ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬುದ್ಧನ ಅಷ್ಟಾಂಗ ಮಾರ್ಗ ಪಾಲಿಸಿ: ಪಿಯಾ ಭಂತೇಜಿ

Published 23 ಮೇ 2024, 13:56 IST
Last Updated 23 ಮೇ 2024, 13:56 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದ ತ್ರಿರತ್ನ ಬುದ್ಧ ವಿಹಾರದಲ್ಲಿ ಗುರುವಾರ ಬುದ್ಧ ಪೂರ್ಣಿಮೆ ಆಚರಿಸಲಾಯಿತು.

ಬಿಕ್ಕು ಬೋಧಿ ಪಿಯಾ ಭಂತೇಜಿ ಪ್ರವಚನ ನೀಡಿ, ಗೌತಮ ಬುದ್ಧರು ಹುಟ್ಟಿದ, ಜ್ಞಾನೋದಯ ಹಾಗೂ ಪರಿನಿಬ್ಬಾಣ ಹೊಂದಿದ ಪವಿತ್ರ ದಿನ ಇದಾಗಿದೆ. ರಾಜನಾಗಿದ್ದರೂ ಅರಮನೆ ಬಿಟ್ಟು ಸತ್ಯವನ್ನು ಹುಡುಕಿ ಹೊರಟು ದುಃಖಕ್ಕೆ ಮೂಲವನ್ನು ಹುಡುಕಿ ಜನರಿಗೆ ಬೋಧಿಸಿದರು. ದುಃಖ ನಿವಾರಣೆಗಾಗಿ ಅಷ್ಟಾಂಗ ಮಾರ್ಗವನ್ನು ತೋರಿಸಿದ್ದಾರೆ. ಉತ್ತಮ ಆಲೋಚನೆ ಹಾಗೂ ಪರಿಶುದ್ಧ ಜೀವನದೊಂದಿಗೆ ಗೌತಮ ಬುದ್ಧರ ತತ್ವಗಳನ್ನು ಪಾಲಿಸಬೇಕು ಎಂದರು.

ನಾಡಿನಲ್ಲಿ ಶಾಂತಿ ನೆಲೆಸಲು ಬುದ್ಧರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಜತೆಗೆ ಬೌದ್ಧ ಅನುಯಾಯಿಗಳು ಹೆಚ್ಚಾಗಬೇಕು ಎಂದು ತಿಳಿಸಿದರು. ಅನ್ನದಾನ, ಆಹಾರದ ಕಿಟ್ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.


ಹೆಗ್ಗವಾಡಿ, ಯಲಕ್ಕೂರು, ಕಮರವಾಡಿ ಹಾಗೂ ಉಮ್ಮತ್ತೂರು ಗ್ರಾಮಗಳ ಉಪಾಸಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT