ಯಳಂದೂರು: ‘ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ದೇಶ ಪ್ರತಿನಿಧಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ’ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ತಾಲೂಕಿನ ಮೆಳ್ಳಹಳ್ಳಿಯ ಸರ್ಕಾರಿ ಆದರ್ಶ ಶಾಲೆಯ ಬಾಲಕಿಯರು ಮಧ್ಯಪ್ರದೇಶದ ಭೋಪಾಲ್ನಲ್ಲಿ ಡಿ.5ರಂದು ಆಯೋಜಿಸಿರುವ ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದನ್ನು ಅಭಿನಂದಿಸಿ ಅವರು ಮಾತನಾಡಿದರು.

ಅಭಿಜಾತ ಪರಂಪರೆಯ ಕಲೆಯಾದ ಕಂಸಾಳೆ ಕಲೆಯನ್ನು ಉತ್ತರ ಭಾರತದಲ್ಲಿ ಮಕ್ಕಳು ಪ್ರದರ್ಶಿಸಲಿದ್ದಾರೆ. 15 ವಿದ್ಯಾರ್ಥಿನಿಯರು ತರಬೇತಿ ಪಡೆದು ಸಜ್ಜಾಗಿದ್ದಾರೆ. ಯಾವುದೇ ಆತಂಕಕ್ಕೆ ಒಳಗಾಗದೆ ಬಾಲೆಯರು ಕರುನಾಡಿನ ಕೀರ್ತಿ ಪತಾಕೆ ಹಾರಿಸಲಿ ಎಂದರು.

ಶಾಸಕರು ಮಕ್ಕಳ ಕಂಸಾಳೆ ಮತ್ತು ನೃತ್ಯ ರಂಗ ಪರಿಕರಗಳನ್ನು ಖರೀದಿಸಲು 30 ಸಾವಿರ ಧನಸಹಾಯ ನೀಡಿ ಬೀಳ್ಕೊಟ್ಟರು.

ಮುಖ್ಯ ಶಿಕ್ಷಕ ಗುರುಮೂರ್ತಿ, ಪಿಯು ಕಾಲೇಜು ಪ್ರಾಂಶುಪಾಲ ತಿಮ್ಮರಾಜು, ನಾಟಕ ಶಿಕ್ಷಕ ಮಧುಕರ್, ಶಿಕ್ಷಕ ಬಿ.ಎಸ್. ವಿನಯ್, ರೇವಣ್ಣ, ನಂಜುಂಡಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ಕುಮಾರ್, ದುಂಡಯ್ಯ, ಸೋಮಣ್ಣ, ರಾಜಶೇಖರ್, ರೇವಣ್ಣ, ಮಲ್ಲಿಕಾರ್ಜುನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.