ಶುಕ್ರವಾರ, ಮಾರ್ಚ್ 31, 2023
22 °C
ರೈತನಿಗೆ ಫಲ ಕೊಟ್ಟ ವಿಲಕ್ಷಣ ಐಡಿಯಾ

ಚಾಮರಾಜನಗರ | ಬೆಳೆ ರಕ್ಷಣೆಗೆ ನಾಯಿಗೆ ಹುಲಿ ವೇಷ ಹಾಕಿದ ರೈತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಕೋತಿಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸಲು ತಾಲ್ಲೂಕಿನ ಅಜ್ಜೀಪುರದ ರೈತ ಮಂಜು ವಿನೂತನ ಉಪಾಯವನ್ನು ಕಂಡು ಕೊಂಡಿದ್ದಾರೆ. ಸಾಕು ನಾಯಿಗೆ ಹುಲಿಯ ಬಣ್ಣ ಬಳಿದು ಕೋತಿಗಳನ್ನು ಹೆದರಿಸಿ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಅವರ ವಿಲಕ್ಷಣ ಉಪಾಯದಿಂದ ಎಲ್ಲರಲ್ಲೂ ಬೆರಗು ಹುಟ್ಟಿಸಿದ್ದಾರೆ. ಹುಲಿಯ ವೇಷ ಧರಿಸಿರುವ ನಾಯಿಯ ಚಿತ್ರ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ತಾಲ್ಲೂಕಿನ ಅಜ್ಜೀಪುರದ ಹೊರವಲಯದಲ್ಲಿರುವ ತೋಟಗಳಿಗೆ ಕೋತಿಗಳ ಉಪಟಳ ವಿಪರೀತವಾಗಿದ್ದು, ಅವುಗಳನ್ನು ಕಾಯುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಕೋತಿಗಳನ್ನು ಓಡಿಸಲು ಮಂಜು ಕಂಡುಕೊಂಡ ಉಪಾಯ ಫಲ ನೀಡುತ್ತಿದೆ.

ಜಮೀನಿನಲ್ಲಿ ಬೆಳೆದಿದ್ದ ಬೆಳೆ, ತೆಂಗಿನ ಕಾಯಿಗಳನ್ನು ಹಾಳು ಮಾಡುತ್ತಿದ್ದ ಕೋತಿಗಳು ಈಗ ನಾಯಿ ನೋಡಿ ಹೆದರಿ ದೂರ ಸರಿದಿವೆ. ಬೆಳೆ ರೈತನ ಕೈ ಸೇರುತ್ತಿದೆ. ಕಾಡಿನ ಸಮೀಪದ ಜಮೀನುಗಳಲ್ಲಿ ನಾಯಿ ಓಡಾಡುತ್ತಿದ್ದು, ಹುಲಿ ವೇಷದ ನಾಯಿ ಕಂಡು ಬೆಚ್ಚಿ ಬಿದ್ದವರಿದ್ದಾರೆ. ನಿಜಾಂಶ ಗೊತ್ತಾದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು