ಕೊಳ್ಳೇಗಾಲ: ತಾಲ್ಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಶನಿವಾರ ರಾತ್ರಿ ಚಂದ್ರಮಂಡಲೋತ್ಸವದ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಉತ್ತರಕ್ಕೆ ವಾಲಿದ ಚಂದ್ರಮಂಡಲ: ಗದ್ದುಗೆ ಮುಂಭಾಗ ಇರುವ ಕಟ್ಟೆಯ ಮೇಲೆ ಇರಿಸಲಾಗಿದ್ದ ಹೂಗಳಿಂದ ಅಲಂಕಾರಗೊಂಡಿದ್ದ, ಬಿದಿರಿನ ಅಚ್ಚೆ, ಎಣ್ಣೆ, ಬತ್ತಿ ಹಾಕಿದ್ದ ಚಂದ್ರಮಂಡಲಕ್ಕೆ ಬೊಪ್ಪೇಗೌಡನಪುರದ ಪೀಠಾಧಿಪತಿ ಬಿ.ಎಸ್.ಜ್ಞಾನಾನಂದ ಚೆನ್ನರಾಜೇ ಅರಸ್ ಕರ್ಪೂರದ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಬಳಿಕ ರಾತ್ರಿ 9.37ಕ್ಕೆ ಅಗ್ನಿಸ್ಪರ್ಶ ಮಾಡಿದರು.

ಕಾರ್ಗತ್ತಲಿನ ಮಧ್ಯೆ ಧಗಧಗನೆ ಉರಿಯುತ್ತಿದ್ದಂತೆ ಭಕ್ತರ ಉದ್ಘೋಷ ಮುಗಿಲು ಮುಟ್ಟಿತು. ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಾಲಯದ ಸುತ್ತಮುತ್ತಲಿರುವ ಮರ-ಗಿಡಗಳನ್ನು ಹತ್ತಿ ಚಂದ್ರಮಂಡಲ ಉತ್ಸವ ಕಣ್ತುಂಬಿಕೊಂಡರು.

'ಮಂಟೇಸ್ವಾಮಿ ಪಾದಕ್ಕೆ ಉಘೇ ಉಘೇ'...ಕತ್ತಲ ರಾಜ್ಯದಲ್ಲಿ ಪರಂಜ್ಯೋತಿಯಾಗಿ ಬೆಳಗಿದ ಸಿದ್ದಪ್ಪಾಜಿ ಚಂದ್ರಮಂಡಲಕ್ಕೆ ಉಘೇ ಉಘೇ ಎಂಬ ಭಕ್ತರ ಉದ್ಘೋಷ ಮೊಳಗಿತು. ಮಂಡಲ ಹೊತ್ತಿ ಉರಿಯುವವರೆಗೂ ಭಕ್ತರ ಜಯಘೋಷ ನಿಲ್ಲಲಿಲ್ಲ.

ಚಂದ್ರಮಂಡಲ ಯಾವ ಧಿಕ್ಕಿಗೆ ವಾಲುತ್ತದೋ ಆ ಧಿಕ್ಕಿನಲ್ಲಿ ಮಳೆ, ಬೆಳೆ ಸಮೃದ್ಧವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಂತೆ, ಈ ಬಾರಿ ಚಂದ್ರಮಂಡಲ ಉತ್ತರಕ್ಕೆ ವಾಲಿರುವುದರಿಂದ ಈ ಭಾಗದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿದೆ ಎಂದು ಭಕ್ತರು ನಂಬಿದ್ದಾರೆ.

ಬೂದಿ ಪ್ರಸಾದಕ್ಕೆ ಮುಗಿಬಿದ್ದ ಭಕ್ತರು: ಚಂದ್ರಮಂಡಲ ಹೊತ್ತಿ ಉರಿದು ಅದರ ಬೂದಿ ಭೂಮಿಗೆ ಬೀಳುತ್ತಿದ್ದಂತೆ ಭಕ್ತರು ಮುಗಿಬಿದ್ದ ಬೂದಿಯನ್ನು ತೆಗೆದುಕೊಂಡರು. ನೀಲಗಾರರ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠ ಎಂಬ ನಂಬಿಕೆ ಇರುವ ಕಪ್ಪು ದೂಳ್ತ ಎಂದು ಬೂದಿಯನ್ನು ಕರೆಯಲಾಗುತ್ತದೆ. ದೂಳ್ತವನ್ನು ಮೈಗೆ ನೇವರಿಸಿಕೊಂಡರೆ ಜೀವನದಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿ ದಟ್ಟವಾಗಿದೆ.

ಚಳಿಯನ್ನೂ ಲೆಕ್ಕಿಸದ ಭಕ್ತರು: ಮೊದಲ ದಿನ ಕಣ್ಣುಹಾಯಿಸಿದಷ್ಟು ದೂರ ನೆರೆದಿದ್ದ ಭಕ್ತಸಾಗರ ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೆ ಜಾತ್ರೆಯನ್ನು ಕಣ್ತುಂಬಿಕೊಂಡರು. ಸಿದ್ದಯ್ಯ ಸ್ವಾಮಿ ಬನ್ನಿ, ಪವಾಡ ಗೆದ್ದಯ್ಯ ನೀವೇ ಬನ್ನಿ, ಮಂಟೇದಾ ನೀವೇ ಬನ್ನಿ ಎಂಬ ಪದಗಳು ಅನುರಣಿಸುತ್ತಿದ್ದವು. ಜಾಗಟೆ ಶಬ್ಧ ಜಾತ್ರೆಯ ಮೆರುಗನ್ನು ಹೆಚ್ಚಿಸಿತು.

ಚಂದ್ರಮಂಡಲೋತ್ಸವಕ್ಕೂ ಮುನ್ನ ಹಲವು ಧಾರ್ಮಿಕ ವಿಧಿ ವಿಧಾನಗಳು ನಡೆದವು. ರಾತ್ರಿ ಗುರುಮಠದಲ್ಲಿ ಕುರುಬನ ಕಟ್ಟೆ ಲಿಂಗಯ್ಯ ಚೆನ್ನಯ್ಯ ಹಾಗೂ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಕಂಡಾಯಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ತಮಟೆ ನಾಗರಿ ಛತ್ರಿ ಚಾಮರಗಳೊಂದಿಗೆ ಕಂಡಾಯದ ಮೆರವಣಿಗೆಯು ಗದ್ದುಗೆಯ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ಕಂಡಾಯಗಳನ್ನು ಗದ್ದುಗೆಯಲ್ಲಿರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ಪ್ರತಿ ವರ್ಷ ಕುಟುಂಬ ಸಮೇತ ಜಾತ್ರೆಗೆ ಆಗಮಿಸಿದ 5 ದಿನಗಳ ಕಾಲ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಸಿದ್ದಪ್ಪಾಜಿಗೆ ಹರಕೆ ತೀರಿಸಿ ಹೋಗುವುದು ಸಂಪ್ರದಾಯ. ಈ ವರ್ಷವೂ ಜಾತ್ರೆಗೆ ಬಂದಿರುವುದು ಹರ್ಷ ತಂದಿದೆ ಎಂದು ಮಂಡ್ಯ ಜಿಲ್ಲೆಯ ಪಾಂಡುಪುರದಿಂದ ಬಂದಿದ್ದ ಮನುಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ಹನೂರು ಶಾಸಕ ಎಂ.ಆರ್.ಮಂಜುನಾಥ್, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ತಹಶೀಲ್ದಾರ್ ಬಸವರಾಜು, ಡಿವೈಎಸ್ಪಿ ಧರ್ಮೇಂದ್ರ ಇದ್ದರು.

‘ದೂಳಿನ ಅಭಿಷೇಕ’

ಚಂದ್ರಮಂಡಲ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಬಂದಿದ್ದರಿಂದ ದಾರಿಯುದ್ದಕ್ಕೂ ದೂಳು ತುಂಬಿಕೊಂಡಿತ್ತು. ವಾಹನಗಳು ಹೋದಾಗ ಎದ್ದೇಳುತ್ತಿದ್ದ ದೂಳಿನಿಂದ ಮಹಿಳೆಯರು ಮಕ್ಕಳು ವೃದ್ಧರು ಕಿರಿಕಿರಿ ಅನುಭವಿಸಿದರು. ಜಾತ್ರಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೂ ಅಲ್ಲಲ್ಲಿ ಹದಗೆಟ್ಟಿದ್ದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಯಿತು. ಬಹುತೇಖ ಕಡೆಗಳಲ್ಲಿ ರಸ್ತೆಗಳು ಗುಂಡಿಬಿದ್ದಿದ್ದು ಸವಾರರು ಪ್ರಯಾಸದಿಂದ ಪ್ರಯಾಣಿಸಬೇಕಾಯಿತು. ಚಿಕ್ಕಲ್ಲೂರು ಜಾತ್ರೆಗೆ ಲಕ್ಷಾಂತರ ಭಕ್ತರು ಬರುವ ಮಾಹಿತಿ ಇದ್ದರೂ ಕನಿಷ್ಠ ರಸ್ತೆಗಳ ಗುಂಡಿ ಮುಚ್ಚದಿರುವುದು ಆಡಳಿತ ವ್ಯವಸ್ಥೆಯ ಲೋಪ ಎಂದು ಸವಾರರು ಅಸಮಾಧಾನ ವ್ಯಕ್ತಪಡಿಸಿದರು. ತಾಲ್ಲೂಕು ಆಡಳಿತ ಶಾಸಕರು ಸಚಿವರು ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಚಿಕ್ಕಲ್ಲೂರು ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕು ಎಂಧು ಭಕ್ತ ಅರ್ಪಿತ್ ಕುಮಾರ್ ಪ್ರಜಾವಾಣಿಗೆ ತಿಳಿಸಿದರು.

ಅಪಾರ ಸಂಖ್ಯೆಯ ಭಕ್ತರು ವಾಹನ ದಟ್ಟಣೆ

ಸಂಚಾರ ದಟ್ಟಣೆ ನಿಯಂತ್ರಿಸಲು ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದರೂ ಚಂದ್ರಮಂಡಲ ಉತ್ಸವದಲ್ಲಿ ಭಾಗಿಯಾಗಲು ಅಪಾರ ಸಂಖ್ಯೆಯ ಭಕ್ತರು ವಾಹನಗಳಲ್ಲಿ ಬಂದಿದ್ದರಿಂದ ಸುಮಾರು 3 ಕಿ.ಮೀ ಉದ್ದದವರೆಗೂ ಸರತಿ ಸಾಲಿನಲ್ಲಿ ವಾಹನಗಳು ನಿಂತಿದ್ದವು. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು.

ಬಿಗಿ ಭದ್ರತೆ: ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವುದರಿಂದ ದೇವಾಲಯದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾಡಳಿತ ಪ್ರಾಣಿ ಬಲಿ ನಿಷೇಧಿಸಿರುವುದರಿಂದ ಭಕ್ತರು ಪ್ರಾಣಿಗಳನ್ನು ಕೊಂಡುಹೋಗದಂತೆ ತಡೆಯಲು ಚೆಕ್ ಪೋಸ್ಟ್ ಹಾಕಲಾಗಿದ್ದು ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ವಾಹನವನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.