ಬೀದರ್: ‘ವಿಶ್ವಧರ್ಮ ಪ್ರವಚನದ ಸಮಾರೋಪ ಮೇ 3ರಂದು ನಗರ ಹೊರವಲಯದ ಚಿಕಪೇಟ್‌ನಲ್ಲಿ ನಡೆಯಲಿದೆ’ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏ.12ರಂದು ಆರಂಭವಾದ ಪ್ರವಚನ ಮೇ 3ರಂದು ಕೊನೆಗೊಳ್ಳಲಿದೆ. ಅದೇ ದಿನ ರಾಷ್ಟ್ರೀಯ ಬಸವ ದಳ ಚಿಕಪೇಟ್ ಶಾಖೆ ಕೂಡ ಉದ್ಘಾಟಿಸಲಾಗುವುದು’ ಎಂದು ವಿವರಿಸಿದರು.

ಸಮಾರೋಪ ಸಮಾರಂಭವನ್ನು ಡಾ.ಎಸ್.ಎಸ್.ಸಿದ್ದಾರೆಡ್ಡಿ ಫೌಂಡೇಶನ್ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಉದ್ಘಾಟಿಸುವರು. ಉದಗೀರ, ಲಾತೂರ, ಹೈದರಾಬಾದ್, ಜಹೀರಾಬಾದ್, ಕಲಬುರಗಿ ಹಾಗೂ ಬೀದರ್ ಜಿಲ್ಲೆಯ ವಿವಿಧ ರಾಷ್ಟ್ರೀಯ ಬಸವ ದಳಗಳ ಸುಮಾರು ಎರಡು ಸಾವಿರಕ್ಕೂ ಅಧಿಕ ಶರಣ-ಶರಣೆಯರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಸಮಾರಂಭದ ನೇತೃತ್ವವನ್ನು ಬಸವ ಮಂಟಪದ ಮಾತೆ ಸತ್ಯಾದೇವಿ ವಹಿಸುವರು. ಮರಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈಶ್ವರಮ್ಮ ಬಸವರಾಜ, ತೆಲಂಗಾಣ ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷ ವಿಜಯಕುಮಾರ ಪಟ್ನೆ, ಉದ್ಯಮಿ ಚಂದ್ರಶೇಖರ ಹೆಬ್ಬಾಳೆ, ಪತ್ರಕರ್ತ ಮಾಳಪ್ಪ ಅಡಸಾರೆ, ರಾಜಕುಮಾರ ಹೆಬ್ಬಾಳೆ ಸೇರಿದಂತೆ ಇನ್ನಿತರರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ಅಶೋಕ ಪಾಟೀಲ ಚಿಕ್ಕಪೇಟ್, ಬಸವಂತರಾವ ಬಿರಾದಾರ, ಬಸವರಾಜ ಪಾಟೀಲ ಚಿಕಪೇಟ್, ಮಲ್ಲಿಕಾರ್ಜುನ ಜೈಲರ್, ನಾಗಶೆಟ್ಟಿ ರಾಂಪೂರೆ, ಶಶಿಕುಮಾರ ಪಾಟೀಲ, ಶಂಕರ ಪಾಟೀಲ, ರವಿಕಾಂತ ಬಿರಾದಾರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.