ಬೀದರ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2022-23ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಿದ್ದ ಜನಪರ ಉತ್ಸವದಲ್ಲಿ ದೇಸಿ ಕಲೆಗಳು ಅನಾವರಣಗೊಂಡವು.
ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳ ಪರಿಶಿಷ್ಟ ಜಾತಿಯ ಕಲಾವಿದರು ತಮ್ಮ ಕಲೆಗಳ ಪ್ರದರ್ಶನ ನೀಡಿ ಸಂಭ್ರಮಿಸಿದರೆ, ಪ್ರೇಕ್ಷಕರು ಪುಳಕಿತಗೊಂಡರು.

ಬೀದರ್ನ ದಾವೀದ್ ಮತ್ತು ತಂಡದ ನಾಡಗೀತೆ, ರಾಮನಗರದ ಚಕ್ಕೇರಿ ಲೋಕೇಶ, ಬೀದರ್ನ ಸುನೀಲ್ ಕಡ್ಡೆ ಹಾಗೂ ತಂಡ, ಶೇಷರಾವ್ ಬೆಳಕುಣಿ ಮತ್ತು ತಂಡ, ಶಿವಾಜಿ ಮಾನಕರೆ ಹಾಗೂ ತಂಡ, ಶಿವರಾಜ ತಡಪಳ್ಳಿ ಮತ್ತು ತಂಡದ ಕ್ರಾಂತಿ ಗೀತೆ, ಬೀದರ್ನ ಶಂಭುಲಿಂಗ ವಾಲ್ದೊಡ್ಡಿ ಮತ್ತು ತಂಡದ ಸುಗಮ ಸಂಗೀತ, ಎಸ್.ಬಿ. ಕುಚಬಾಳ ಹಾಗೂ ತಂಡದ ತತ್ವಪದ, ಶಂಕರ ಚೊಂಡಿ ಮತ್ತು ತಂಡದ ಹಂತಿ ಪದಗಳು, ಬಕ್ಕಪ್ಪ ದಂಡಿನ್ ಹಾಗೂ ತಂಡದ ಹೋರಾಟ ಹಾಡುಗಳು, ರಮೇಶ ದೊಡ್ಡಿ ಮತ್ತು ತಂಡದ ವಚನ ಗಾಯನ, ಚಿನ್ನಮ್ಮ ಹಾಗೂ ತಂಡದ ಸಾಂಪ್ರದಾಯಿಕ ಪದ, ವಾಣಿ ಮತ್ತು ತಂಡದ ದೇಶ ಭಕ್ತಿ ಗೀತೆ, ಸಚಿನ್ ಮತ್ತು ತಂಡದ ರಂಗ ಗೀತೆ, ಯಾದಗಿರಿಯ ವಿಶಾಲ್ ಹಾಗೂ ತಂಡ, ಬೀದರ್ನ ವಿಜಯಕುಮಾರ ಸೋನಾರೆ ಮತ್ತು ತಂಡ, ರಮೇಶ ಸುರೇಂದ್ರ, ಜೀವನ್, ದಿಗಂಬರ್, ನಾಗಪ್ಪ ಹಾಗೂ ತಂಡದ ಜಾನಪದ ಗಾಯನ, ಲಕ್ಷ್ಮೀಬಾಯಿ ಮತ್ತು ತಂಡದ ಭಜನೆ, ಮರಕಲ್ನ ನಾಗಮ್ಮ ಮತ್ತು ತಂಡ, ಚಿಕ್ಕಪೇಟೆಯ ಬಸಮ್ಮ ಹಾಗೂ ತಂಡದ ಬುಲಾಯಿ ಪದಗಳು ಸಭಿಕರನ್ನು ಮಂತ್ರಮುಗ್ಧಗೊಳಿಸಿದವು.

ಎಂ.ಎಸ್. ಮನೋಹರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ‘ದುಶ್ಚಟಗಳ ದುಷ್ಪರಿಣಾಮ’ ನಾಟಕವು ದುಶ್ಚಟಗಳ ದುಷ್ಪರಿಣಾಮಗಳ ಜಾಗೃತಿ ಮೂಡಿಸಿತು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಅಂಬೇಡ್ಕರ್ ವೃತ್ತ, ಜನರಲ್ ಕಾರ್ಯಪ್ಪ ವೃತ್ತ, ಕನ್ನಡಾಂಬೆ ವೃತ್ತದ ಮಾರ್ಗವಾಗಿ ರಂಗಮಂದಿರದ ವರೆಗೆ ಕಲಾ ತಂಡಗಳ ಭವ್ಯ ಮೆರವಣಿಗೆ ನಡೆಯಿತು.

ಮುಖವಾಡ, ಲಮಾಣಿ ನೃತ್ಯ, ಮಹಿಳಾ ತಮಟೆ, ಹೆಜ್ಜೆ ಮೇಳ, ತಮಟೆ, ಕೋಲಾಟ, ಬ್ಯಾಂಡ್ ವಾದನ, ತಮಟೆ ವಾದನ, ಹಲಗೆ ತಮಟೆ, ಸುಗ್ಗಿ ಕುಣಿತ, ಭಜನೆ ಪದ, ಕೋಲಾಟ ತಂಡಗಳ ಪ್ರದರ್ಶನ ಮೆರವಣಿಗೆಯ ವೈಭವ ಹೆಚ್ಚಿಸಿತು.
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು, ಮುಖಂಡರಾದ ಮಾರುತಿ ಬೌದ್ಧೆ, ವಿಜಯಕುಮಾರ ಸೋನಾರೆ, ಶಶಿಧರ ಹೊಸಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಪಾಲ್ಗೊಂಡಿದ್ದರು.

ದೇಸಿ ಕಲೆಗೆ ಉತ್ತೇಜನ ಸಿಗಲಿ

ಮೊಬೈಲ್ ಕಾರಣ ಪ್ರಸ್ತುತ ದೇಸಿ ಕಲೆಗಳು ಅಲಕ್ಷ್ಯಕ್ಕೆ ಒಳಗಾಗುತ್ತಿವೆ. ಅವುಗಳಿಗೆ ಉತ್ತೇಜನ ಕೊಡಬೇಕಾದ ಅಗತ್ಯ ಇದೆ ಎಂದು ಜನಪರ ಉತ್ಸವವನ್ನು ಉದ್ಘಾಟಿಸಿದ ಶಾಸಕ ರಹೀಂಖಾನ್ ಹೇಳಿದರು.

ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ. ಜನಪರ ಉತ್ಸವದ ಮೂಲಕ ಕಲಾವಿದರಿಗೆ ವೇದಿಕೆ ಕಲ್ಪಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ಮಾಸಾಶನ ಸೇರಿದಂತೆ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾ ಆಡಳಿತ ಸಿದ್ಧವಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಸಾಹಿತಿ ಎಸ್.ಎಂ. ಜನವಾಡಕರ್, ಮುಖಂಡರಾದ ಫನಾರ್ಂಡೀಸ್ ಹಿಪ್ಪಳಗಾಂವ್, ಮಾರುತಿ ಬೌದ್ಧೆ, ರಾಮನಗರದ ಚಕ್ಕೇರಿ ಲೋಕೇಶ, ಎಸ್.ಬಿ. ಕುಚಬಾಳ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.