ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪನಪುರ ಪಿಎಸಿಸಿಗೆ ₹5.37 ಲಕ್ಷ ಲಾಭ

2022–23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ
Published 21 ಸೆಪ್ಟೆಂಬರ್ 2023, 14:52 IST
Last Updated 21 ಸೆಪ್ಟೆಂಬರ್ 2023, 14:52 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಕೆಂಪನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಉತ್ತಮವಾಗಿ ವಹಿವಾಟು ನಡೆಸಿ ₹5.37 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ. ಶಿವಶಂಕರ್ ತಿಳಿಸಿದರು.

ಸಮೀಪದ ಕೆಂಪನಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ ಬುಧವಾರ ನಡೆದ 2022–23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಪ್ರಸಕ್ತ ವರ್ಷದಲ್ಲಿ 398 ಸದಸ್ಯರಿಗೆ ₹ 4.60 ಕೋಟಿ ಸಾಲ ನೀಡಲಾಗಿದೆ. ಗೃಹ ಬಳಕೆಯ ಸಾಲಾವಾಗಿ 219 ಸದಸ್ಯರಿಗೆ ₹ 57 ಲಕ್ಷ ಸಾಲ ನೀಡಲಾಗಿದೆ. ಸಂಘವು 1500 ಸದಸ್ಯರನ್ನು ಹೊಂದಿದೆ. ಅಲ್ಲದೇ 500 ಷೇರುಗಳನ್ನು ಪಡೆದು ಸಂಘವು ಇನ್ನು ಹೆಚ್ಚಿನ ಆರ್ಥಿಕ ಲಾಭವನ್ನು ಹೊಂದಿದೆ ಎಂದರು.

ಸಂಘದ ಅಭಿವೃದ್ದಿಗಾಗಿ ಅಪೆಕ್ಸ್ ನಿಂದ ₹ 5 ಲಕ್ಷ ಅನುದಾನ ಬಂದಿದೆ. ಮುಂದಿನ ದಿನಗಳಲ್ಲಿ ಸಂಘದ ಎಲ್ಲ ಸದಸ್ಯರಿಗೆ ಸಾಲ ನೀಡುವ ಉದ್ದೇಶದಿಂದ ಹೆಚ್ಚಿನ ಸಾಲ ನೀಡುವಂತೆ ಮನವಿ ಮಾಡಿಕೊಂಡಿದ್ದೇವೆ. ಸಾಲ ಪಡೆದುಕೊಂಡಿರುವ ಸದಸ್ಯರು ಸಕಾಲದಲ್ಲಿ ಮರು ಪಾವತಿ ಮಾಡಿ, ಸರ್ಕಾರದ ಶೂನ್ಯ ಬಡ್ಡಿದರ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇತರೇ ಉದ್ದೇಶಕ್ಕೆ ಸಾಲ ಪಡೆದುಕೊಂಡಿರುವ ಸದಸ್ಯರು ನಿಗಧಿತ ಅವಧಿಯಲ್ಲಿ ಸಾಲವನ್ನು ಮರುಪಾವತಿ ಮಾಡಿ ಹೆಚ್ಚುವರಿ ಬಡ್ಡಿ ಹೊರೆಯಿಂದ ಪಾರಾಗಬೇಕು. ಪಿಗ್ಮಿ ಸೌಲಭ್ಯವನ್ನು ನೀಡಿದ್ದು, ನಿಮ್ಮ ಗ್ರಾಮಗಳಿಗೆ ಏಜೆಂಟ್ ಬಂದು ಹಣ ಕಟ್ಟಿಸಿಕೊಳ್ಳಲಿದ್ದಾರೆ. ಇದರ ಪ್ರಯೋಜವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಉಪಾಧ್ಯಕ್ಷ ಕೆ.ಎಂ.ನಾಗರಾಜು, ನಿರ್ದೇಶಕರಾದ ಕೆ.ಎಂ.ಗುರುಸಿದ್ದಪ್ಪ, ಕೆ.ಎಂ.ಪ್ರಭುಸ್ವಾಮಿ, ಪಿ.ರಾಮಸ್ವಾಮಿ, ದೊಡ್ಡಮಾರಶೆಟ್ಟಿ, ಪಿ.ಕುಮಾರಸ್ವಾಮಿ, ಕೆ.ಬಿ.ನಾರಾಯಣಸ್ವಾಮಿ, ಬಂಗಾರನಾಯಕ, ಚಿನ್ನಸ್ವಾಮಿ, ಪ್ರಭಾಮಣಿ, ಶೋಭಾಮೂರ್ತಿ, ಮಮತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT