ಅಷ್ಟೂರ(ಜನವಾಡ): ಬೀದರ್ ತಾಲ್ಲೂಕಿನ ಅಷ್ಟೂರ ಗ್ರಾಮದ ಪ್ರಗತಿ ಪರ ರೈತ ಶಿವಕುಮಾರ ನಾಗಲಗಿದ್ದಿ ಅವರ ಹೊಲದಲ್ಲಿ ಬಯರ್ ಫೆಮಿನಿಸ್ ಕಂಪನಿ ವತಿಯಿಂದ ಶುಕ್ರವಾರ ಕಲ್ಲಂಗಡಿ ಬೆಳೆ ಕ್ಷೇತ್ರೋತ್ಸವ ನಡೆಯಿತು.

ಈ ವೇಳೆ ಮಾತನಾಡಿದ ಕಂಪನಿ ಅಧಿಕಾರಿಗಳು, ‘ಉತ್ತಮ ಆದಾಯ ತಂದು ಕೊಡುವ ದಿಲ್ಕುಷ್ ತಳಿಯ ಕಲ್ಲಂಗಡಿ ಬೆಳೆಯಲು ಬೀದರ್ ಜಿಲ್ಲೆ ಸೂಕ್ತವಾಗಿದೆ. 65ರಿಂದ 70 ದಿನಗಳಲ್ಲಿ ಕಟಾವಿಗೆ ಬರುವ ಈ ತಳಿ ಎಕರೆಗೆ 25ರಿಂದ 30 ಟನ್ ಇಳುವರಿ ಕೊಡಲಿದೆ. ಜಿಲ್ಲೆಯಲ್ಲಿ ಅನೇಕ ರೈತರು ದಿಲ್ಕುಷ್ ತಳಿ ಕಲ್ಲಂಗಡಿ ಬೆಳೆದಿದ್ದಾರೆ’ ಎಂದು ಹೇಳಿದರು.

ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಸೋಮನಾಥ, ಅರುಣ್, ಪಿಕೆಪಿಎಸ್ ಅಧ್ಯಕ್ಷ ಶಿವಕುಮಾರ ಪಾಟೀಲ, ಶಶಿಧರ ಪಾಟೀಲ, ಸಂಗಮೇಶ, ವಿನೋದ, ಹನುಮಂತ, ಸಂತೋಷ್ ಭಾವಿಕಟ್ಟಿ, ಪಾಂಡುರಂಗ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.