ವರ್ಷದ ವಾಡಿಕೆ ಮಳೆ 79.2 ಸೆಂ.ಮೀ ಕಳೆದ ವರ್ಷ ಬಿದ್ದ ಮಳೆ 57.49 ಕೃಷಿಗೆ ಕೊಳವೆಬಾವಿಗಳೇ ಆಧಾರ
‘ಶುಂಠಿ ಬೆಳೆ ನಿರ್ಬಂಧಿಸಿ’
ನೀರಿನ ಕೊರತೆ ಇರುವುದರಿಂದ ಶುಂಠಿ ಸೇರಿದಂತೆ ಹೆಚ್ಚು ನೀರು ಅಗತ್ಯವಿರುವ ಬೆಳೆಗಳನ್ನು ಬೆಳೆಯಲು ಜಿಲ್ಲಾಡಳಿತ ನಿರ್ಬಂಧ ವಿಧಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ‘ಬರದಿಂದಾಗಿ ಈ ವರ್ಷ ಎಲ್ಲ ಬೆಳೆಗಳ ಇಳುವರಿ ಕುಂಠಿತವಾಗಿದೆ. ಬೆಜ್ಜಲು ಭೂಮಿಯಲ್ಲಿ ಮಳೆ ನಂಬಿ ಬೇಸಾಯ ಮಾಡುವವರು ಹಾಕಿದ ಬಂಡವಾಳವೂ ಕೈ ಸೇರಿಲ್ಲ. ಆದರೆ ಹೊರ ರಾಜ್ಯದವರು ಶುಂಠಿ ಬೆಳೆಯುವುದಕ್ಕಾಗಿ ಜಮೀನುಗಳಲ್ಲಿ ಹೆಚ್ಚು ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ’ ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಕೊಳವೆ ಬಾವಿಗಳನ್ನು ಹೆಚ್ಚು ಕೊರೆಯುವುದರಿಂದ ನೀರಿನ ಅಭಾವ ಹೆಚ್ಚಾಗಲಿದೆ. ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಇರುವುದರಿಂದ ಶುಂಠಿ ಸೇರಿದಂತೆ ಹೆಚ್ವು ನೀರು ಬಳಕೆಯಾಗುವ ಬೆಳೆಗಳನ್ನು ನಿರ್ಬಂಧಿಸಲು ಜಿಲ್ಲಾಧಿಕಾರಿಯವರು ಗಮನಹರಿಸಬೇಕು’ ಎಂದು ಅವರು ಒತ್ತಾಯಿಸಿದರು.