ಬೀದರ್: ಸ್ಪರ್ಧಾಗುರು ಐಎಎಸ್ ಆ್ಯಂಡ್ ಕೆಎಎಸ್ ಸ್ಟಡಿ ಸೆಂಟರ್ ವತಿಯಿಂದ ಇಲ್ಲಿಯ ಕುಂಬಾರವಾಡ ಕಮಾನ್ ಎದುರುಗಡೆಯ ಸನ್ ಸಾಫ್ಟ್ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಟಿಇಟಿ ಉಚಿತ ಮಾದರಿ ಪರೀಕ್ಷೆಗೆ ಜಿಲ್ಲೆಯ 150 ಅಭ್ಯರ್ಥಿಗಳು ಹಾಜರಾದರು.
ತಲಾ 30 ಅಂಕಗಳ ಮನೋವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ವಿಜ್ಞಾನ, ಇವಿಎಸ್, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ವಿಷಯಗಳ ಪರೀಕ್ಷೆಗಳನ್ನು ಬರೆದರು.

ಟಿಇಟಿ ಪರೀಕ್ಷೆ ಬರೆಯಲಿರುವ ಜಿಲ್ಲೆಯ ಅಭ್ಯರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಟಿಇಟಿ ಉಚಿತ ಮಾದರಿ ಪರೀಕ್ಷೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಪ್ರತಿ ಭಾನುವಾರ ಮಾದರಿ ಪರೀಕ್ಷೆ ನಡೆಸಲಾಗುವುದು. ಆಸಕ್ತರು ಮೊಬೈಲ್ ಸಂಖ್ಯೆ 8105332701, 81053272820ಗೆ ಸಂಪರ್ಕಿಸಬಹುದು ಎಂದು ಸೆಂಟರ್ನ ನಿರ್ದೇಶಕ ಅಮೀತ್ ಸೋಲಪುರೆ ತಿಳಿಸಿದರು.
ಸೆಂಟರ್ ಸಂಚಾಲಕ ರಮೇಶ ಮರ್ಜಾಪುರ, ಉಪನ್ಯಾಸಕರಾದ ಜಗನ್ನಾಥ ಶಿವಗೊಂಡ, ಮಿಲಿಂದ ಗುಪ್ತಾ, ಸಿ.ಕೆ. ಚಾರಿ, ರಾಮಲಿಂಗ ಬಾಳೂರೆ, ಜಗನ್ನಾಥ ಕಮಲಾಪುರೆ, ದೇವಿಪ್ರಸಾದ ಕಲಾಲ್, ಅರ್ಪಣಾ ಹಿರೇಮಠ, ಕಾಶೀನಾಥ ಮುರಾರಿ, ಧನರಾಜ, ಸುಧಾಕರ ಮೇತ್ರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.