ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದುಳಿದವರ ರಾಜ ಶಾಹು ಮಹಾರಾಜ: ಸತೀಶಕುಮಾರ ಮುಳೆ

Published 27 ಜೂನ್ 2024, 16:09 IST
Last Updated 27 ಜೂನ್ 2024, 16:09 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜ ಅವರು, ದೀನ ದಲಿತರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ‘ಹಿಂದುಳಿದವರ ರಾಜ’ ಎಂದೇ ಗುರುತಿಸಿಕೊಂಡಿದ್ದರು’ ಎಂದು ಶಿವಛತ್ರಪತಿ ಸ್ಮಾರಕ ಸಮಿತಿ ಕಾರ್ಯದರ್ಶಿ ಸತೀಶಕುಮಾರ ಮುಳೆ ಹೇಳಿದರು.

ನಗರದ ಜೀಜಾಮಾತಾ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್ಎಸ್ಎಲ್‌ಸಿ, ಪಿಯುಸಿ ಮತ್ತು ಸಿಇಟಿ ವಿದ್ಯಾರ್ಥಿಗಳ ಸನ್ಮಾನ ಹಾಗೂ ಶಾಹು ಮಹಾರಾಜ ಜಯಂತಿಯಲ್ಲಿ ಅವರು ಮಾತನಾಡಿದರು.

‘ಡಾ.ಅಂಬೇಡ್ಕರ್ ಅವರ ಶಿಕ್ಷಣಕ್ಕಾಗಿ ಸಹಾಯಗೈದರು. ದುರ್ಬಲ ವರ್ಗದ ಮಕ್ಕಳಿಗಾಗಿ ವಸತಿ ನಿಲಯ ಆರಂಭಿಸಿದರು. ಮೀಸಲಾತಿ ಕಲ್ಪಿಸಿದರು’ ಎಂದು ಹೇಳಿದರು.

ಪುಣೆಯ ಪಠ್ಯಪುಸ್ತಕ ರಚನೆ ಮತ್ತು ಸಂಶೋಧನಾ ಮಂಡಳಿ ಸದಸ್ಯ ಸುಧೀರ ಕಾಂಬಳೆ ಮಾತನಾಡಿ, ‘ಶಾಹು ಮಹಾರಾಜರು ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ತಂದರು. ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿದರು’ ಎಂದು ಹೇಳಿದರು.

ಉಪನ್ಯಾಸಕ ನರಸಿಂಗರೆಡ್ಡಿ ಗದ್ಲೇಗಾಂವ, ಮುಖಂಡರಾದ ಅರ್ಜುನ ಕನಕ, ಮನೋಹರ ಮೈಸೆ, ಎಂ.ಎಂ. ತಂಬಾಕೆ, ರಿತೇಶ ಸೂರ್ಯವಂಶಿ, ಪ್ರತಾಪ ಸೂರ್ಯವಂಶಿ, ಬಾಲಾಜಿ ಬಿರಾದಾರ, ಪ್ರಕಾಶ ದಾಡಗೆ, ಭರತ ಬರಮ್ದೆ ಮಾತನಾಡಿದರು.

ಬಟ್ಟೆ ಅಂಗಡಿ ಭಸ್ಮವಾಗಿ ಹಾನಿ ಅನುಭವಿಸಿದ ಸುನಿತಾ ಬಿರಾದಾರ ಅವರಿಗೆ ₹ 50 ಸಾವಿರ ಧನಸಹಾಯ ನೀಡಲಾಯಿತು.

ವಿದ್ಯಾರ್ಥಿಗಳಾದ ಆದಿತ್ಯ ಮತ್ತು ಆಕಾಶ ಅವರಿಗೆ ಬಹುಮಾನ ವಿತರಿಸಲಾಯಿತು.

ಮೀರಾ ಸತೀಶಕುಮಾರ ಮುಳೆ, ಎಂ.ಕೆ.ಗಾದಗೆ, ರಮೇಶ ಬೆಜಗಂ, ದಿಲೀಪ ಶಿಂಧೆ, ಶಂಕರ ನಾಗದೆ, ದೀಪಕ ನಾಗದೆ, ವಾರೀಸ್ ಅಲಿ, ಸಂಭಾಜಿ ಜಗತಾಪ, ರಾಜಕುಮಾರ ಭೋಸ್ಲೆ, ಧನರಾಜ ರಾಜೋಳೆ, ದಯಾನಂದ ಸೂರ್ಯವಂಶಿ, ರಮೇಶ ಬಿರಾದಾರ, ವಿಶ್ವನಾಥ ಪಾರಶೆಟ್ಟೆ, ಅನಿತಾ ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT