ಚಿಟಗುಪ್ಪ (ಹುಮನಾಬಾದ್): ತಾಲ್ಲೂಕಿನ ಬಸೀರಾಪೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ ನಾಗಪ್ಪ ಕರಕನ್ನಳ್ಳಿ ಅವರ ವರ್ಗಾವಣೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು, ಪಾಲಕರು ಶಾಲೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ಪಾಟೀಲ ಮಾತನಾಡಿ,‘ಯಾವುದೇ ಕಾರಣಕ್ಕೂ ನಮ್ಮ ನೆಚ್ಚಿನ ಕನ್ನಡ ಶಿಕ್ಷಕ ನಾಗಪ್ಪ ಕರಕನ್ನಳ್ಳಿ ಅವರನ್ನು ಬೇರೆಡೆ ವರ್ಗಾವಣೆ ಮಾಡಬಾರದು. ಅವರ ವರ್ಗಾವಣೆ ಆದೇಶವನ್ನು ಈ ಕೂಡಲೇ ರದ್ದುಗೊಳಿಸಬೇಕು. ಆದೇಶ ಹಿಂಪಡೆಯುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದರು.

ವಿಷಯ ತಿಳಿದು ಬಿಇಒ ವೆಂಕಟೇಶ ಗೂಡಾಳ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು, ಪಾಲಕರ ಬಳಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದಾಗ ಪ್ರತಿಭಟನೆ ನಿಲ್ಲಿಸಿದರು.

ಈ ಸಂದರ್ಭದಲ್ಲಿ ರಾಜಕುಮಾರ, ದೇವೇಂದ್ರ, ಬಲವಂತ, ವಿಜಯಕುಮಾರ, ವೇಣುಗೋಪಾಲ, ಮೋಸಿನ್, ಇಂದ್ರಶೇಖರ, ಶಿವಕುಮಾರ, ರಾಜಕುಮಾರ, ಕಲಪ್ಪ, ಕಿಸನ್, ಶಿವಪುತ್ರ, ಲೋಕೇಶ, ರವಿ, ಭಗವಂತ, ನಾಗೇಶ, ಆಕಾಶ, ಸತೀಶ, ಸಂಗಮೇಶ, ವೀರಶೆಟ್ಟಿ, ಧನರಾಜ, ಸಂಜು, ಅನೀಲ ಹಾಗೂ ರಮೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.