ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಕರಿಗೆ ಕೀರ್ತಿ ತನ್ನಿ: ಡಿವೈಎಸ್‍ಪಿ ಬಸವೇಶ್ವರ ಹೀರಾ ಸಲಹೆ

ವಿ.ಕೆ. ಇಂಟರ್‌ನ್ಯಾಷನಲ್‍ನಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ
Last Updated 1 ಜನವರಿ 2021, 14:00 IST
ಅಕ್ಷರ ಗಾತ್ರ

ಬೀದರ್: ‘ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಉತ್ತುಂಗದ ಸಾಧನೆ ಮಾಡುವ ಮೂಲಕ ಪಾಲಕರಿಗೆ ಕೀರ್ತಿ ತರಬೇಕು’ ಎಂದು ಡಿವೈಎಸ್‍ಪಿ ಬಸವೇಶ್ವರ ಹೀರಾ ಸಲಹೆ ಮಾಡಿದರು.

ನಗರದ ವಿ.ಕೆ. ಇಂಟರ್‌ನ್ಯಾಷನಲ್‍ನಲ್ಲಿ ಶುಕ್ರವಾರ 2021ನೇ ಸಾಲಿನ ದಿನದರ್ಶಿಕೆ, ದಿನಚರಿ ಬಿಡುಗಡೆ ಹಾಗೂ ವಿ.ಕೆ. ಇಂಟರ್‌ನ್ಯಾಷನಲ್‍ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಛಲವಿದ್ದರೆ ಏನನ್ನು ಬೇಕಾದರೂ ಸಾಧನೆ ಮಾಡಬಹುದು’ ಎಂದು ತಿಳಿಸಿದರು.

‘ಬಸವ ತತ್ವ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಬಹಳಷ್ಟು ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಇದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವ ತತ್ವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜಿನಾಥ ಕಮಠಾಣೆ ಮಾತನಾಡಿ, ‘ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡಲು 38 ವರ್ಷಗಳ ಹಿಂದೆ ಶುರು ಮಾಡಿದ ಸಂಸ್ಥೆ ಇಂದು ಬೃಹತ್ತಾಗಿ ಬೆಳೆದಿದೆ. ಸಂಸ್ಥೆಯ ಅಡಿಯಲ್ಲಿ ನರ್ಸರಿಯಿಂದ ಹಿಡಿದು ಪದವಿ, ವಿವಿಧ ವೃತ್ತಿಪರ ಕೋರ್ಸ್‍ಗಳ ಶಾಲಾ ಕಾಲೇಜುಗಳು ಇವೆ’ ಎಂದು ತಿಳಿಸಿದರು.

ಮಕ್ಕಳು ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೃದಯ ರೋಗ ತಜ್ಞ ಡಾ. ಚಂದ್ರಕಾಂತ ಗುದಗೆ ನುಡಿದರು.

ಕೊರೊನಾ ಸೋಂಕು ತಡೆಗೆ ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದರು.

ಸಂಚಾರ ಠಾಣೆ ಸಿಪಿಐ ವಿಜಯಕುಮಾರ ಬಿರಾದಾರ ಅವರು ಸಂಚಾರ ನಿಯಮಗಳ ಕುರಿತು ಉಪನ್ಯಾಸ ನೀಡಿದರು.

ಡಿವೈಎಸ್‍ಪಿ ಬಸವೇಶ್ವರ ಹೀರಾ(ಪೊಲೀಸ್ ಸೇವೆ), ಹೃದಯ ರೋಗ ತಜ್ಞ ಡಾ. ಚಂದ್ರಕಾಂತ ಗುದಗೆ(ಆರೋಗ್ಯ ಸೇವೆ) ಹಾಗೂ ಪತ್ರಕರ್ತ ಮಲ್ಲಿಕಾರ್ಜುನ ನಾಗರಾಳೆ(ಮಾಧ್ಯಮ ಸೇವೆ) ಅವರಿಗೆ ವಿ.ಕೆ. ಇಂಟರ್ ನ್ಯಾಷನಲ್-2021 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಬಸವ ತತ್ವ ಶಿಕ್ಷಣ ಸಂಸ್ಥೆಯ ಕಟ್ಟಡ ದಾನಿ ಲಕ್ಷ್ಮೀಬಾಯಿ ಕಮಠಾಣೆ ಅವರ 76ನೇ ಜನ್ಮದಿನ ಆಚರಿಸಲಾಯಿತು. ವಿದ್ಯಾರ್ಥಿಗಳು, ಪಾಲಕರು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸಿಹಿ, ಟೀ ಮಗ್, ದಿನದರ್ಶಿಕೆ ಹಾಗೂ ದಿನಚರಿ ವಿತರಿಸಲಾಯಿತು.

ಮಾರ್ಕೇಟ್ ಠಾಣೆ ಸಿಪಿಐ ಮಲ್ಲಮ್ಮ ಚೌಬೆ, ಮಹಿಳಾ ಠಾಣೆ ಸಿಪಿಐ ಯಶವಂತ, ಬೀದರ್ ಗ್ರಾಮೀಣ ಠಾಣೆ ಸಿಪಿಐ ಶ್ರೀಕಾಂತ ಅಲ್ಲಾಪುರ, ಟೌನ್ ಪೊಲೀಸ್ ಠಾಣೆ ಸಿಪಿಐ ಬಿ.ಎನ್. ರಾಜಣ್ಣ, ಮುಖಂಡ ಶರಣಪ್ಪ ಬಲ್ಲೂರ್, ಬಸವ ತತ್ವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದಿಲೀಪ್ ಕಮಠಾಣೆ, ನಿರ್ದೇಶಕಿ ವೈಶಾಲಿ ಕಮಠಾಣೆ, ದೀಕ್ಷಾ ಕಮಠಾಣೆ, ಪದವಿ ಕಾಲೇಜು ಪ್ರಾಚಾರ್ಯೆ ಶಿವಲೀಲಾ ಟೊಣ್ಣೆ, ಶಾಲಾ ಆಡಳಿತಾಧಿಕಾರಿ ಜಿನ್ಸ್ ಕೆ. ಥಾಮಸ್, ಮುಖ್ಯ ಶಿಕ್ಷಕಿ ರೋಶನಿ ಕೆ. ಥಾಮಸ್, ಶಿವರಾಜ ರೊಟ್ಟೆ, ವೈಜಿನಾಥ ಬಾಬಶೆಟ್ಟಿ, ಜಗದೀಶ ಹಿಬಾರೆ, ವೀರೇಂದ್ರ ಜಿಂದೆ, ರವಿ ದೇವಾ, ಪ್ರದೀಪ್ ಗಾಜಲ್, ಝರಣಪ್ಪ ಹೊಸಳ್ಳಿ, ರಾಜೇಶ್ವರಿ ಕುದರೆ, ಪರಶುರಾಮ ಸಿಂಧೆ ಇದ್ದರು.

ಲಕ್ಷ್ಮೀಬಾಯಿ ಕಮಠಾಣೆ ಬಿ.ಎಡ್. ಕಾಲೇಜು ಪ್ರಾಚಾರ್ಯ ಧನರಾಜ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ಮಹಮ್ಮದ್ ಯುನೂಸ್ ನಿರೂಪಿಸಿದರು. ಉಪ ಪ್ರಾಚಾರ್ಯ ನಾಗೇಶ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT