ಹನೂರು: ‘ಹೊಗೆನಕಲ್ ಜಲಪಾತದ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಅರಣ್ಯ ಇಲಾಖೆಯವರು ನಮಗೆ ತೆಪ್ಪ ನಡೆಸಲು ಅನುಮತಿ ನೀಡುತ್ತಿಲ್ಲ ’ ಎಂದು ತೆಪ್ಪ ನಡೆಸುವ ಸದಸ್ಯರು ದೂರಿದ್ದಾರೆ.

‘ ಇಲ್ಲಿನ ಜಲಪಾತದಲ್ಲಿ ಪ್ರತಿವರ್ಷ ನೀರಿನ ಪ್ರಮಾಣ ಜಾಸ್ತಿಯಾದಾಗ ತಾತ್ಕಾಲಿಕವಾಗಿ ತೆಪ್ಪ ಓಡಾಟಕ್ಕೆ ನಿರ್ಬಂಧ ಹೇರಲಾಗುತ್ತದೆ. ಅದೇ ರೀತಿ ಈ ವರ್ಷವೂ ತೆಪ್ಪ ಓಡಾಟಕ್ಕೆ ತಾತ್ಕಾಲಿಕವಾಗಿ ನಿ ನಿರ್ಬಂಧಿಸಲಾಗಿತ್ತು. ನೀರಿನ ಪ್ರಮಾಣ ಕಮ್ಮಿಯಾದ ಮೇಲೆ ತೆಪ್ಪ ನಡೆಸಲು ಅನುಮತಿ ನೀಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದರು. ಈಗ ನೀರಿನ ಪ್ರಮಾಣ ಕಮ್ಮಿಯಾಗಿದೆ ತೆಪ್ಪ ನಡೆಸಲು ಅನುಮತಿ ಕೇಳಿದರೆ ಹಿರಿಯ ಅಧಿಕಾರಿಗಳನ್ನು ಕೇಳಬೇಕು’ ಎಂದು ಸಬೂಬು ಹೇಳುತ್ತಿದ್ದಾರೆ.

‘ ತಮಿಳುನಾಡು ಭಾಗದಲ್ಲಿ ಈಗಾಗಲೇ ತೆಪ್ಪ ನಡೆಸಲು ಅನುಮತಿ ನೀಡಲಾಗಿದೆ. ಅದರಂತೆ ನಮ್ಮ ಭಾಗದಲ್ಲೂ ಅನುಮತಿ ನೀಡಬೇಕು ’ ಎಂದು ತೆಪ್ಪ ನಡೆಸುವ ತಂಡದ ಮಾಲೀಕ ಪಳನಿಸ್ವಾಮಿ ಆಗ್ರಹಿಸಿದ್ದಾರೆ.

‘ಪರಿಶೀಲಿಸಿ ಅನುಮತಿ’

ಕಾವೇರಿ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮರಿಸ್ವಾಮಿ ಮಾಹಿತಿ ನೀಡಿ ‘ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಕೇಳಲಾಗಿದೆ. ಅವರ ವರದಿ ಆಧರಿಸಿ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ತೆಪ್ಪ ನಡೆಸಲು ಅನುಮತಿ ನೀಡಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.