ಚಾಮರಾಜನಗರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಾಗೂ ಯುವಜನತೆಯಲ್ಲಿ ಪುಸ್ತಕ ಓದುವ ಅಭಿರುಚಿ ಬೆಳೆಸಲು ಹಾಗೂ ಜ್ಞಾನದ ಹಸಿವು ತಣಿಸಲು ಗ್ರಾಮ ಪಂಚಾಯಿತಿಗಳಲ್ಲಿ ಆರಂಭಿಸಲಾಗಿರುವ ಗ್ರಂಥಾಲಯಗಳು ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿವೆ.

ಗ್ರಾಮ ಪಂಚಾಯಿತಿಗಳಲ್ಲಿ ಹೆಸರಿಗೆ ಗ್ರಂಥಾಲಯಗಳಿದ್ದರೂ ಓದಲು ಪುಸ್ತಕಗಳ ಕೊರತೆ ಎದ್ದುಕಾಣುತ್ತಿದೆ. ಕುಳಿತು ಓದಲು ಕುರ್ಚಿ, ಟೇಬಲ್ ಸಹಿತ ಪೀಠೋಪಕರಣಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲ. ಡಿಜಿಟಲ್ ಓದಿಗೆ ಕಂಪ್ಯೂಟರ್ಗಳ ಕೊರತೆ ಇದೆ, ಕಾಡಂಚಿನ ಗ್ರಾಮ ಪಂಚಾಯಿತಿಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ‘ಡಿಜಿಟಲ್ ಓದು’ ಕೈಗೆಟುಕುತ್ತಿಲ್ಲ.

ಜಿಲ್ಲೆಯಲ್ಲಿ ಆದಿವಾಸಿ ಸಮುದಾಯಗಳು ಹೆಚ್ಚಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ಸಮಸ್ಯೆ ಗಂಭೀರವಾಗಿದೆ. ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ಇದ್ದರೂ ಓದುಗರ ಪಾಲಿಗೆ ಇಲ್ಲದಂತಾಗಿದೆ. ನೆಪಕ್ಕೆ ಕೆಲವು ಪುಸ್ತಕಗಳು ಇರುವುದು ಬಿಟ್ಟರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅಗತ್ಯವಾಗಿ ಬೇಕಾಗಿರುವ ಪುಸ್ತಕಗಳೇ ಇಲ್ಲ.

ಪ್ರಚಲಿತ ವಿದ್ಯಮಾನಗಳನ್ನು ತಿಳಿಸುವಂತಹ ನಿಯತ ಕಾಲಿಕೆಗಳು, ದಿನಪತ್ರಿಕೆಗಳ ಕೊರತೆ ಕಾಡುತ್ತಿದೆ. ಕುರ್ಚಿ ಸಹಿತ ಪೀಠೋಪಕರಣಗಳ ಕೊರತೆ ಇದೆ. ಆರಾಮದಾಯಕ ಓದಿಗೆ ಫ್ಯಾನ್ ವ್ಯವಸ್ಥೆ ಇಲ್ಲ. ಡಿಜಿಟಲ್ ಓದಿಗೆ ಕಂಪ್ಯೂಟರ್ಗಳು ಇಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅಗತ್ಯವಾಗಿ ಬೇಕಿರುವ ಪುಸ್ತಕಗಳ ಕೊರತೆಯಿಂದ ವಿದ್ಯಾರ್ಥಿಗಳು ಬಿಆರ್ ಹಿಲ್ಸ್ ಪಂಚಾಯಿತಿಯ ಗ್ರಂಥಾಲಯದತ್ತ ಸುಳಿಯುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೆಪಿಎಸ್ಸಿ, ಯುಪಿಎಸ್ಸಿ, ಪಿಎಸ್ಐ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬೇಕಿರುವ ಪುಸ್ತಕಗಳು ಗ್ರಂಥಾಲಯಗಳಲ್ಲಿ ಇರಬೇಕು, ಡಿಜಿಟಲ್ ಓದಿಗೆ ಕಂಪ್ಯೂಟರ್ ವ್ಯವಸ್ಥೆ, ತಡೆರಹಿತ ಇಂಟರ್ನೆಟ್ ಸೌಲಭ್ಯ, ಸ್ಮಾರ್ಟ್ ಟಿವಿ, ಪ್ರೊಜೆಕ್ಟರ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ ಬಿಳಿಗಿರಿ ರಂಗನಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವಕ ಮಹದೇವ್.

ಆದಿವಾಸಿಗಳಿಗೆ ಹತ್ತಿರವಾಗಲಿ ಗ್ರಂಥಾಲಯ: ಶಿಕ್ಷಣದಿಂದ ದೂರ ಉಳಿದಿರುವ ಆದಿವಾಸಿ ಸಮುದಾಯವನ್ನು ಶಿಕ್ಷಣದತ್ತ ಸೆಳೆಯಲು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಿ ಸ್ವಾವಲಂಬಿ ಬದುಕು ರೂಪಿಸಲು ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳು ಮಹತ್ವದ ಪಾತ್ರ ವಹಿಸುತ್ತವೆ. ಆದರೆ, ಹಾಡಿ–ಪೋಡುಗಳ ವ್ಯಾಪ್ತಿಯಲ್ಲಿರುವ ಪಂಚಾಯಿತಿಗಳ ಗ್ರಂಥಾಲಯಗಳಲ್ಲಿ ಪುಸ್ತಕಗಳ ಕೊರತೆಯಿಂದ ಶಿಕ್ಷಣ ಹಾಗೂ ಜ್ಞಾನ ಆದಿವಾಸಿಗಳ ಕೈಗೆಟುಕದಂತಾಗಿದೆ. ಗ್ರಂಥಾಲಯಗಳ ಆಶಯವೇ ಮಣ್ಣುಪಾಲಾಗುತ್ತಿದೆ ಎನ್ನುತ್ತಾರೆ ಆದಿವಾಸಿ ಸಮುದಾಯಗಳ ಮುಖಂಡ ಪ್ರೊ.ಮಾದೇಗೌಡ.

ಹಾಡಿ ಪೋಡುಗಳಿಂದ ಗ್ರಾಮ ಪಂಚಾಯಿತಿಗಳು ಹತ್ತಾರು ಕಿ.ಮೀ ದೂರವಿರುವುದರಿಂದ ಸಮರ್ಪಕ ಸಾರಿಗೆ ಸೌಲಭ್ಯಗಳು ಇಲ್ಲದೆ ಆದಿವಾಸಿ ವಿದ್ಯಾರ್ಥಿಗಳು ಪಂಚಾಯಿತಿ ಗ್ರಂಥಾಲಯಗಳಿಗೆ ಬಂದು ಓದುವುದು ಕಷ್ಟ. ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಜೊತೆಗೆ ಹೆಚ್ಚುವರಿಯಾಗಿ ಆದಿವಾಸಿಗಳು ವಾಸವಿರುವ ಹಾಡಿ–ಪೋಡುಗಳ ಬಳಿ ಹೊಸ ಗ್ರಂಥಾಲಯಗಳನ್ನು ಸ್ಥಾಪಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಅಗತ್ಯ ಪುಸ್ತಕಗಳನ್ನು ಒದಗಿಸಿದರೆ ಸಮುದಾಯದ ವಿದ್ಯಾರ್ಥಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ ಎನ್ನುತ್ತಾರೆ ಅವರು.

‘ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಕೊರತೆ’

15ನೇ ಹಣಕಾಸು ಅನುದಾನ ಬಳಕೆ ಮಾಡಿಕೊಂಡು ನೂತನ ಗ್ರಂಥಾಲಯ ಕೊಠಡಿ ಪುಸ್ತಕ ನಿಯತ ಕಾಲಿಕೆ ಪತ್ರಿಕೆಗಳು ಪೀಠೋಪಕರಣ ಕಂಪ್ಯೂಟರ್ ಇಂಟರ್ನೆಟ್ ಸೌಲಭ್ಯ ಸ್ಮಾರ್ಟ್ ಟಿವಿ ಪ್ರೊಜೆಕ್ಟರ್ ಫ್ಯಾನ್ ಕುಡಿಯುವ ನೀರಿನ ಘಟಕ ಸಹಿತ ಮಾದರಿ ಗ್ರಂಥಾಲಯ ನಿರ್ಮಿಸಿಕೊಳ್ಳಲು ಅವಕಾಶ ಇದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಂಥಾಲಯಗಳ ನಿರ್ಮಾಣಕ್ಕೆ ಉತ್ಸುಕತೆ ತೋರುತ್ತಿಲ್ಲ. ರಸ್ತೆ ಚರಂಡಿ ಕುಡಿಯುವ ನೀರು ನೀಡುವುದೇ ಪ್ರಗತಿಯಲ್ಲ; ಭವಿಷ್ಯದ ಕನಸು ಕಾಣುತ್ತಿರುವ ಯುವಜನತೆಗೆ ಸ್ವಾವಲಂಬಿ ಬದುಕು ರೂಪಿಸಿಕೊಡುವ ಗ್ರಂಥಾಲಯಗಳಿಗೂ ಜನಪ್ರತಿನಿಧಿಗಳು ಆದ್ಯತೆ ನೀಡಬೇಕು ಎನ್ನುತ್ತಾರೆ ಮುಖಂಡರಾದ ಮಲ್ಲೇಶ್.

‘ಗ್ರಂಥಾಲಯಗಳಿಗೆ ಮೂಲಸೌಕರ್ಯಕ್ಕೆ ಕ್ರಮ’

ಚಾಮರಾಜನಗರ ಜಿಲ್ಲೆಯಲ್ಲಿ 130 ಗ್ರಾಮ ಪಂಚಾಯಿತಿಗಳಿದ್ದು ಎಲ್ಲ ಕಡೆಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ ಮಾಡಲಾಗಿದೆ. ಪೀಠೋಪಕರಣ ಪುಸ್ತಕಗಳ ಕೊರತೆ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಇದ್ದರೆ ಪಿಡಿಒಗಳ ಮೂಲಕ ವರದಿ ತರಿಸಿಕೊಂಡು ಅನುದಾನ ನೀಡಲಾಗುವುದು. ಸರ್ಕಾರ ಜಿಲ್ಲೆಗೆ ಹೆಚ್ಚುವರಿಯಾಗಿ 125 ಗ್ರಂಥಾಲಯಗಳ ಸ್ಥಾಪನೆಗೆ ಮಂಜೂರಾತಿ ನೀಡಿದ್ದು ಯಾವ ಭಾಗಗಳಿಗೆ ಗ್ರಂಥಾಲಯಗಳು ಅಗತ್ಯವಾಗಿ ಬೇಕು ಎಂಬ ಮಾಹಿತಿ ಪಡೆದು ಸ್ಥಾಪಿಸಲಾಗುವುದು. –ಮೋನಾ ರೋತ್ ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.