ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ-ಕೆವೈಸಿ ಸಂಗ್ರಹಣೆ ಕಾರ್ಯಕ್ಕೆ ಕಾಲಾವಕಾಶ

ಮಾಹಿತಿ ಪೂರೈಸಲು ಪಡಿತರ ಚೀಟಿದಾರರಿಗೆ ಮನವಿ
Last Updated 13 ಜನವರಿ 2021, 12:28 IST
ಅಕ್ಷರ ಗಾತ್ರ


ಬೀದರ್‌: ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹಣೆಯ ಕಾರ್ಯಕ್ಕೆ ಪ್ರತಿ ದಿನ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ತಿಳಿಸಿದ್ದಾರೆ.

ಇ-ಕೆವೈಸಿ ಮಾಹಿತಿ ಸಂಗ್ರಹಣೆ ಕಾರ್ಯವನ್ನು ಮಾಡುವುದಕ್ಕಾಗಿ ಸರ್ಕಾರವು ನ್ಯಾಯಬೆಲೆ ಅಂಗಡಿಯವರಿಗೆ ಹಣ ಪಾವತಿ ಮಾಡುತ್ತಿದೆ. ಆದ್ದರಿಂದ ಪಡಿತರ ಚೀಟಿದಾರರು ಈ ಪ್ರಕ್ರಿಯೆಗೆ ಯಾವುದೇ ಹಣ ಸಂದಾಯ ಮಾಡುವ ಅವಶ್ಯಕತೆ ಇರುವುದಿಲ್ಲ. ಇದೂ ಸಂಪೂರ್ಣ ಉಚಿತವಾಗಿದೆ ಎಂದು ಹೇಳಿದ್ದಾರೆ,

ಪಡಿತರ ಚೀಟಿಗಳ ಎಲ್ಲ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇ-ಕೆವೈಸಿ ಕೊಡದ ಪಡಿತರ ಚೀಟಿಯಲ್ಲಿಯ ಸದಸ್ಯರಿಗೆ ಮುಂಬರುವ ದಿನಗಳಲ್ಲಿ ಪಡಿತರ ಲಭ್ಯವಾಗುವುದಿಲ್ಲ. ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲ ಕುಟುಂಬ ಸದಸ್ಯರೆಲ್ಲರು ನ್ಯಾಯಬೆಲೆ ಅಂಗಡಿಗೆ ಹೋಗಿ ಆಧಾರ್ ವಿವರ ದೃಢೀಕರಿಸುವ ಹಾಗೂ ಬಯೋಮೆಟ್ರಿಕ್ ನೀಡುವ ಕಾರ್ಯವನ್ನು ಕೋವಿಡ್-19ರ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಈಗ ಸದರಿ ಈ-ಕೆವೈಸಿ ಕಾರ್ಯ ಮರು ಪ್ರಾರಂಭಿಸುವ ಬಗ್ಗೆ ನಿರ್ದೇಶನಗಳ ಬಂದಿದ್ದು, ಇ-ಕೆವೈಸಿ ಮಾಡುವಾಗ ಪಡಿತರ ಚೀಟಿದಾರರ ಈ ಕೆಲ ಅಂಶಗಳನ್ನು ಆಹಾರ ಇಲಾಖೆಯ ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ತಿಳಿಸಿದ್ದಾರೆ.

ಬಯೋ ದೃಢಿಕರಣ (ಬೆರಳಚ್ಚು ಹೊಂದಾಣಿಕೆ), ಪಡಿತರ ಚೀಟಿಯಲ್ಲಿ ಕುಟುಂಬದ ಹಿರಿಯ ಮಹಿಳೆಯನ್ನು ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಡಿತರ ಚೀಟಿದಾರರು ತಮ್ಮ ಕುಟುಂಬದ ಒಬ್ಬ ಸದಸ್ಯರ ಆರ್‌ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಡುಗೆ ಅನಿಲ ಸಂಪರ್ಕ (ಗ್ಯಾಸ್ ಸಿಲಿಂಡರ್) ಹೊಂದಿರುವ ಮಾಹಿತಿ ಸಲ್ಲಿಸಬೇಕು. ಸದಸ್ಯರು ಹೊಂದಿರುವ ಮೊಬೈಲ್ ಸಂಖ್ಯೆ ತಿಳಸಬೇಕು. ಪಡಿತರ ಚೀಟಿಯಲ್ಲಿನ ಸದಸ್ಯರು ಮರಣ ಹೊಂದಿರುವ, ಎಂಡೋಸಲ್ಫಾನ್ ಪೀಡಿತ, ವಯೋವೃದ್ಧ, ಕುಷ್ಠ ರೋಗ ಇತ್ಯಾದಿ ಕಾರಣಗಳಿಂದಾಗಿ ಬೆರಳಚ್ಚು ಹೊಂದಾಣಿಕೆ ಮಾಡಲು ಮತ್ತು ಬರಲು ಆಗದೇ ಇದ್ದಲ್ಲಿ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT