ಶನಿವಾರ, ಮೇ 15, 2021
25 °C

ಬೀದರ್: ಕೋವಿಡ್‌ನಿಂದ ಎರಡು ದಿನಗಳಲ್ಲಿ ಏಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲೆಯಲ್ಲಿ ಕೋವಿಡ್‌ನಿಂದಾಗಿ ಎರಡು ದಿನಗಳ ಅವಧಿಯಲ್ಲಿ ಒಬ್ಬ ಮಹಿಳೆ ಸೇರಿ ಒಟ್ಟು ಏಳು ಜನ ಮೃತಪಟ್ಟಿರುವುದನ್ನು ಆರೋಗ್ಯ ಇಲಾಖೆ ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ದೃಢಪಡಿಸಿದೆ.

ಏಪ್ರಿಲ್‌ 13ರಿಂದ 17ರ ವರೆಗಿನ ಅವಧಿಯಲ್ಲಿ ಬೀದರ್‌ನ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಏಳು ಜನ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.

ಏ.13ರಂದು 30 ಹಾಗೂ 54 ವರ್ಷದ ಇಬ್ಬರು. 14 ರಂದು 75 ವರ್ಷದ ಪುರುಷ, 53 ವರ್ಷದ ಮಹಿಳೆ, 16 ರಂದು 48, 17 ರಂದು 55 ವರ್ಷದ ಪುರುಷ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು, ಗಂಟಲು ಮಾದರಿ ಪಡೆದಾಗ ವೈದ್ಯಕೀಯ ವರದಿ ಪಾಸಿಟಿವ್‌ ಬಂದಿತ್ತು.

ನಾಲ್ವರು ಏ.18ರಂದು ಮೃತಪಟ್ಟರೆ, ಮಹಿಳೆ ಸೇರಿ ಮೂವರು ಏ.19 ರಂದು ಮೃತಪಟ್ಟಿದ್ಧಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.