ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಯಾಗೆ ಬಸವನ ಹುಳು ಬಾಧೆ

ನಿರ್ವಹಣಾ ಕ್ರಮ ಅನುಸರಿಸಲು ರೈತರಿಗೆ ಸಲಹೆ
Last Updated 3 ಜುಲೈ 2022, 13:44 IST
ಅಕ್ಷರ ಗಾತ್ರ

ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಯಾ ಅವರೆ ಬೆಳೆಯಲ್ಲಿ ಬಸವನ ಹುಳುವಿನ ಬಾಧೆ ಕಂಡು ಬಂದಿದೆ.

ಜನವಾಡ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನಡೆಸಿದ ಬೆಳೆ ಸಮೀಕ್ಷೆ ವೇಳೆ ಬಸವನ ಹುಳುವಿನ ಬಾಧೆ ಇರುವುದು ಪತ್ತೆಯಾಗಿದೆ.

ಔರಾದ್ ತಾಲ್ಲೂಕಿನ ಕೌಠಾ, ವಡಗಾಂವ್, ಭಾಲ್ಕಿ ತಾಲ್ಲೂಕಿನ ನಿಟ್ಟೂರು, ಗೋರನಾಳ, ಹಜನಾಳ, ಬಾಳೂರ, ಬೀದರ್ ತಾಲ್ಲೂಕಿನ ಜನವಾಡ ಪ್ರದೇಶದಲ್ಲಿ ಬಸವನ ಹುಳುವಿನ ಬಾಧೆ ಕಂಡು ಬಂದಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದ್ದಾರೆ.

ಬಸವನ ಹುಳುಗಳು ಬೆಳೆಯುವ ಗಿಡದ ದೇಟು, ಕಾಂಡ, ತೊಗಟೆ, ಎಲೆಗಳನ್ನು ಕೆರೆದು ತಿನ್ನುತ್ತವೆ. ಪೀಡೆ ಬಾಧೆ ಜಾಸ್ತಿಯಾದಲ್ಲಿ ರೈತರು ಮತ್ತೊಮ್ಮೆ ಬಿತ್ತನೆ ಕೈಗೊಳ್ಳಬೇಕಾಗಬಹುದು ಎಂದು ಹೇಳಿದ್ದಾರೆ.

ರೈತರು ಹುಳುಗಳ ನಿರ್ವಹಣೆಗಾಗಿ ಅವುಗಳ ಅಡಗು ತಾಣಗಳಾದ ಹುಲ್ಲು, ಕಸಕಡ್ಡಿಗಳನ್ನು ಆಯ್ದು ಹೊಲ ಸ್ವಚ್ಛವಾಗಿಸಬೇಕು. ಹೊಲದಲ್ಲಿ ಅಲ್ಲಲ್ಲಿ ಹಾಕುವ ಕೃಷಿ ತ್ಯಾಜ್ಯಗಳ ಗುಂಪುಗಳನ್ನು ಸುಟ್ಟು ಹಾಕಬೇಕು. ಹೊಲದ ನಡೆದಾಡುವ ಕಟ್ಟೆಯ ಆರಂಭದಲ್ಲಿ ಹರಳು ಉಪ್ಪು ಸುರಿಯಬೇಕು. ಸಂಜೆ ಅಥವಾ ಬೆಳಗಿನ ವೇಳೆ ಹುಳುಗಳನ್ನು ಕೈಯಿಂದ ಆರಿಸಿ ಗೋಣಿ ಚೀಲದಲ್ಲಿ ಹಾಕಿ, ಅವುಗಳ ಮೇಲೆ ಉಪ್ಪು ಸುರಿದು ನಾಶಪಡಿಸಬಹುದು ಎಂದು ಸಲಹೆ ನೀಡಿದ್ದಾರೆ.

ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನೆಸಿದ ಗೋಣಿ ಚೀಲ ಹರಡಬೇಕು. ಹುಳುಗಳ ಮೇಲೆ ಬ್ಲೀಚಿಂಗ್ ಪುಡಿ (8-10 ಕಿ.ಗ್ರಾಂ. ಪ್ರತಿ ಎಕರೆಗೆ) ಧೂಳೀಕರಿಸಿ ನಾಶಪಡಿಸಬಹುದು.
ಮೆಟಾಲ್ಡಿಹೈಡೆಡ್ (2.5 ಶೇ) ಮಾತ್ರೆಗಳನ್ನು ಎಕರೆಗೆ 2 ಕಿ.ಗ್ರಾಂ ನಂತೆ ಹೊಲದಲ್ಲಿ ಎರೆಚಿ, ಹುಳುಗಳನ್ನು ಆಕರ್ಷಿಸಿ ನಾಶಪಡಿಸಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT