ಬಸವಕಲ್ಯಾಣ: ತಾಲ್ಲೂಕಿನ ಕಿಟ್ಟಾ ಗ್ರಾಮದಲ್ಲಿ ಶನಿವಾರ ರಾತ್ರಿ ಕಳ್ಳರು ಐದು ಮನೆಗಳಿಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳ್ಳತನ ನಡೆದಿದೆ. ಎರಡು ಮನೆಗಳಲ್ಲಿನ ಸೂಟ್ ಕೇಸ್ ಹಾಗೂ ಇತರೆಡೆ ಇಟ್ಟಿದ್ದ ಚಿನ್ನಾಭರಣ ಕಳ್ಳರ ಕೈಗೆ ಸಿಕ್ಕಿದೆ. ಆದರೆ ಇನ್ನುಳಿದ ಮೂರು ಮನೆಗಳಲ್ಲಿ ಏನೂ ಸಿಗಲಿಲ್ಲ ಎನ್ನಲಾಗಿದೆ. ಸುಧಾಕರ, ಶೌಕತ್, ಸವಿತಾ, ಶ್ರೀನಿವಾಸ ಎನ್ನುವವರ ಮನೆಗಳಲ್ಲಿ ಕಳ್ಳತನ ನಡೆದಿದೆ.
ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಅಧಿಕಾರಿಗಳು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.