ಮಂಗಳವಾರ, ಜುಲೈ 5, 2022
26 °C

ಚಾಮರಾಜನಗರ: ಬೀದಿನಾಯಿಗಳ ದಾಳಿಗೆ ಜಿಂಕೆ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನೂರು: ನೀರು ಮತ್ತು ಆಹಾರ ಅರಸಿ ಬಂದಿದ್ದ ಜಿಂಕೆಯೊಂದು ತಾಲ್ಲೂಕಿನ‌ ಕಣ್ಣೂರು ಗ್ರಾಮದಲ್ಲಿ ಶನಿವಾರ ಮುಂಜಾನೆ ಬೀದಿನಾಯಿಗಳ ದಾಳಿಗೆ ತುತ್ತಾಗಿ‌ ಮೃತಪಟ್ಟಿದೆ.

ಶನಿವಾರ ಬೆಳಿಗ್ಗೆ ಜಮಿನಿಗೆ ನೀರು ಕುಡಿಯಲು ಬಂದಾಗ ಬೀದಿನಾಯಿಗಳ ಹಿಂಡು ಹಿಂಬಾಲಿಸಿದೆ. ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಏಕಾಏಕಿ ನಾಯಿಗಳು ದಾಳಿ ನಡೆಸಿವೆ. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಜಿಂಕೆಗೆ ಗ್ರಾಮಸ್ಥರು ನೀರು ಕುಡಿಸಿ ಸಂತೈಸಿದ್ದಾರೆ. ಆದರೆ ಜಿಂಕೆ ಬದುಕುಳಿಯಲಿಲ್ಲ.

ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಮಹಜರು ನಡೆಸಿ ಜಿಂಕೆ ಕಳೇಬರವನ್ನು ತೆಗೆದುಕೊಂಡು ಹೋದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು