ಚಾಮರಾಜನಗರ: ಚಾಮರಾಜೇಶ್ವರ ದೇವಸ್ಥಾನದ ಆವರಣದ ಪ್ರಧಾನ ವೇದಿಕೆಯಲ್ಲಿ ನಡೆದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಕಣ್ಮನ ಸೆಳೆಯಿತು.

ಮಿಮಿಕ್ರಿ ಕಲಾವಿದ ಗೋಪಿ ಕಾರ್ಯಕ್ರಮ ಎಲ್ಲರನ್ನೂ ರಂಜಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಚಂದ್ರು, ವಾಟಾಳ್ ನಾಗರಾಜ್, ಡಾ.ರಾಜಕುಮಾರ್, ಅಂಬರೀಶ್, ವಿಷ್ಣುವರ್ಧನ್, ಶಂಕರ್‌ನಾಗ್ ಸೇರಿದಂತೆ ಪ್ರಸಿದ್ಧ ನಟರು, ರಾಜಕಾರಣಿಗಳ ಹಾಗೂ ಗಣ್ಯರ ಧ್ವನಿಯನ್ನು ಅನುಕರಣೆ ಮಾಡಿದರು.

ಜ್ಯೂನಿಯರ್ ಪ್ರಭಾಕರ್ ಹಾಗೂ ಜ್ಯೂನಿಯರ್ ಪುನೀತ್ ರಾಜಕುಮಾರ್ (ಚಂದ್ರಮೌರ್ಯ) ಅವರ ಭಾವ ಭಂಗಿ ಕಂಡು ಜನರು ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದರು.

ಹಿರಿಯ ಜನಪದ ಕಲಾವಿದ ಸಿಎಂ ನರಸಿಂಹಮೂರ್ತಿ ಅವರ ತಂಡದ ಜಾನಪದ ಗಾಯನಕ್ಕೆ ಎಲ್ಲರೂ ತಲೆದೂಗಿದರು. ತಾಯಿ ಚಾಮುಂಡೇಶ್ವರಿ ನೃತ್ಯ ರೂಪಕ, ಭರತ ನಾಟ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.