ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26 ಚಿನ್ನದ ಪದಕ ಬಾಚಿದ ಪಿಜಿ ಕೇಂದ್ರದ ವಿದ್ಯಾರ್ಥಿಗಳು

ಕನ್ನಡ ವಿಭಾಗದ ಮಾದಲಾಂಬಿಕಗೆ 9, ಗ್ರಂಥಾಲಯ ವಿಜ್ಞಾನದ ಕಾವ್ಯ, ಕವಿತಾಗೆ ತಲಾ 7 ಬಂಗಾರದ ಪದಕ
Last Updated 5 ಜೂನ್ 2021, 5:50 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ವಿಶ್ವವಿದ್ಯಾಲಯದ 2020-21ನೇ ಶೈಕ್ಷಣಿಕ ಸಾಲಿನ ಹಲವು ಸ್ನಾತಕೋತ್ತರ ಕೋರ್ಸ್ಗಳ ಫಲಿತಾಂಶ ಪ್ರಕಟವಾಗಿದ್ದು, ಸಮೀಪದ ಬೇಡರಪುರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಆರು ವಿದ್ಯಾರ್ಥಿಗಳು ಒಟ್ಟು 26 ಚಿನ್ನದ ಪದಕಗಳನ್ನು ಪಡೆದು ದಾಖಲೆ ಬರೆದಿದ್ದಾರೆ.

ಕನ್ನಡ ವಿಭಾಗಕ್ಕೆ 11 ಚಿನ್ನದ ಪದಕಗಳು ಬಂದಿದ್ದು, ಮಾದಲಾಂಬಿಕ ಎಂಬ ವಿದ್ಯಾರ್ಥಿನಿ ಒಂಬತ್ತು ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ. ಸಂಜಯ್ ಹಾಗೂ ಶಿವು ಎಂಬುವವರು ತಲಾ ಒಂದು ಬಂಗಾರದ ಪದಕ ಗಳಿಸಿದ್ದಾರೆ.

ಗ್ರಂಥಾಲಯ ವಿಜ್ಞಾನ (ಲೈಬ್ರೆರಿ ಸೈನ್ಸ್) ವಿಭಾಗದ ಕವಿತಾ ಹಾಗೂ ಕಾವ್ಯ ಎಂಬ ವಿದ್ಯಾರ್ಥಿನಿಯರಿಬ್ಬರು ತಲಾ ಏಳು ಚಿನ್ನದ ಪದಕ ಗಳಿಸಿದ್ದಾರೆ. ಅರ್ಥಶಾಸ್ತ್ರ ವಿಭಾಗದ ಯೋಗೇಶ್ವರಿ ಒಂದು ಬಂಗಾರದ ಪದಕ ಪಡೆದಿದ್ದಾರೆ.

ಕೇಂದ್ರದ ದಾಖಲೆ: ಜಿಲ್ಲೆಯಲ್ಲಿ 10 ವರ್ಷಗಳ ಹಿಂದೆ ಸ್ಥಾಪನೆಯಾದ ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರದಲ್ಲಿ ನಿರ್ದೇಶಕರ ಸ್ಥಾನ ಬಿಟ್ಟರೆ, ಕಾಯಂ ಬೋಧಕ ಸಿಬ್ಬಂದಿ ಇಲ್ಲ. ಎಲ್ಲರೂ ಅತಿಥಿ ಉಪನ್ಯಾಸಕರೇ. ಇತಿಮಿತಿಗಳ ನಡುವೆಯೂ ಸ್ನಾತಕೋತ್ತರ ಕೇಂದ್ರ ಹಲವು ವರ್ಷಗಳಿಂದ ಉತ್ತಮ‌ ಶೈಕ್ಷಣಿಕ ಸಾಧನೆ‌ ಮಾಡುತ್ತಿದೆ. ಕಳೆದ ವರ್ಷ 18 ಚಿನ್ನದ ಪದಕ ಬಂದಿತ್ತು.

ಕೇಂದ್ರ ಸ್ಥಾಪನೆಯಾದ ಬಳಿಕ ಅತಿ ಹೆಚ್ಚು ಬಂಗಾರದ ಪದಕ‌ ಸಿಕ್ಕಿರುವುದು ಇದೇ ಮೊದಲು. ಮಾನಸ ಗಂಗೋತ್ರಿ ಸೇರಿದಂತೆ ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಸ್ನಾತಕೋತ್ತರ ಕೇಂದ್ರಗಳು ಹಾಗೂ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಪೈಪೋಟಿಗೆ ಇಳಿದು ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ‌ ಉತ್ತಮ‌ ಸಾಧನೆ ಮಾಡಿರುವುದಕ್ಕೆ ಕೇಂದ್ರದ ಬೋಧಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

‘2020–21ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಹಲವು ವಿಷಯಗಳ ಫಲಿತಾಂಶವನ್ನು ವಿವಿಯು ಪ್ರಕಟಿಸಿದ್ದು, ನಮ್ಮ ಆರು ವಿದ್ಯಾರ್ಥಿಗಳು 26 ಚಿನ್ನದ ಪದಕ ಹಾಗೂ ಹಲವು ನಗದು ಬಹುಮಾನ ಗಳಿಸಿರುವುದು ಹೆಮ್ಮೆಯ ವಿಷಯ. ಇದರಲ್ಲಿ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಶ್ರಮ ಇದೆ. ಜಿಲ್ಲೆಯಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾದ ಬಳಿಕ ವರ್ಷದಿಂದ ವರ್ಷಕ್ಕೆ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಆಡಳಿತ ಸಂಪೂರ್ಣ ಸಹಕಾರವೂ ಈ ಸಾಧನೆಗೆ ಕಾರಣ’ ಎಂದು ಕೇಂದ್ರದ ನಿರ್ದೇಶಕ ಪ್ರೊ.ಶಿವಬಸವಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವಿದ್ಯಾರ್ಥಿಗಳು ಪ್ರತಿ ವರ್ಷ ಹೆಚ್ಚಿನ ಚಿನ್ನದ ಪದಕಗಳ‌ನ್ನು ಪಡೆಯುತ್ತಿರುತ್ತಾರೆ. ಈ ಬಾರಿ ಗ್ರಂಥಾಲಯ ವಿಜ್ಞಾನ ವಿಭಾಗಕ್ಕೆ 14 ಚಿನ್ನದ ಪದಕಗಳು ಬಂದಿರುವುದು ದಾಖಲೆ. ಇಬ್ಬರು ವಿದ್ಯಾರ್ಥಿನಿಯರು ತಲಾ ಏಳು ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ.

‘ಚಾಮರಾಜನಗರ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ನಮ್ಮ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಪ್ರತಿ ವರ್ಷ ಉತ್ತಮ ಸಾಧನೆ ಮಾಡುತ್ತಾ ಬಂದಿದ್ದಾರೆ. ನಮ್ಮ ವಿಭಾಗದ ಇಬ್ಬರು 14 ಚಿನ್ನದ ಪದಕಗಳನ್ನು ಸಂಪಾದಿಸಿದ್ದಾರೆ. ವಿವಿ ಹಾಗೂ ಸ್ನಾತಕೋತ್ತರ ಕೇಂದ್ರಗಳು ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ನಿರ್ದೇಶಕರು ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಅತಿಥಿ ಉಪನ್ಯಾಸಕರಾಗಿದ್ದರೂ, ವಿದ್ಯಾರ್ಥಿಗಳಿಗೆ ಉತ್ತಮವಾಗಿ ಬೋಧನೆ ಮಾಡಲು ಸಾಧ್ಯವಾಗಿದೆ. ಈ ಬಾರಿಯ ಫಲಿತಾಂಶ ನಿಜಕ್ಕೂ ಹೆಮ್ಮೆ ತಂದಿದೆ. ನಮಗೆ ಇನ್ನಷ್ಟು ಅವಕಾಶ ನೀಡಿದರೆ, ಮಕ್ಕಳು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ಮಾಡಲು ಸಾಧ್ಯವಾಗಲಿದೆ’ ಎಂದು ಗ್ರಂಥಾಲಯ ವಿಜ್ಞಾನ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿರುವ ಡಾ. ಮಹಾದೇವಮೂರ್ತಿ ಎಂ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಾಧಕರು ಏನಂತಾರೆ?
ಕನ್ನಡ ವಿಭಾಗದಲ್ಲಿ ಒಂಬತ್ತು ಚಿನ್ನದ ಪದಕ ಪಡೆದಿರುವ ಮಾದಲಾಂಬಿಕ ಟಿ.ಎಸ್‌. ಅವರು ಚಾಮರಾಜನಗರ ತಾಲ್ಲೂಕಿನ ತಮ್ಮಡಹಳ್ಳಿ ಅವರು. ಶಿಕ್ಷಕಿಯಾಗಿರುವ ಅಕ್ಕ ಮತ್ತು ಭಾವನ ಪ್ರೋತ್ಸಾಹದಿಂದ ಅವರು ಸ್ನಾತಕೋತ್ತರ ಕೋರ್ಸ್‌ಗೆ ಸೇರಿದ್ದರು. ಅವರ ತಂದೆಯ ಆಸೆಯೂ ಅದೇ ಆಗಿತ್ತು. ಉತ್ತಮ ಸಾಧನೆ ಮಾಡಿರುವುದಕ್ಕೆ ಅವರಿಗೆ ತುಂಬಾ ಹೆಮ್ಮೆ.

‘ತಂದೆ, ತಾಯಿ, ಅಕ್ಕಂದಿರು, ಕುಟುಂಬದವರು, ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ಹನೂರು, ಕೇಂದ್ರದ ನಿರ್ದೇಶಕ ಡಾ.ಶಿವಬಸವಯ್ಯ ಹಾಗೂ ವಿಭಾಗದ ಬೋಧಕರ ಸಹಕಾರ, ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ. ನಾನು ಚೆನ್ನಾಗಿ ಓದಬೇಕು ಎಂಬುದು ಅಪ್ಪನ ಆಸೆಯಾಗಿತ್ತು. ಅದರಂತೆ ಈ ಸಾಧನೆ ಮೂಡಿ ಬಂದಿದೆ. ಮುಂದೆ ಎನ್‌ಇಟಿ ಬರೆದು ಕೆಲಸ ಹುಡುಕಬೇಕು ಎಂದಿದ್ದೇನೆ’ ಎಂದು ಮಾದಲಾಂಬಿಕ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಗ್ರಂಥಾಲಯ ವಿಜ್ಞಾನದಲ್ಲಿ ತಲಾ ಏಳು ಚಿನ್ನದ ಪದಕ ಪಡೆದಿರುವ ಕವಿತಾ ಅವರು ಗುಂಡ್ಲುಪೇಟೆಯ ಬೊಮ್ಮನಹಳ್ಳಿಯವರು. ಕಾವ್ಯ ಅವರು ಅದೇ ತಾಲ್ಲೂಕಿನ ಕುಣಗಳ್ಳಿಯವರು.

‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಅವರು ಈ ಸಾಧನೆಗೆ ಬೋಧಕರು, ಕೇಂದ್ರದ ನಿರ್ದೇಶಕರ ಬೆಂಬಲ ಕಾರಣ ಎಂದರು.

‘ಗ್ರಂಥಾಲಯ ವಿಜ್ಞಾನ ಒಳ್ಳೆಯ ಕೋರ್ಸ್‌. ಉದ್ಯೋಗ ಅವಕಾಶ ಸಾಕಷ್ಟು ಇದೆ. ಆದರೆ, ಇದರ ಬಗ್ಗೆ ಜನರಿಗೆ, ವಿದ್ಯಾರ್ಥಿಗಳಿಗೆ ತಿಳಿದಿಲ್ಲ. ಕೋರ್ಸ್‌ನ ಬಗ್ಗೆ ಹೆಚ್ಚು ಜನರಿಗೆ ತಿಳಿಸಬೇಕು. ಇಲ್ಲೂ ಉತ್ತಮ ಸಾಧನೆ ಮಾಡಬಹುದು ಎಂಬುದು ಎಲ್ಲರಿಗೂ ಗೊತ್ತಾಗಬೇಕು ಎಂಬುದು ನಮ್ಮ ಆಶೆ. ಮುಂದೆ ಒಳ್ಳೆಯ ಉದ್ಯೋಗ ಹುಡುಕಲು ಇಚ್ಛಿಸುತ್ತೇವೆ’ ಎಂದು ಕವಿತಾ ಹಾಗೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT