ಚಾಮರಾಜನಗರ: ನಗರ, ಪಟ್ಟಣ ವ್ಯಾಪ್ತಿಯ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳನ್ನು ನಿರ್ವಹಣೆ ಮಾಡದ ಪರಿಣಾಮ ಹಾವು, ಚೇಳು ಸಹಿತ ವಿಷ ಜಂತುಗಳ ಆವಾಸ ಸ್ಥಾನವಾಗಿದೆ. ನಾಯಿ, ಹಂದಿ ಹಾಗೂ ಬಿಡಾಡಿ ದನಗಳ ದೊಡ್ಡಿಯಾಗಿ ಬಳಕೆಯಾಗುತ್ತಿದೆ. ತ್ಯಾಜ್ಯ ವಿಲೇವಾರಿ ತಾಣಗಳಾಗಿ ಬದಲಾಗಿ ನಗರದ ಅಂದಗೆಡಿಸುತ್ತಿವೆ.

ಜಿಲ್ಲಾ ಕೇಂದ್ರ ಚಾಮರಾಜನಗರದ ನಗರಸಭೆ ವ್ಯಾಪ್ತಿಗೊಳಪಡುವ 31 ವಾರ್ಡ್ಗಳಲ್ಲಿ ಸಾವಿರಾರು ಖಾಲಿ ನಿವೇಶನಗಳಿದ್ದು, ಬಹುತೇಕ ನಿರ್ವಹಣೆ ಇಲ್ಲದಂತಾಗಿದೆ. ನಿವೇಶನಗಳ ಒಳಗೆ ಕಾಲಿಡಲಾಗದಷ್ಟು ಕಳೆ ಗಿಡಗಳು ತುಂಬಿವೆ. ವಿಎಚ್ಪಿ ಶಾಲೆಗೆ ಸಂಪರ್ಕ ಕಲ್ಪಿಸುವ ಚೆನ್ನಾಪುರದ ಮೋಳೆ ರಸ್ತೆಯ ಬದಿಯಲ್ಲಿರುವ ನಿವೇಶನಗಳಲ್ಲಿ ಜಾಲಿಮುಳ್ಳಿನ ಪೊದೆಗಳು ದಟ್ಟವಾಗಿ ಬೆಳೆದಿವೆ. ರಾತ್ರಿ ಈ ರಸ್ತೆಯಲ್ಲಿ ಸಂಚರಿಸಲು ನಾಗರಿಕರು ಭಯಪಡುತ್ತಿದ್ದಾರೆ.

ಹಳೆ ಹಾಗೂ ಹೊಸ ಹೌಸಿಂಗ್ ಬೋರ್ಡ್ ಬಡಾವಣೆ, ಬುದ್ಧನಗರ, ವಿವೇಕ ನಗರ, ರಾಮಸಮುದ್ರ, ಪ್ರಶಾಂತ್ ನಗರ, ಎಲ್ಐಸಿ ಬಡಾವಣೆ, ಕರಿ ನಂಜನಪುರ ಸಹಿತ ನಗರಕ್ಕೆ ಹೊಂದಿಕೊಂಡು ಬೆಳೆಯುತ್ತಿರುವ ಪ್ರಮುಖ ಬಡಾವಣೆಗಳಲ್ಲಿ ಖಾಲಿ ನಿವೇಶನಗಳು ಹೆಚ್ಚಾಗಿದ್ದು ಬಹುತೇಕ ನಿರ್ವಹಣೆ ಕೊರತೆ ಎದುರಿಸುತ್ತಿವೆ.

‘ಖಾಲಿ ನಿವೇಶನಗಳ ಪಕ್ಕದಲ್ಲಿ ವಾಸವಿರುವ ನಾಗರಿಕರ ಪಾಡು ಹೇಳತೀರದು. ಹಾವು, ಚೇಳು ಸಹಿತ ವಿಷಜಂತುಗಳು ಮನೆಯೊಳಗೆ ಬರುತ್ತಿವೆ. ರಾತ್ರಿಯ ಹೊತ್ತು ಮನೆಯಿಂದ ಹೊರಗೆ ಬರಲು ಸ್ಥಳೀಯರು ಭಯಪಡುತ್ತಿದ್ದಾರೆ. ಬಿಡಾಡಿ ದನಗಳು, ಹಂದಿ, ನಾಯಿಗಳು ಖಾಲಿ ನಿವೇಶನದೊಳಗೆ ಸೇರಿಕೊಂಡು ಕಿರಿಕಿರಿ ಉಂಟುಮಾಡುತ್ತವೆ’ ಎಂದು ದೂರುತ್ತಾರೆ ಚೆನ್ನಾಪುರದ ಮೋಳೆ ರಸ್ತೆಯಲ್ಲಿ ವಾಸವಿರುವ ಶ್ರೀನಿವಾಸ್.

ಖಾಲಿ ನಿವೇಶನಗಳಿಗೆ ಮಾಲೀಕರು ಕಾಂಪೌಂಡ್ ಹಾಗೂ ಬೇಲಿ ಹಾಕಿ ಭದ್ರ ಮಾಡದ ಪರಿಣಾಮ ತ್ಯಾಜ್ಯ ವಿಲೇವಾರಿ ತಾಣಗಳಾಗಿ ಮಾರ್ಪಟ್ಟಿವೆ. ರಾತ್ರಿ ಹಾಗೂ ಬೆಳಗಿನ ಹೊತ್ತು ಜನಸಂಚಾರ ಕಡಿಮೆ ಇರುವಾಗ ಕೆಲವರು ಹಸಿ ಹಾಗೂ ಒಣ ಕಸವನ್ನು ಖಾಲಿ ನಿವೇಶನದೊಳಗೆ ಸುರಿಯುತ್ತಿದ್ದು, ಅಕ್ಕಪಕ್ಕದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ‘ನಿತ್ಯ ಕಸ ಎಸೆಯುವವರನ್ನು ಕಾಯುವುದೇ ಕಾಯಕವಾಗಿದೆ. ಕಸ ಎಸೆಯುವಾಗ ಪ್ರಶ್ನಿಸಿದರೆ ನಿವೇಶನದ ಮಾಲೀಕರೇ ಕೇಳುವುದಿಲ್ಲ ಎಂದು ಜೋರು ಮಾಡುತ್ತಾರೆ. ಹಲವು ಬಾರಿ ಜಗಳಗಳು ನಡೆದಿದ್ದು , ಮಾನಸಿಕ ನೆಮ್ಮದಿಯೇ ಹಾಳಾಗಿದೆ’ ಎನ್ನುತ್ತಾರೆ ಪ್ರಗತಿ ನಗರದ ಮಹೇಶ್ವರಪ್ಪ.

‘ಹಳೆಯ ಮನೆಗಳನ್ನು ಕೆಡವಿದಾಗ ನಿರುಪಯುಕ್ತ ವಸ್ತು, ಗಾರ್ಬೇಜುಗಳನ್ನು ತಂದು ಹತ್ತಿರದ ಖಾಲಿ ನಿವೇಶನಗಳಲ್ಲಿ ಸುರಿಯಲಾಗುತ್ತಿದೆ. ಉಪಯೋಗಕ್ಕೆ ಬಾರದ ಥರ್ಮೊಕೋಲ್, ಹರಿದ ಹಾಸಿಗೆ, ದಿಂಬು, ಹಳೆಯ ಬಟ್ಟೆಗಳ ರಾಶಿಯನ್ನು ತಂದು ಹಾಕುತ್ತಾರೆ. ಇದರಿಂದ ಬಡಾವಣೆಯ ಅಂದಗೆಡುವುದರ ಜೊತೆಗೆ ಅನಾರೋಗ್ಯಕ್ಕೂ ಕಾಣವಾಗುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಹೊರವಲಯ ಹಾಗೂ ನಗರ ಪ್ರವೇಶಿಸುವ ಕಡೆಗಳಲ್ಲಿ ತ್ಯಾಜ್ಯದ ರಾಶಿ ಬಿದ್ದಿದೆ. ಜಿಲ್ಲಾ ಕ್ರೀಡಾಂಗಣದಿಂದ ಮುಂದೆ ಸಾಗಿದರೆ ಸಿಗುವ ರಿಂಗ್ ರಸ್ತೆಯ ಬದಿಗಳಲ್ಲಿ ಕಸ ಹರಡಿಕೊಂಡಿದ್ದು ದುರ್ವಾಸನೆ ಬೀರುತ್ತಿದೆ. ಪ್ಲಾಸ್ಟಿಕ್ ಕವರ್ಗಳು ರಸ್ತೆಯ ಮೇಲೆಲ್ಲ ಬಿದ್ದಿದ್ದು, ಜಾನುವಾರುಗಳ ಜೀವಕ್ಕೆ ಕಂಟಕ ಎದುರಾಗಿದೆ.

ವಿಷ ಜಂತುಗಳ ಕಾಟ: ಯಳಂದೂರು ಪಟ್ಟಣದ ಕೆಲವು ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು ವಿಷ ಜಂತುಗಳ ಆವಾಸವಾಗಿವೆ. ನಾಯಿಗಳು, ಹಂದಿಗಳು ವಾಸ ಮಾಡುವ ತಾಣಗಳಾಗಿ ಬದಲಾಗಿದೆ. ಮಳೆ ಬಂದರೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಾರೆ. ಆಶ್ರಯ ಬಡಾವಣೆ, ಗೌತಮ್ ಬಡಾವಣೆ, ಕುಂಬಾರ ಗುಂಡಿ ಹಾಗೂ ಬಳೆಪೇಟೆಯ ಕೆಲವು ಪ್ರದೇಶಗಳಲ್ಲಿ ಗಣೇಶನ ಕಡ್ಡಿ, ಮುಳ್ಳಿನ ಗಿಡಗಳು ಹುಲ್ಲು ಮತ್ತಿತರ ಕಳೆ ಸಸ್ಯಗಳು ಬೆಳೆದಿದ್ದು, ಪಟ್ಟಣದ ಅಂದಗೆಡಿಸಿವೆ.

ಕೊಳ್ಳೇಗಾಲ ನಗರದ ಬಹುಪಾಲು ಬಡಾವಣೆಗಳಲ್ಲಿ ಖಾಲಿ ನಿವೇಶನಗಳು ಹೆಚ್ಚಾಗಿದ್ದು ನಿರ್ವಹಣೆ ಕೊರತೆ ಎದುರಿಸುತ್ತಿವೆ. ಗಿಡಗಂಟಿಗಳು ಎತ್ತರಕ್ಕೆ ಬೆಳೆದಿದ್ದು ಹಂದಿ, ನಾಯಿ, ಹಾವುಗಳ ವಾಸಸ್ಥಳವಾಗಿದೆ. ಹೊಸ ಬಡಾವಣೆಗಳಲ್ಲಿ ಮೂಲಭೂತ ಕೊರತೆ ಕಾಡುತ್ತಿರುವುದರ ಜೊತೆಗೆ ಖಾಲಿ ನಿವೇಶನಗಳ ಸಮಸ್ಯೆಯೂ ಹೆಚ್ಚಾಗಿದೆ.

ಹೊಸ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳಲ್ಲಿ ಮನೆಯ ಎತ್ತರಕ್ಕೆ ಮುಳ್ಳಿನ ಪೊದೆ ಹಾಗೂ ಕಳೆ ಗಿಡಗಳು ಬೆಳೆದು ನಿಂತಿವೆ. ಬಡಾವಣೆಯ ಜನರು ಕಸ ಹಾಗೂ ತ್ಯಾಜ್ಯವನ್ನು ಇಲ್ಲಿಯೇ ತಂದು ಹಾಕುತ್ತಿದ್ದಾರೆ. ಇದರಿಂದ ರಾತ್ರಿಯ ಹೊತ್ತು ವಿಪರೀತ ಸೊಳ್ಳೆ ಕಾಟ ಅನುಭವಿಸುತ್ತಿದ್ದೇವೆ ಎಂದು ದೂರುತ್ತಾರೆ ನಿವಾಸಿಗಳು.

ಸಿದ್ದಯ್ಯನಪುರ ಗ್ರಾಮದ ಮಹದೇಶ್ವರ ಬಡಾವಣೆ, ನಗರದ ಕನ್ನಿಕಾ ಪರಮೇಶ್ವರಿ ಬಡಾವಣೆ, ಜಿ.ಪಿ ಮಲ್ಲಪ್ಪಪುರಂ ಬಡಾವಣೆ, ಆದರ್ಶ ನಗರ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಖಾಲಿ ನಿವೇಶನಗಳು ಹೆಚ್ಚಾಗಿದ್ದು ಸಂಪೂರ್ಣ ನಿರ್ವಹಣೆ ಕೊರತೆ ಕಾಣುತ್ತದೆ.

ಕೆಲವು ನಿವೇಶನಗಳು ಅನೈತಿಕ ಚಟುವಟಿಕೆಗಳ ತಾಣವಾಗಿದ್ದು ಮದ್ಯವ್ಯನಿಗಳ ಪಾಲಿಗೆ ಜೂಜು ಹಾಗೂ ಮೋಜು ಮಾಡುವ ಅಡ್ಡೆಗಳಾಗಿವೆ. ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಗಮನ ಹರಿಸಿ ಕ್ರಮ ಕೈಳ್ಳಬೇಕು ಎಂದು ಒತ್ತಾಯಿಸುತ್ತಾರೆ ಸ್ಥಳೀಯರು.

ನಿರ್ವಹಣೆ: ಬಾಲಚಂದ್ರ ಎಚ್.

ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ, ನಾ.ಮಂಜುನಾಥ್

‘ವಾಣಿಜ್ಯ ಉದ್ದೇಶಗಳಿಗೆ ಖರೀದಿ’ ‘ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳ ಬಹುಪಾಲು ಮಾಲೀಕರು ಮೈಸೂರು ಬೆಂಗಳೂರು ಸೇರಿದಂತೆ ನೆರೆಯ ನಗರ ಜಿಲ್ಲೆಗಳಲ್ಲಿ ನೆಲೆಸಿದ್ದಾರೆ. ರಿಯಲ್ ಎಸ್ಟೇಟ್ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು ಭೂಮಿಗೆ ಚಿನ್ನದ ಬೆಲೆ ಬಂದಿರುವುದರಿಂದ ಬಹಳಷ್ಟು ಮಾಲೀಕರು ಮನೆ ನಿರ್ಮಾಣ ಮಾಡದೆ ನಿವೇಶನಗಳನ್ನು ಖಾಲಿ ಬಿಟ್ಟಿರುವುದು ಸಮಸ್ಯೆಯ ಗಂಭೀರತೆ ಹೆಚ್ಚಿಸಿದೆ. ನಿವೇಶನಗಳ ಮಾಲೀಕರನ್ನು ಹುಡುಕುವುದೇ ಸವಾಲಾಗಿದೆ’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಯಾರು ಏನಂತಾರೆ ?

‘ಮಾಲೀಕರಿಗೆ ಶೀಘ್ರ ನೋಟಿಸ್’

ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳನ್ನು ನಿರ್ವಹಣೆ ಮಾಡದ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ನಗರದ ಅಂದ ಕಾಪಾಡುವ ನಿಟ್ಟಿನಲ್ಲಿ ಅಲ್ಲಲ್ಲಿ ರಾಶಿಯಾಗಿ ಬಿದ್ದಿರುವ ತ್ಯಾಜ್ಯ ವಿಲೇವಾರಿ ಮಾಡಲಾಗುವುದು.

-ಪ್ರಕಾಶ್ ನಗರಸಭೆ ಪ್ರಭಾರ ಪೌರಾಯುಕ್ತ

ವಿಷ ಜಂತುಗಳ ಕಾಟ

ಮಹದೇಶ್ವರ ಬಡಾವಣೆಯ ಖಾಲಿ ನಿವೇಶನದಲ್ಲಿ ಗಿಡಗಂಟಿಗಳು ಬೆಳೆದಿದ್ದು ಹಾವು ಚೇಳು ಹಾಗೂ ಹಂದಿಗಳ ಕಾಟ ಮಿತಿಮೀರಿದೆ. ಹಾಗಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ಇದರ ಬಗ್ಗೆ ಗಮನ ಹರಿಸಬೇಕು. ಅಪೇಕ್ಷಾ ಸಿದ್ದಯ್ಯನಪುರ ಕೊಳ್ಳೇಗಾಲ ‘ಶುಚಿಗೊಳಿಸಿ’ ಯಳಂದೂರು ಪಟ್ಟಣದಲ್ಲಿ ಸರ್ಕಾರ ನೌಕರರಿಗಾಗಿ ನಿರ್ಮಿಸಿರುವ ಕ್ವಾಟ್ರಸ್ಗಳು ಹಾಳಾಗಿದ್ದು ಹಲವು ಖಾಲಿ ಬಿದ್ದಿವೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಕ್ರಮ ವಹಿಸಬೇಕು.

-ಮಹೇಶ್ ಪ್ರಿನ್ಸ್ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.