ಕಮಲನಗರ: ತಾಲ್ಲೂಕಿನ ಮದನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು. ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಮುಖ್ಯಶಿಕ್ಷಕಿ ಮುಮತಾಜ್ ಬೇಗಂ ಪೂಜೆ ಸಲ್ಲಿಸಿದರು.

ಶಿಕ್ಷಕಿ ಸುನೀತಾ ಆದೆಪ್ಪ ಮಾತನಾಡಿ, ‘ಭಾರತೀಯ ಸಮಾಜ ಲಿಂಗಬೇಧದ ಅಸಮಾನತೆಯಲ್ಲಿ ಬಳಲುತ್ತಿದ್ದಾಗ, ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸಿದ್ದ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಫುಲೆ ಶೋಷಿತರಿಗೆ ಅಕ್ಷರದ ಬೆಳಕು ನೀಡಿದ ಮೊದಲ ಮಹಿಳಾ ಶಿಕ್ಷಕಿ’ ಎಂದು ಹೇಳಿದರು.

ಶಿಕ್ಷಕರಾದ ಕೌಶಲ್ಯ, ಪದ್ಮಾವತಿ ಭವರಾ, ಇಂದುಮತಿ ಕಾಳೆ, ಬಂಟಿ ರಾಂಪುರೆ ಹಾಜರಿದ್ದರು.

ಖತಗಾಂವ ಸರ್ಕಾರಿ ಶಾಲೆ: ತಾಲ್ಲೂಕಿನ ಖತಗಾಂವ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಹಿರಿಯ ಶಿಕ್ಷಕಿ ಮಲ್ಲಮ್ಮ ಕಸ್ತೂರೆ ಪೂಜೆ ಸಲ್ಲಿಸಿದರು.

ಶಿಕ್ಷಕ ಸಿದ್ರಾಮಪ್ಪ ಬಿರಾದಾರ, ಅತಿಥಿ ಶಿಕ್ಷಕ ಮಹಾದೇವ ಬಿರಾದಾರ, ರಚಿತಾ ಗುಡಮೆ, ಪೂಜಾ ಸ್ವಾಮಿ, ಪ್ರತಿಕ್ಷಾ ವಾನಖೇಡೆ, ಕಲ್ಪನಾ ಸ್ವಾಮಿ, ಅಡುಗೆ ಸಿಬ್ಬಂದಿಗಳಾದ ಸಂಗೀತಾ ಬಿರಾದಾರ, ರೇಖಾ, ರಂಜನಾ ಹಾಗೂ ಮಕ್ಕಳು ಹಾಜರಿದ್ದರು.

ಭಾಗೀರಥಿ ಪಬ್ಲಿಕ್ ಶಾಲೆ: ಸ್ತ್ರೀಯರಿಗೆ ಶೈಕ್ಷಣಿಕವಾಗಿ ಪ್ರೇರಣೆಯಾದ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಹೇಳಿದರು.

ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಸಾವಿತ್ರಿಬಾಯಿ ಫುಲೆ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಮಲ್ಲಿಕಾರ್ಜುನ ಮೇತ್ರೆ, ಶ್ರೀದೇವಿ ಸೋನಕಾಂಬಳೆ, ದೀಪಮಾಲಾ ಸೂರ್ಯವಂಶಿ, ಅಂಬಿಕಾ ಗಾಯಕವಾಡ, ಯೋಗೇಶ್ವರಿ ಮದನೂರಕರ್, ಅಶ್ವೀನಿ, ಪಂಚಫುಲಾ ಹಾಗೂ ಶಾಲೆ ಮಕ್ಕಳು ಇದ್ದರು.

ಲತಾ ಮಂಗೇಶ್ಕರ್ ಶಾಲೆ: ಪಟ್ಟಣದ ಲತಾ ಮಂಗೇಶ್ಕರ್ ಕನ್ಯಾ ಪ್ರೌಢ ಶಾಲೆಯಲ್ಲಿ ಶನಿವಾರ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಮುಖ್ಯಶಿಕ್ಷಕ ಅನಿಲಕುಮಾರ ಬಿರಾದಾರ ಅವರು, ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಶಿಕ್ಷಕರಾದ ಸಂಗಮೇಶ ಉದಗೀರೆ, ರಾಮ ಜಾಧವ, ದಿಲೀಪ ಸಂತಪುರೆ, ರಾಜೇಂದ್ರ ಲಸ್ಕರೆ, ಸರಸ್ವತಿ ಮಹಾಜನ, ಕಾವೇರಿ, ಶ್ರೀದೇವಿ ಮೇತ್ರೆ, ಅನೀಲ ಶಿಂದೆ ಹಾಗೂ ಮಕ್ಕಳು ಹಾಜರಿದ್ದರು.

ಶಾಂತಿವರ್ಧಕ ಪಿಯುಕಾಲೇಜು: ಪಟ್ಟಣದ ಶಾಂತಿವರ್ಧಕ ಪ.ಪೂ ಕಾಲೇಜಿನಲ್ಲಿ ಶನಿವಾರ ಸಾವಿತ್ರಿಬಾಯಿ ಫುಲೆ ಜನ್ಮದಿನ ಆಚರಿಸಲಾಯಿತು. ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪ್ರಾಚಾರ್ಯ ಶಿವಾಜಿ .ಆರ್.ಎಚ್ ಪೂಜೆ ಸಲ್ಲಿಸಿ ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಿಜಯಕುಮಾರ ವಾರದ, ಉಪನ್ಯಾಸಕರಾದ ಓ.ಕೆ.ಸೂರ್ಯವಂಶಿ, ನಾಗನಾಥ ಕೊಳ್ಳ, ಕಾಳಿದಾಸ ಬೌದ್ಧೆ, ವೆಂಕಟ ಮೋರೆ, ಶ್ರೀಕಾಂತ ಪ್ಯಾಗೆ, ಸುನೀಲ, ಶಿವಶಂಕರ ವಾಡೇಕರ್, ಶಿವಕುಮಾರ ಪಾಟೀಲ, ಶಿವಶಂಕರ ಕಾಂಬಳೆ, ಬಸವಾಂಬಿಕಾ, ಕಾದಂಬಿನಿ ಮೇತ್ರೆ, ವಿಯಲಕ್ಷ್ಮೀ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.