ಕೊಳ್ಳೇಗಾಲ: ನಗರಸಭೆ ಅಧ್ಯಕ್ಷೆ ರೇಖಾ ಹಾಗೂ ಉಪಾಧ್ಯಕ್ಷ ಎ.ಪಿ. ಶಂಕರ್ ಅವರು ಬಿ ಖಾತೆಯನ್ನು ಖಾತೆದಾರರಿಗೆ ಮಂಗಳವಾರ ಕಚೇರಿಯಲ್ಲಿ ವಿತರಿಸಿದರು.

ನಂತರ ಅಧ್ಯಕ್ಷೆ ರೇಖಾ ಮಾತನಾಡಿ, ‘ಕೊಳ್ಳೇಗಾಲದಲ್ಲಿ ಅನೇಕ ವರ್ಷಗಳಿಂದಲೂ ಸಹ ಖಾತೆಗಳ ಸಮಸ್ಯೆ ಎದುರಾಗಿತ್ತು. ಹಾಗಾಗಿ ನಮ್ಮ ಶಾಸಕರಾದ ಎ.ಆರ್.ಕೃಷ್ಣಮೂರ್ತಿ ಅವರು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ‘ಬಿ’ ಖಾತೆ ಬಗ್ಗೆ ಪ್ರಸ್ತಾವ ಮಾಡಿದ್ದರು. ಅದರಂತೆ ಇಂದು ನಾವು ನಗರಸಭಾ ವ್ಯಾಪ್ತಿಯಲ್ಲಿ ‘ಬಿ’ ಖಾತೆಗಳನ್ನು ನೀಡುತ್ತಿದ್ದೇವೆ. ಹಾಗಾಗಿ ಮೊದಲನೆಯದಾಗಿ ನಮ್ಮ ಶಾಸಕರಿಗೆ ನಗರಸಭೆ ವತಿಯಿಂದ ಹಾಗೂ ಸಾರ್ವಜನಿಕರ ವತಿಯಿಂದ ಧನ್ಯವಾದ ತಿಳಿಸುತ್ತೇವೆ’ ಎಂದರು.

‘ಕೊಳ್ಳೇಗಾಲದಲ್ಲಿ ಅನೇಕ ಅಕ್ರಮ ನಿವೇಶನಗಳಿದ್ದು ಅನೇಕ ಮಂದಿ ಮನೆಗಳನ್ನು ಕಟ್ಟಿದ್ದಾರೆ. ಆದರೆ, ಅವರಿಗೆ ಯಾವುದೇ ಮೂಲ ದಾಖಲೆಗಳು ಸೇರಿದಂತೆ ಖಾತೆಗಳ ಸಮಸ್ಯೆ ಎದುರಾಗಿತ್ತು. ಅಂಥವರೆಲ್ಲ ಈಗ ಖಾತೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಇದರಿಂದ ಅವರಿಗೆ ಅನೇಕ ಅನುಕೂಲಗಳು ಸಹ ಆಗುತ್ತವೆ. ಹಾಗಾಗಿ ಯಾರು ಖಾತೆಗಳನ್ನು ಮಾಡಿಸಿಕೊಂಡಿಲ್ಲ ಅಂಥವರು ಮೂರು ತಿಂಗಳ ಒಳಗೆ ಬಂದು ಖಾತೆಗಳನ್ನು ಮಾಡಿಸಿಕೊಳ್ಳಬಹುದು. ಈಗ 161 ಬಿ ಖಾತಾ ಅರ್ಜಿ ಬಂದಿದ್ದವು ಅದರಲ್ಲಿ 32 ಸಿದ್ಧಪಡಿಸಲಾಗಿದ್ದು ವಿತರಣೆ ಮಾಡಲಾಗುತ್ತಿದೆ’ ಎಂದರು.

ಉಪಾಧ್ಯಕ್ಷ ಎ.ಪಿ ಶಂಕರ್ ಮಾತನಾಡಿ, ‘ನಗರಸಭೆ ವ್ಯಾಪ್ತಿಯಲ್ಲಿ ಅನೇಕ ಬಡಾವಣೆಗಳು ಅಕ್ರಮವಾಗಿವೆ. ಅಂಥವರು ಬಿ ಖಾತೆಗಳನ್ನು ಮಾಡಿಸಿಕೊಳ್ಳಬಹುದು. ಅದಲ್ಲದೆ ಗ್ರಾಮ ಠಾಣಾ ಸೇರಿದಂತೆ ಹಳೆಯ ನಿವೇಶನಗಳಿಗೆ ‘ಎ’ ಖಾತೆಯನ್ನೇ ಮಾಡಿಕೊಡಲಾಗುವುದು. ಕೆಲವು ಬಡಾವಣೆಗಳಲ್ಲಿ ನಿವೇಶನಗಳನ್ನು ನೋಂದಣಿ ಮಾತ್ರ ಮಾಡಿಕೊಂಡಿದ್ದಾರೆ. ಅಂತಹ ನಿವೇಶನಗಳಿಗೆ ‘ಬಿ’ ಖಾತೆಗಳನ್ನು ಮಾಡಿಸಿಕೊಳ್ಳಬಹುದು. ಇದು ಒಂದು ಒಳ್ಳೆಯ ಅವಕಾಶವಾಗಿದ್ದು ನಗರಸಭಾ ವ್ಯಾಪ್ತಿಯ ಜನರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ನಗರ ಸಭೆ ಸದಸ್ಯ ಶಾಂತರಾಜು, ಶಿವಕುಮಾರ್, ರಾಮಕೃಷ್ಣ, ಪ್ರಕಾಶ್, ಮಂಜುನಾಥ್, ಧರಣೇಶ್, ನಾಗೇಂದ್ರ, ದೇವಾನಂದ್, ಸ್ವಾಮಿ ನಂಜಪ್ಪ, ಮುಖಂಡ ರಮೇಶ್ ಪ್ರಭುಸ್ವಾಮಿ, ಶ್ರೀಧರ್, ಪುಟ್ಟರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.