ಕಮಲನಗರ: ‘ಮಣ್ಣಿನ ಫಲವತ್ತತೆ ಕಾಪಾಡಿಕೊಂಡರೆ ಉತ್ತಮ ಇಳುವರಿ ಪಡೆಯಲು ಸಾಧ್ಯ’ ಎಂದು ಬೀದರ್ನ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಬಸವರಾಜ ಬಿರಾದಾರ ಹೇಳಿದರು.

ತಾಲ್ಲೂಕಿನ ಗಂಗನಬೀಡ್ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ನಡೆದ ಒಂದು ದಿನದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ಕೃಷಿ ಭೂಮಿಯ ಮಣ್ಣಿನಲ್ಲಿ ಪೋಷಕಾಂಶಗಳು ಪರಿಪೂರ್ಣವಾಗಿದ್ದರೆ ಬೆಳೆಗಳು ಆರೋಗ್ಯವಾಗಿ ಬೆಳೆಯುತ್ತದೆ. ಅದನ್ನು ಸೇವಿಸುವವರ ಆರೋಗ್ಯ ಕೂಡ ಹಸನಾಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ಸಾವಯವ ಪದಾರ್ಥಗಳನ್ನು ಕಾಲ ಕಾಲಕ್ಕೆ ಮಣ್ಣಿಗೆ ಸೇರಿಸಿ ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಪೋಷಕಾಂಶ ಬೆಳೆಸಿ ಅದಕ್ಕೆ ಅನುಗುಣವಾಗಿ ಬೆಳೆ ಬೆಳೆಯುವ ಪದ್ಧತಿಯನ್ನು ರೈತರು ಅಳವಡಿಸಿಕೊಂಡರೆ ಅಧಿಕ ಇಳುವರಿಯ ಜೊತೆಗೆ ಆರ್ಥಿಕ ಲಾಭ ಗಳಿಸಲು ಸಹಕಾರಿಯಾಗಲಿದೆ’ ಎಂದು ಹೇಳಿದರು.

ಸಹಾಯಕ ತೋಟಗಾರಿಕೆ ಅಧಿಕಾರಿ ಕಾಶಿನಾಥ ರಾಠೋಡ ತೊಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯ ಕುರಿತು ಮಾಹಿತಿ ನೀಡಿದರು.

ಸಹಾಯಕ ಕೃಷಿ ನಿದೇಶಕ ರಾಜಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೃಷಿ ಅಧಿಕಾರಿ ಶಿವಾನಂದ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಪಾಂಡುರಂಗ ಪಾಟೀಲ, ಗ್ರಾ.ಪಂ.ಸದಸ್ಯ ಸಂತೋಷ ಜಾಧವ, ರೈತರಾದ ಅಂಕೋಶ ವಾಡೇಕರ್, ರಾಜಕುಮಾರ, ಶುಭಂ ಪಾಟೀಲ, ಜಗದೀಶ ಪಾಟೀಲ, ನಾಗನಾಥ ಸ್ವಾಮಿ, ರೋಹಿದಾಸ ಪಾಟೀಲ, ಬಾಬುರಾವ ಬಿರಾದಾರ, ಅಂಕುಶ ಪಾಟೀಲ, ತುಕಾರಾಮ ಬಿರಾದಾರ, ರಾಜಕುಮಾರ ಬಿರಾದಾರ, ಲಕ್ಷ್ಮಣರಾವ ವಾಡೇಕರ್, ಕಿಶನ ಪಾಟೀಲ, ಅವಿನಾಶ ಪಾಟೀಲ, ಧನರಾಜ ವಾಡೇಕರ್, ಮಹೇಶ ವಾಡೇಕರ್, ಗೋವಿಂದ, ದಿಗಂಬರ, ರಾಮ, ಬಾಲಾಜಿ, ರಘುನಾಥ ರಾಠೋಡ, ಲಕ್ಷ್ಮಣ ಮೇತ್ರೆ ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.