ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾ.ನಗರ ವಿವಿಯ ಚಂದನಗೆ ಐದು ಚಿನ್ನದ ಪದಕ

2022–23ನೇ ಸಾಲಿನ ಮೈಸೂರು ವಿವಿ ಸ್ನಾತಕೋತ್ತರ ಪದವಿ ಫಲಿತಾಂಶ, ಮಣಿಕಂಠಗೆ ಒಂದು ಬಂಗಾರದ ಪದಕ
Published 27 ಫೆಬ್ರುವರಿ 2024, 5:05 IST
Last Updated 27 ಫೆಬ್ರುವರಿ 2024, 5:05 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ವಿಶ್ವವಿದ್ಯಾಲಯದ 2022-23ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಡಾ.ಬಿ.ಆರ್‌.ಅಂಬೇಡ್ಕರ್‌ ಕೇಂದ್ರದ (ಈಗ ಚಾಮರಾಜನಗರ ವಿವಿ) ಕನ್ನಡ ವಿಭಾಗಕ್ಕೆ ಆರು ಚಿನ್ನದ ಪದಕಗಳು ಬಂದಿವೆ. 

ಜಿ.ಚಂದನಾ ಐದು ಚಿನ್ನದ ಪದಕಗಳನ್ನು ಗಳಿಸಿದರೆ, ಎ.ಮಣಿಕಂಠ ಎಂಬುವರು ಒಂದು ಚಿನ್ನದ ಪದಕ ಪಡೆದಿದ್ದಾರೆ. 

ಕೇಂದ್ರದ ಎಂಬಿಎ ವಿಭಾಗದ ನಿದಾ ಫಾತಿಮಾ ಅವರು ಆರನೇ ರ‍್ಯಾಂಕ್‌ ಮತ್ತು ಶ್ರುತಿ 8ನೇ ರ‍್ಯಾಂಕ್‌ ಗಳಿಸಿದ್ದಾರೆ. ಎಂಬಿಎ ವಿಭಾಗದಲ್ಲಿ ರ‍್ಯಾಂಕ್‌ ಬರುತ್ತಿರುವುದು ಇದೇ ಮೊದಲು. 

ತಾಲ್ಲೂಕಿನ ಬದನಗುಪ್ಪೆ ಗ್ರಾಮದ ರೈತ ಗುರುಸ್ವಾಮಿ ಹಾಗೂ ಶೋಭಾ ಅವರ ಪುತ್ರಿ ಜಿ. ಚಂದನಾ ಅವರು ಪ್ರೊ.ಎ.ಆರ್.ಕೃಷ್ಣಶಾಸ್ತ್ರಿ, ಎಫ್.ಎಂ.ಖಾನ್, ಡಾ.ಪು.ತಿ.ನರಸಿಂಹಚಾರ್, ಜಯಲಕ್ಷ್ಮಿ ಎಚ್. ಶ್ರೀನಿವಾಸಯ್ಯ, ಆಸ್ಥಾನ ವಿದ್ವಾನ್ ಎಂ.ಈ.ನಂಜುಂಡ ಆರಾಧ್ಯ ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಸದ್ಯ ಅವರು ಮೈಸೂರಿನಲ್ಲಿ ಬಿ.ಇಡಿ ಶಿಕ್ಷಣ ಪಡೆಯುತ್ತಿದ್ದಾರೆ. 

ಗುಂಡ್ಲುಪೇಟೆ ತಾಲ್ಲೂಕಿನ ಅಣ್ಣೂರುಕೇರಿಯ ರೈತ ಮಹದೇವಶೆಟ್ಟಿ ಹಾಗೂ ರಾಜಮ್ಮ ದಂಪತಿಯ ಮಗ ಎಂ. ಮಣಿಕಂಠ ಕುಪ್ಪಳಿ ಸೀತಮ್ಮ ವೆಂಕಟಪ್ಪ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಮಾರ್ಚ್‌ 3ರಂದು ನಡೆಯಲಿರುವ ಮೈಸೂರು ವಿವಿ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳ ಪ್ರದಾನ ನಡೆಯಲಿದೆ. 

ಮಣಿಕಂಠ
ಮಣಿಕಂಠ
ಡಾ.ಎಂ.ಆರ್‌.ಗಂಗಾಧರ್‌
ಡಾ.ಎಂ.ಆರ್‌.ಗಂಗಾಧರ್‌
ಪ್ರೊ.ಕೃಷ್ಣಮೂರ್ತಿ ಹಾಗೂ ವಿವಿ ಬೋಧಕರ ಶ್ರಮ ವಿದ್ಯಾರ್ಥಿಗಳ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಎಲ್ಲರೂ ಅಭಿನಂದನಾರ್ಹರು.
-ಪ್ರೊ.ಎಂ.ಆರ್‌.ಗಂಗಾಧರ್‌ ವಿವಿ ಕುಲಪತಿ

ಬೋಧಕರು ಗ್ರಂಥಾಲಯದ ನೆರವು

ಐದು ಚಿನ್ನದ ಪದಕ ಲಭಿಸಿರುವುದು ಖುಷಿ ತಂದಿದೆ. ಪ್ರಾಧ್ಯಾಪಕರ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ನಮ್ಮಲ್ಲಿ ಉತ್ತಮ ಗ್ರಂಥಾಲಯವಿದ್ದು ಅಧ್ಯಯನಕ್ಕೆ ಸಹಕಾರಿಯಾಗಿದೆ. ಚಿನ್ನದ ಪದಕಗಳು ಉತ್ತಮ ಅಂಕಗಳು ಸಿಕ್ಕಿದರೆ ಸಾಧನೆ ಮಾಡಲು ನಮಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಿದಂತೆಯಾಗುತ್ತದೆ. ಈಗ ಬಿಇಡಿ ಶಿಕ್ಷಣ ಪಡೆಯುತ್ತಿದ್ದೇನೆ. ಮುಂದೆ ಕೆಎಎಸ್‌ ಅಧಿಕಾರಿಯಾಗುವ ಆಸೆ ಇದೆ – ಜಿ.ಚಂದನಾ ಐದು ಚಿನ್ನದ ಪದಕ ವಿಜೇತೆ ಖುಷಿ ನೀಡಿದೆ ತುಂಬಾ ಖುಷಿಯ ವಿಚಾರ ಇದು. ವಿಮರ್ಶೆ ನನ್ನ ನೆಚ್ಚಿನ ವಿಚಾರ. ಅದರಲ್ಲೇ ನನಗೆ ಚಿನ್ನದ ಪದಕ ಸಿಕ್ಕಿರುವುದು ಸಂತಸ ಉಂಟು ಮಾಡಿದೆ. ಬೋಧನಾ ವೃತ್ತಿಯ ಹುಡುಕಾಟದಲ್ಲಿದ್ದೇನೆ. ಊರಿನಲ್ಲಿ ಕೃಷಿ ಮಾಡಿಕೊಂಡು ಶಿಕ್ಷಕರ ನೇಮಕಾತಿಗಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಎ.ಮಣಿಕಂಠ ಒಂದು ಚಿನ್ನದ ಪದಕ ವಿಜೇತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT