ಗುರುವಾರ , ಜೂನ್ 30, 2022
25 °C

ಸೋನಾಳ: ಬೆಂಕಿಗೆ ಜೋಳದ ಬಣವೆ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ತಾಲ್ಲೂಕಿನ ಸೋನಾಳ ಗ್ರಾಮದ ಮುನೀರ ಅವರ ಹೊಲದಲ್ಲಿನ ಜೋಳ ಬಣವೆ ಭಾನುವಾರ ಮಧ್ಯಾಹ್ನ ಬೆಂಕಿಗೆ ಆಹುತಿಯಾಗಿದೆ.

‘ರೈತ ಮುನೀರ್ 4 ಕಿ.ಮೀ. ದೂರದ ಹೊರಂಡಿ ಗ್ರಾಮದಿಂದ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜೋಳದ ಕಣಕಿ ತಂದು ಹೊಲದಲ್ಲಿ ಇಟ್ಟಿದ್ದರು. ಊಟ ಮಾಡಿದ ನಂತರ ಜೋಳದ ಬಣವಿ ಕೂಡಿಡೋಣ ಎಂದು ಮನೆಗೆ ತೆರಳಿದ್ದರು. ಮರಳಿ ಬರುವಷ್ಟರಲ್ಲಿಯೇ ಬಣವಿಗೆ ಬೆಂಕಿ ಹತ್ತಿ ಸಂಪೂರ್ಣ ಭಸ್ಮವಾಗಿದೆ’ ಎಂದು ಗ್ರಾಮದ ಮುಖಂಡ ಅಂಕುಶ ಅವರು ತಿಳಿಸಿದರು.

‘ಇದರಿಂದ ₹15 ಸಾವಿರ ನಷ್ಟವಾಗಿದೆ. ಸರ್ಕಾರ ಬಡ ರೈತ ಮುನೀರ ಅವರಿಗೆ ಪರಿಹಾರ ಒದಗಿಸಿಕೊಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.