ಕೊಳ್ಳೇಗಾಲ: ಇಲ್ಲಿನ ನೂರ್ ಮೊಹಲ್ಲಾ ಬಡಾವಣೆಯಲ್ಲಿ ಗೌಸುಲ್ ಅಜೀಮ್ ದಸ್ತಗಿರ್ ಸ್ಮರಣಾರ್ಥ ಗಂಧೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.

ಪ್ರತಿ ಬಡಾವಣೆಗಳಿಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಮನೆ ಹಾಗೂ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯಿತು.

ನೂರ್ ಮೊಹಲ್ಲಾ ಮಸೀದಿಯ ಧರ್ಮ ಗುರು ನಯಜ್ ಮಹಬೂಬ್ ಮಾತನಾಡಿ, ಸಂತ ಗೌಸುಲ್ ಅಜಿರ್ ಧರ್ಮ ಪ್ರಚಾರಕ್ಕಾಗಿ ಬಾಂಗ್ಲದೇಶದಿಂದ ಬಂದು ಬೋಧನೆಯಿಂದ ಎಲ್ಲರ ಮೆಚ್ಚಿನ ಗುರುಗಳಾಗಿದ್ದರು. ಅವರನ್ನು ಸ್ಮರಿಸಿ ಪ್ರತಿವರ್ಷ ಅಜೀರ್ ದರ್ಗಾದಲ್ಲಿ ಗಂಧೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೊಳ್ಳೇಗಾಲದ ನೂರ್ ಮೊಹಲ್ಲಾ ಬಡಾವಣೆಯಲ್ಲಿಯೂ ಮುಸ್ಲಿಂ ಸಮುದಾಯದವರು ಆಚರಣೆ ಮಾಡುತ್ತಿದ್ದೇವೆ ಎಂದರು.

ವಿಶೇಷ ಪ್ರಾರ್ಥನೆ ಬಳಿಕ ಎಂಟು ಸಾವಿರಕ್ಕೂ ಹೆಚ್ಚು ಮಂದಿಗೆ ಮಾಂಸದೂಟದ ವ್ಯವಸ್ಥೆ ಮಾಡಲಾಗಿತ್ತು.
ನಗರಸಭೆ ಅಧ್ಯಕ್ಷೆ ರೇಖಾ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರಾದ ರಾಘವೇಂದ್ರ, ನಾಸೀರ್ ಷರೀಪ್, ಪ್ರಕಾಶ್ ಶಂಕನಪುರ, ನಾಮ ನಿರ್ದೇಶನ ಸದಸ್ಯರಾದ ಅನ್ಸರ್ ಬೇಗ್, ಸ್ವಾಮಿನಂಜಪ್ಪ, ಜಿಲ್ಲಾ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಬಸೀಪುರ ರವಿ, ಮುಖಂಡ ಮಹಮ್ಮದ್ ಝಬಿ, ವಾಸಿಂ ಪಾಷ, ಇಮ್ಮಾದ್ ಉಲ್ಲಾ, ಮಹಮ್ಮದ್ ಸಮೀರ್, ಇನಾಯ್ ಪಾಷ, ಮುಜಾಹಿದ್ ಪಾಷ, ಮುಜಮಿಲ್ ಪಾಷ, ಜಮೀಲ್ ಸರ್ದಾರ್ ಪಾಷ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.