ಬಸವಕಲ್ಯಾಣ: ‘ಬಸವಾದಿ ಶರಣರು 12ನೇ ಶತಮಾನದಲ್ಲಿ ವಚನಗಳನ್ನು ರಚಿಸಿದ ಈ ಸ್ಥಳದಲ್ಲಿ ಸಾಹಿತ್ಯ ಸಂಶೋಧನಾ ಕೇಂದ್ರ ಅಗತ್ಯವಾಗಿತ್ತು’ ಎಂದು ಸಾಹಿತಿ ಗೋ.ರು.ಚನ್ನಬಸಪ್ಪ ಹೇಳಿದರು.

ನಗರದ ಬಂದವರ ಓಣಿ ಸಭಾಭವನದಲ್ಲಿ ಗಡ್ಡೆ ಪರಿವಾರದಿಂದ ನಡೆದ ಲಿಂಗದೀಕ್ಷೆ ಮತ್ತು ಶರಣ ಭಾರತ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಗುರುನಾಥ ಗಡ್ಡೆ ಮತ್ತು ಪ್ರೊ.ವಿಜಯಲಕ್ಷ್ಮೀ ಗಡ್ಡೆ ದಂಪತಿಗಳ ನೇತೃತ್ವದಲ್ಲಿ ಈ ಕೇಂದ್ರ ಶರಣ ಸಾಹಿತ್ಯದ ಸಂಶೋಧನೆ ಮತ್ತು ಪ್ರಕಟಣೆಗೆ ಆದ್ಯತೆ ನೀಡಲಿ’ ಎಂದರು.

ಧಾರವಾಡದ ಅಶೋಕ ಬರಗುಂಡೆ ಮಾತನಾಡಿ, ‘ವಚನಗಳ ಅಧ್ಯಯನ ಮತ್ತು ಲಿಂಗಾಂಗ ಯೋಗ ಪ್ರತಿಯೊಬ್ಬರು ಮಾಡುವುದು ಅವಶ್ಯಕ’ ಎಂದರು.

ರಂಜಾನ ದರ್ಗಾ ಮಾತನಾಡಿ, ‘ವಿಶ್ವ ಶಾಂತಿಗಾಗಿ ಬಸವತತ್ವದ ಪ್ರಸಾರ ಎಲ್ಲೆಡೆ ಆಗುವುದು ಅಗತ್ಯವಾಗಿದ್ದು ಸಂಘ ಸಂಸ್ಥೆಯವರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು’ ಎಂದರು.

ಅನುಭವ ಮಂಟಪದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಸಾಹಿತಿ ವೀರಣ್ಣ ರಾಜೂರ, ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ, ಕಲ್ಯಾಣರಾವ್ ಮದರಗಾಂವಕರ್, ಪ್ರೊ.ವಿಜಯಲಕ್ಷ್ಮಿ ಗಡ್ಡೆ, ಸಿದ್ಧಲಿಂಗ ಗಡ್ಡೆ ಮಾತನಾಡಿದರು. ಮುಖಂಡ ವೈಜನಾಥ ಕಾಮಶೆಟ್ಟಿ, ಶಿವರಾಜ ನರಶೆಟ್ಟಿ, ಬಾಬು ಹೊನ್ನಾನಾಯಕ, ಸಾವಿತ್ರಿ ಶರಣು ಸಲಗರ, ಸಿದ್ದು ಯಾಪಲಪರ್ವಿ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಅನಿಲಕುಮಾರ ರಗಟೆ, ಡಾ.ಜಿ.ಎಸ್.ಭುರಳೆ, ವೀರಣ್ಣ ಹಲಶೆಟ್ಟೆ, ಗುರುನಾಥ ಗಡ್ಡೆ ಉಪಸ್ಥಿತರಿದ್ದರು.

ವಚನಗ್ರಂಥ ಮತ್ತು ದಿನದರ್ಶಿಕೆ ಬಿಡುಗಡೆ ಮಾಡಲಾಯಿತು.

ಪಾಲಕರಿಂದ ಲಿಂಗದೀಕ್ಷೆ

ಕಾರ್ಯಕ್ರಮದಲ್ಲಿ ಡಾ.ಬಾಬಾಸಾಹೇಬ್ ಗಡ್ಡೆ ಮತ್ತು ಅಕ್ಕಮಹಾದೇವಿ ಅವರ ಮಕ್ಕಳಾದ ವಚನ ಮತ್ತು ವಿವೇಕ ಅವರಿಗೆ ಅಜ್ಜಿ ವಿಜಯಲಕ್ಷ್ಮಿ ಗಡ್ಡೆ ಲಿಂಗದೀಕ್ಷೆ ನೀಡಿರುವುದು ವಿಶೇಷವಾಗಿತ್ತು. ಬಳಿಕ ಅನುಭವ ಮಂಟಪದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ ‘ಗೃಹಸ್ಥರೇ ಲಿಂಗದೀಕ್ಷೆ ನೀಡಿರುವುದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಬಸವತತ್ವವೂ ಇದನ್ನೇ ಹೇಳುತ್ತದೆ. ಲಿಂಗಾಯತರು ಲಿಂಗಧರಿಸುವುದು ಅತ್ಯಂತ ಅವಶ್ಯಕ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.