ಕಲಬುರಗಿ: ‘ಸಾಮಾಜಿಕ ವಿರೋಧದ ನಡುವೆಯೂ ಹೆಣ್ಣು ಮಕ್ಕಳ ಸಮಾನತೆ ಹಾಗೂ ಶಿಕ್ಷಣಕ್ಕಾಗಿ ಅವಿರತವಾಗಿ ಶ್ರಮಿಸಿದ ಮಹಾನ್ ತಾಯಿ ಸಾವಿತ್ರಿಬಾಯಿ ಫುಲೆ. ಈ ಮೂಲಕ ಸಮಾಜದಲ್ಲಿನ ಮೌಢ್ಯತೆ, ಕಂದಾಚಾರ ಹಾಗೂ ಮೂಢನಂಬಿಕೆಗಳನ್ನು ತೊಡೆದು ಹಾಕಲು ಯತ್ನಿಸಿದರು’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ನಗರದ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಭಾನುವಾರ ನವದೆಹಲಿಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಷನ್, ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದ ರಾಜ್ಯ ಹಾಗೂ ಜಿಲ್ಲಾ ಘಟಕ ಮತ್ತು ಶರಣಬಸವಪ್ಪ ಅಪ್ಪ ಫ್ಯಾಮಿಲಿ ಟ್ರಸ್ಟ್ ದಾಸೋಹ ಮಹಾಮನೆ ಶರಣ ಬಸವೇಶ್ವರ ಸಂಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಮಾತೆ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಬುದ್ಧರು ಕೂಡ ಹೆಣ್ಣು ಮಕ್ಕಳ ಸಮಾನತೆಗಾಗಿ ಹೋರಾಡಿದ್ದರು. ನಂತರದಲ್ಲಿ ಬಸವಣ್ಣವರೂ ಕೂಡ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ಒದಗಿಸಲು ಶ್ರಮಿಸಿದರು. ಆದರೆ ಆ ಪ್ರಯತ್ನಗಳು ಸಫಲವಾಗಲಿಲ್ಲ. ನಂತರದಲ್ಲಿ ಸಾವಿತ್ರಿಬಾಯಿ ಫುಲೆ ಅವರು, ಸಮಾಜದಲ್ಲಿ ಸತಿಸಹಗಮನ, ಅಸ್ಪೃಶ್ಯತೆ ಹಾಗೂ ಅಜ್ಞಾನಗಳ ವಿರುದ್ಧ ಹೋರಾಡುವ ಮೂಲಕ ಮಹಿಳೆಯರಿಗೆ ಸಮಾನತೆ ಒದಗಿಸಲು ಯತ್ನಿಸಿದರು’ ಎಂದು ಹೇಳಿದರು.

‘ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ 371(ಜೆ) ಅನ್ನು ಸಮರ್ಪಕವಾಗಿ ಜಾರಿಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಈ ಭಾಗದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ‘ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಸಮಾನತೆಗಾಗಿ ಹೋರಾಟ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತದೆ. ಆದರೆ ನಮ್ಮ ಭಾಗದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಮುನ್ನುಡಿ ಬರೆದವರು 7ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪನವರು. ಅವರು ಮೊದಲ ಬಾರಿಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ 1930ರಲ್ಲಿ ಮಹಾದೇವಿ ಕನ್ಯಾ ಪ್ರೌಢಶಾಲೆ ಸ್ಥಾಪಿಸಿದರು. ಇದನ್ನು ಕಂಡ ಕೆಲವರು ನಿಜಾಮರಿಗೆ ದೂರು ನೀಡಿದರು. ನಿಜಾಮರ ಅಧಿಕಾರಿಗಳು ಬಂದು ಪರಿಶೀಲಿಸಿ, ವರದಿ ನೀಡಿದರು. ದೊಡ್ಡಪ್ಪ ಅಪ್ಪನವರ ಕಾರ್ಯವನ್ನು ನಿಜಾಮರು ಸ್ವಾಗತಿಸಿದರು. ನಂತರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಗೋದುತಾಯಿ ಪಿಯು, ಪದವಿ ಕಾಲೇಜು ಹಾಗೂ ವಿ.ಜಿ.ಮಹಿಳಾ ಕಾಲೇಜು ಆರಂಭಿಸಲಾಯಿತು. ಇನ್ನು ಮುಂದೆಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ಹೇಳಿದರು.

‘ಕಲ್ಯಾಣ ಕರ್ನಾಟಕದಲ್ಲಿ ಹುದ್ದೆಗಳ ಭರ್ತಿಗೆ 371(ಜೆ) ನಿಯಮವೊಂದರ ಪ್ರಕಾರ ಆರ್ಥಿಕ ನಿಷೇಧವಿಲ್ಲ. ಹೀಗಾಗಿ ಈ ಭಾಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಶೇ 100ರಷ್ಟು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿದರೆ ಉತ್ತಮ ಫಲಿತಾಂಶ ತರುತ್ತೇವೆ’ ಎಂದು ಹೇಳಿದರು.

ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಸೇವಂತಾ ಚವಾಣ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ವರ್ಷಿನಿ ಭರತನಾಟ್ಯ ಪ್ರದರ್ಶನ ನೀಡಿದರು.

ಪ್ರಶಸ್ತಿ ಪುರಸ್ಕೃತರು:

ಅನ್ನಪೂರ್ಣ ಸಂಗೊಳಗಿ, ಬಾಬುರಾವ ಕುಲಕರ್ಣಿ, ಮಲ್ಲಮ್ಮ ಪಟ್ಟಣಕರ, ಅಮರಸಿಂಗ್ ಠಾಕೂರ, ಗೌರೆ ರಾಜಶೇಖರ, ನಾಗರಾಜ ಅಂಗಡಿ, ಕಾಂತಪ್ಪ ಪಾಟೀಲ, ಶಿಲ್ಪಾ ಬಿರಾದಾರ, ಉದಯಕುಮಾರ, ಪಿ.ಬಿ.ನೂಲಾ, ರಾಚಮ್ಮ ಈಶ್ವರ, ಮಲ್ಲಿನಾಥ ಶಾಸ್ತ್ರಿ, ಶಿವಶರಣಪ್ಪ ಮಂಠಾಳೆ, ಹೊನ್ನಪ್ಪ ಕೋನಿ, ರಾಘವೇಂದ್ರ ಕಲ್ಯಾಣಕರ, ಶ್ರೀಧರ ನಾಗನಹಳ್ಳಿ, ವೀರೇಂದ್ರ ಪಾಟೀಲ, ಡಾ.ಪನೌತಿ ಅವರಿಗೆ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶರಣಬಸವ ವಿವಿಯ ಡೀನ್ ಲಕ್ಷ್ಮಿ ಪಾಟೀಲ ಮಾಕಾ, ಡಿಡಿಪಿಐ ಶಂಕ್ರಮ್ಮ ಡವಳಗಿ, ನಾಗಪ್ಪ ಹೊನ್ನಳಿ, ಸತೀಶಕುಮಾರ ಜಾಮಗೊಂಡ, ಮಹೇಶ ಹೂಗಾರ, ವಿಜಯಕುಮಾರ ತೇಗಲತಿಪ್ಪಿ, ಪರಮೇಶ್ವರ ಓಕಳಿ, ನಂದಿನಿ ಸನಬಾಳ, ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘದ ವಿವಿಧ ತಾಲ್ಲೂಕುಗಳ ಪದಾಧಿಕಾರಿಗಳು, ವಿವಿಧ ತಾಲ್ಲೂಕುಗಳ ಶಿಕ್ಷಕರು, ಶಿಕ್ಷಕಿಯರು ಪಾಲ್ಗೊಂಡಿದ್ದರು.