ಆಹಾರ ಕಿಟ್‌ಗೆ ಕಾರ್ಮಿಕರ ಪರದಾಟ

ಔರಾದ್: ‘ಆಹಾರ ಸಾಮಗ್ರಿ ಕಿಟ್‍ಗಾಗಿ ಕಾರ್ಮಿಕರು ದಿನವಿಡೀ ಕಾಯಿಸುವುದು ಸರಿಯಲ್ಲ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಪಟ್ಟಣದ ಕೃಷಿ ತರಬೇತಿ ಕೇಂದ್ರದಲ್ಲಿ ಬುಧವಾರ ಆಹಾರ ಕಿಟ್‍ಗಾಗಿ ಕಾರ್ಮಿಕರು ಜಮಾಯಿಸಿದ್ದರು. ಸ್ಥಳಕ್ಕೆ ಆಗಮಿಸಿದ ಯುವ ಕಾಂಗ್ರೆಸ್‍ನ ಸುಧಾಕರ್ ಕೊಳ್ಳೂರ್, ದತ್ತಾತ್ರಿ ಬಾಪುರೆ, ಶರಣಪ್ಪ ಪಾಟೀಲ ಕಾರ್ಮಿಕ ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ‘ಕಿಟ್ ಕೊಡುವುದಾಗಿ ಕಾರ್ಮಿಕರಿಗೆ ಏಕೆ ಇಲ್ಲಿ ಕರೆಸಿದ್ದೀರಿ?’ ಎಂದು ತಕರಾರು ತೆಗೆದರು.
ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರು ಕೆಲವೇ ಕಾರ್ಮಿಕರಿಗೆ ಆಹಾರ ಕಿಟ್ ಕೊಟ್ಟು ಹೋದ ನಂತರ ಒಬ್ಬರಿಗೂ ಕಿಟ್ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳಕ್ಕೆ ಸಂಬಂಧಿತರು ಬಂದು ಇಲ್ಲಿಯ ಎಲ್ಲ ಕಾರ್ಮಿಕರಿಗೆ ಆಹಾರದ ಕಿಟ್ ಹೊಡುವಂತೆ ಆಗ್ರಹಿಸಿದರು.
‘ಕಿಟ್ ಪಡೆಯಲು ನಾವು ಯಾರಿಗೂ ಬರುವಂತೆ ಹೇಳಿಲ್ಲ. ನಮ್ಮಲ್ಲಿ ನೋಂದಾಯಿತ ಕಾರ್ಮಿಕರ ಪಟ್ಟಿ ಇದೆ. ಗ್ರಾಮ ಪಂಚಾಯಿತಿವಾರು ವಿತರಣೆಗೆ ವ್ಯವಸ್ಥೆ ಮಾಡಿದ್ದೇವೆ. ಯಾರು ಕೃಷಿ ತರಬೇತಿ ಕೇಂದ್ರದ ಬಳಿ ಕೂಡಬಾರದು’ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.