿರೇಮಠ, ಡಾ. ಬುಶ್ರಾ ಐಮನ್, ರುಖಯ್ಯಾ ಫಾತಿಮಾ, ಡಾ. ಮಕ್ತುಂಬಿ ಎಂ. ಭಾಲ್ಕಿ, ಅಕ್ಕ ಪಡೆಯ ಸಂಗೀತಾ ಉಪಸ್ಥಿತರಿದ್ದರು.

ವಾಯಫಾ ಆಶ್ರಫ್ ಅವರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹಾಜರಾ ಬೇಗಂ ಕುರ್ಆನ್ ಪಠಣ ಕನ್ನಡಕ್ಕೆ ಅನುವಾದಿಸಿದರು. ಅಫ್ರಾ ನಾಜ್ ನಿರೂಪಿಸಿದರು. ಜಮಾ ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ತೌಹೀದ್ ಸಿಂಧೆ ವಂದಿಸಿದರು.

ಇದೇ ವೇಳೆ ಕುರ್ಆನ್ ಸಂದೇಶಗಳ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.

ದೇವನ ಆರಾಧನೆ ಕರುಣೆ ದಯೆ ನ್ಯಾಯ ಸಮಾನತೆಯಿಂದ ಶಾಂತಿ ಲಭಿಸುತ್ತದೆ. ಮುಹಮ್ಮದ್(ಸ) ಹಾಗೂ ಬಸವಣ್ಣ ಶಾಂತಿ ಸೌಹಾರ್ದತೆಯ ಪ್ರತೀಕ
ಸತ್ಯದೇವಿ ಬಸವ ಮಂಟಪ

ನಮ್ಮ ನೆಚ್ಚಿನ ಭಾರತದಲ್ಲಿ ಶಾಂತಿಯಿಂದ ಅನೇಕತೆಯಲ್ಲಿ ಏಕತೆ ಸಾಧಿಸಬಹುದಾಗಿದೆ. ಅಸಮಾನತೆ ಅನ್ಯಾಯವೇ ಅಶಾಂತಿಗೆ ಕಾರಣ
ತಷ್ಕೀಲಾ ಖಾನಂ ಜಮಾ ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.