ಚಾಮರಾಜನಗರ: ಗೌರಿ–ಗಣೇಶ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂ–ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದೆ. ಗೌರಿ ಹಬ್ಬದ ಮುನ್ನ ದಿನವಾದ ಸೋಮವಾರ ಮಾರುಕಟ್ಟೆ ಗ್ರಾಹಕರಿಂದ ಗಿಜಿಗಿಡುತ್ತಿತ್ತು. ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.

ಹೂ ದುಬಾರಿ:

ಮಾರುಕಟ್ಟೆಯಲ್ಲಿ ಹೂವಿನ ದರ ದುಬಾರಿಯಾಗಿದ್ದು ಸೇವಂತಿಗೆ ಮಾರಿಗೆ ₹ 150 ತಲುಪಿದೆ. ಸಗಟು ಹೂವಿನ ಮಾರುಕಟ್ಟೆಯಲ್ಲಿ ಸೇವಂತಿಗೆ ಕೆ.ಜಿಗೆ 240 ರಿಂದ 320ರವರೆಗೆ ದರ ಇದೆ. ಸಾಮಾನ್ಯವಾಗಿ ₹ 60 ರಿಂದ 100 ಆಸುಪಾಸಿನಲ್ಲಿರುತ್ತಿದ್ದ ಸೇವಂತಿಗೆ ಹೂಗೆ ಭಾರಿ ಬೇಡಿಕೆ ಸೃಷ್ಟಿಯಾಗದ್ದು ಬೆಲೆ ದುಪ್ಪಟ್ಟಾಗಿದೆ.

ಬೇಡಿಕೆ ಹೆಚ್ಚಾಗಿರುವ ಸಣ್ಣ ಮಲ್ಲಿಗೆ ಹಾಗೂ ಮಲ್ಲಿಗೆ ಕೆ.ಜಿಗೆ 8,00 ರಿಂದ 1,000ಕ್ಕೆ ಮಾರಾಟವಾಗುತ್ತಿದೆ. ಕಳೆದವಾರ ಎರಡೂ ಬಗೆಯ ಹೂಗಳು ಕೆಜಿಗೆ 400 ಇತ್ತು. ಕನಕಾಂಬರ ಕೆ.ಜಿಗೆ ಬರೋಬ್ಬರಿ ₹ 1,500 ಮುಟ್ಟಿದೆ, ಚೆಂಡು ಹೂ ಕೂಡ ದರ ಹೆಚ್ಚಿಸಿಕೊಂಡಿದ್ದು ಕೆ.ಜಿಗೆ 50 ರಿಂದ 100ವರೆಗೂ ಮಾರಾಟವಾಗುತ್ತಿದೆ. ಗುಲಾಬಿ 320, ಸುಗಂಧರಾಜ 250 ರಿಂದ 260 ಬೆಲೆ ಇದೆ ಎನ್ನುತ್ತಾರೆ ಚೆನ್ನಾಪುರದ ಮೊಳೆ ರಸ್ತೆಯ ಹೂವಿನ ವ್ಯಾಪಾರಿ ರವಿ.

ಭಾನುವಾರದವರೆಗೂ ಹೂವಿನ ದರ ಸ್ಥಿರವಾಗಿತ್ತು. ಗೌರಿ ಹಬ್ಬದ ಹಿನ್ನೆಲೆಯಲ್ಲಿ ಸೋಮವಾರ ದಿಢೀರ್ ಬೆಲೆ ಗಗನಕ್ಕೇರಿದೆ. ಹಬ್ಬ ಮುಗಿಯುವವರೆಗೂ ದರ ಇಳಿಕೆಯಾಗುವ ಸಾಧ್ಯತೆಗಳಿಲ್ಲ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.

ತರಕಾರಿ ದುಬಾರಿ: ತರಕಾರಿಗಳ ದರದಲ್ಲೂ ಅಲ್ಪ ಏರಿಕೆಯಾಗಿದೆ. ಟೊಮೆಟೊ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿದ್ದು ಬರೋಬ್ಬರಿ ₹ 50 ಮುಟ್ಟಿದೆ. ಕಳೆದವಾರ 20 ರಿಂದ 30ಕ್ಕೆ ಸಿಗುತ್ತಿದ್ದ ಟೊಮೆಟೊ ಒಂದೇ ವಾರದಲ್ಲಿ ದುಪ್ಪಟ್ಟಾಗಿದೆ. ಮಾರುಕಟ್ಟೆಗೆ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ. ಮಾರುಕಟ್ಟೆಯಲ್ಲಿ 1,000 ಬಾಕ್ಸ್ ಟೊಮೆಟೊ ಬೇಡಿಕೆ ಇದ್ದರೆ ಕೇವಲ 600 ರಿಂದ 700 ಬಾಕ್ಸ್ ಮಾತ್ರ ಪೂರೈಕೆಯಾಗುತ್ತಿದೆ.

ಟೊಮೆಟೊ ಬೆಳೆ ಇಳುವರಿಯಲ್ಲಿ ತೀವ್ರ ಕುಸಿತವಾಗಿರುವುದು ಹಾಗೂ ರೋಗಬಾಧೆ ಹೆಚ್ಚಾಗಿರುವುದು ದರ ಏರಿಕೆಗೆ ಕಾರಣವಾಗಿದೆ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು ದರ ಮತ್ತಷ್ಟು ಏರುವ ಸಾಧ್ಯತೆಗಳಿವೆ ಎನ್ನುತ್ತಾರೆ ವ್ಯಾಪಾರಿ ಚಂದನ್.

ಹಣ್ಣಿನ ದರ ದುಬಾರಿ: ಮಾರುಕಟ್ಟೆಯಲ್ಲಿ ಹಣ್ಣಿನ ದರವೂ ದುಬಾರಿಯಾಗಿದೆ. ಸೇಬು, ದಾಳಿಂಬೆ ದರ ಹೆಚ್ಚಿದೆ. ಇನ್ನೂ ಪೂಜೆಗೆ ಹೆಚ್ಚು ಬಳಕೆಯಾಗುವ ಏಲಕ್ಕಿ ಬಾಳೆಹಣ್ಣಿನ ದರ ಶತಕ ಮುಟ್ಟಿದೆ. ಕಳೆದವಾರ ₹ 80 ಇದ್ದ ಬೆಲೆ ಈ ವಾರ ₹ 100 ತಲುಪಿದೆ.

ಇಳಿಯದ ತೆಂಗಿನಕಾಯಿ: ತೆಂಗಿನಕಾಯಿ ದರ ಇಳಿಯುವ ಲಕ್ಷಣಗಳು ಕಾಣುತ್ತಿಲ್ಲ. ಚಿಲ್ಲರೆಯಾಗಿ ಖರೀದಿಸಿದರೆ ಗಾತ್ರಕ್ಕೆ ಅನುಗುಣವಾಗಿ ಒಂದು ತೆಂಗಿನಕಾಯಿಗೆ 50 ರಿಂದ 60 ದರ ಇದೆ. ಸಗಟಾಗಿ ಖರೀದಿಸಿದರೆ 45 ರಿಂದ 50ಕ್ಕೆ ಸಿಗುತ್ತಿದೆ. ಎರಡು ತಿಂಗಳಿನಿಂದಲೂ ತೆಂಗಿನಕಾಯಿ ದರ ಸ್ಥಿರವಾಗಿದ್ದು ಇಳಿಯುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿ ಶ್ರೀನಿವಾಸ್.

ತರಕಾರಿಗಳ ದರ

(ಕೆ.ಜಿಗೆ ₹ಗಳಲ್ಲಿ) ಟೊಮೆಟೊ;40-50 ಕ್ಯಾರೆಟ್;40-50 ಬೀನ್ಸ್;40-60 ಬದನೆಕಾಯಿ;40–60 ತೊಂಡೆಕಾಯಿ;50 ಈರೇಕಾಯಿ;40–60 ಎಲೆಕೋಸು;25–30 ಬೀಟ್ರೂಟ್;30–40 ಈರುಳ್ಳಿ;25-30 ನುಗ್ಗೆ;40–60 ಆಲೂಗಡ್ಡೆ;30–40 ಬೆಳ್ಳುಳ್ಳಿ;80–100 ಮೂಲಂಗಿ;20–30 ಕ್ಯಾಪ್ಸಿಕಂ;60-80 ಮೆಣಸಿನಕಾಯಿ;60–80 ಗೆಡ್ಡೆಕೋಸು;60–80 ಸೌತೆಕಾಯಿ;40–45 ಹಾಗಲಕಾಯಿ;60–80

ಹಣ್ಣಿನ ದರ (ಕೆ.ಜಿಗೆ ₹ಗಳಲ್ಲಿ)

ಸೇಬು;140–160 ದಾಳಿಂಬೆ;₹120–140 ಬಾಳೆಹಣ್ಣು;₹100–120 ದ್ರಾಕ್ಷಿ;80–100 ಕಿತ್ತಳೆ;₹80–100 ಮೋಸಂಬಿ;₹60–80

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.