ಗುಂಡ್ಲುಪೇಟೆ: ಪೊಲೀಸ್ ಠಾಣೆ ಎಂದಾಕ್ಷಣ ನೆನಪಿಗೆ ಬರುವುದು ಗಲಾಟೆ, ಕೇಸು, ವಕೀಲರು, ಆರೋಪಿಗಳು. ಇದಕ್ಕೆ ವ್ಯತಿರಿಕ್ತವಾಗಿ ಠಾಣೆ ಎಂದ ಕೂಡಲೇ ಉತ್ತಮ ಪರಿಸರ, ಚೆಂದದ ಹೂದೋಟ, ಆಹ್ಲಾದಕರ ವಾತಾವರಣ ನೆನಪಿಗೆ ಬರುವಂತೆ ಮಾಡಲು ಹೊರಟಿದ್ದಾರೆ ಪಟ್ಟಣದ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ.

ಠಾಣೆಯನ್ನು ಜನಸ್ನೇಹಿಯಾಗಿಸುವ ಪ್ರಯತ್ನದ ಜೊತೆಗೆ, ಸಾರ್ವಜನಿಕರ ಸಹಯೋಗದೊಂದಿಗೆ ಪರಿಸರ ಸ್ನೇಹಿ ಠಾಣೆಯನ್ನಾಗಿ ಮಾಡಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಇಲ್ಲಿನ ಸಿಬ್ಬಂದಿ ಸ್ವಂತ ಹಣ ಹಾಕಿ ಮತ್ತು ದಾನಿಗಳ ಸಹಾಯದಿಂದ ಠಾಣೆಯ ಸುತ್ತಲೂ ಸುಂದರವಾದ ಉದ್ಯಾನ ಅಭಿವೃದ್ಧಿಪಡಿಸಿದ್ದಾರೆ. ಠಾಣೆಯ ಸುತ್ತಲೂ ವಿವಿಧ ಜಾತಿಯ ಮರಗಳನ್ನು ನೆಟ್ಟು ಪೋಷಿಸುವುದರ ಜೊತೆಗೆ, ಠಾಣೆಯ ಮುಂಭಾಗ ಉತ್ತಮ ಹೂದೋಟ ನಿರ್ಮಾಣ ಮಾಡಲಾಗಿದೆ. ವಿವಿಧ ಜಾತಿಯ ಆಲಂಕಾರಿಕ ಗಿಡ ಮತ್ತು ಹುಲ್ಲಿನ ನೆಲಹಾಸನ್ನು (ಲಾನ್) ಬೆಳೆಸಿದ್ದಾರೆ.

ಠಾಣೆಗೆ ಬರುವ ಸಾರ್ವಜನಿಕರು ಈ ಸ್ಥಳದಲ್ಲಿ ಕುಳಿತು ಮಾತುಕತೆ ನಡೆಸಬಹುದು. ಬರುವ ಜನರಿಗೆ ವಿಶ್ರಾಂತಿ ಪಡೆಯಲು ಸಹಾಯ ವಾಗುತ್ತದೆ ಎಂಬುದು ಇಲ್ಲಿನ ಸಿಬ್ಬಂದಿ ಆಶಯ. ಉದ್ಯಾನ ನಿರ್ಮಾಣ ಮಾಡುವ ಸಂದರ್ಭ ಬಿಡುವಿನ ವೇಳೆಯಲ್ಲಿ ಸಿಬ್ಬಂದಿಯೂ ಕೆಲಸ ಮಾಡಿದ್ದಾರೆ.

ಪೊಲೀಸ್ ಠಾಣೆಯ ಆವರಣವನ್ನು ಸಂಪೂರ್ಣ ಹಸಿರೀಕರಣ ಮಾಡುವ ಉದ್ದೇಶದಿಂದ ನರ್ಸರಿಯಿಂದ ಸಸಿಗಳನ್ನು ಖರೀದಿಸಲಾಗಿದೆ.

ಸಬ್ ಇನ್ಸ್ಪೆಕ್ಟರ್ಲತೇಶ್ ಕುಮಾರ್ ಮತ್ತು ಸಿಬ್ಬಂದಿ ಶಿವನಂಜಪ್ಪ ಅವರು ಠಾಣೆ ಆವರಣದಲ್ಲಿ ಹೂದೋಟ ಅಭಿವೃದ್ಧಿ ಪಡಿಸಲು ಆಲೋಚನೆ ಮಾಡಿದರು. ಅದಕ್ಕಾಗಿ ತಮ್ಮ ಜೇಬಿನಿಂದಲೇ ಒಂದಷ್ಟು ದುಡ್ಡು ಹಾಕಿದರು ಕೆಲಸ ಆರಂಭಿಸಿದರು. ನಂತರ ತಾಲ್ಲೂಕಿನ ದಾನಿಗಳನ್ನೂ ಹಿಡಿದರು. ಸ್ವಯಂ ಪ್ರೇರಿತರಾಗಿ ಹೂದೋಟಕ್ಕೆ ಬೇಕಾದ ಗೊಬ್ಬರ, ಮಣ್ಣು, ಇಟ್ಟಿಗೆ, ಸ್ಪ್ರಿಂಕ್ಲರ್ ಪೈಪ್ ಗಳನ್ನು ಕೊಡುಗೆ ನೀಡಿದರು.

ಹೂದೋಟ ನಿರ್ಮಾಣಕ್ಕೆ ₹3.5 ಲಕ್ಷದಿಂದ ₹4 ಲಕ್ಷ ವೆಚ್ಚವಾಗಿದೆ. ಇದಕ್ಕೆ ಇಲಾಖೆಯ ಹಣ ಬಳಸಲಾಗಿಲ್ಲ.ಉದ್ಯಾನವನಕ್ಕೆ ನೀರು ಹಾಯಿಸಲುತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲಾಗಿದೆ.

‘ಉದ್ಯಾನದಲ್ಲಿ ವಿವಿಧ ಬಗೆಯ ಆಲಂಕಾರಿಕ ಹಾಗೂ ಹೂವಿನ ಸಸಿಗಳನ್ನು ನೆಡಲಾಗಿದೆ. ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಶೆಲ್ಟರ್ ನಿರ್ಮಿಸುವ ಯೋಜನೆ ಇದೆ’ ಎಂದು ಸಬ್ ಇನ್ಸ್ಪೆಕ್ಟರ್ ಲತೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಭಾವನೆ ಬದಲು: ‘ಠಾಣೆಯ ಮುಂಭಾಗ ಮತ್ತು ಹಿಂಭಾಗದಲ್ಲಿ ವಿಶಾಲವಾದ ಜಾಗ ಇತ್ತು. ಅದನ್ನು ಸರಿಯಾಗಿ ಬಳಕೆ ಮಾಡದೆ ಪಾಳು ಬಿದ್ದಿತ್ತು. ಅ ಜಾಗದಲ್ಲಿ ಉದ್ಯಾನ ನಿರ್ಮಾಣ ಮಾಡಿರುವುದು ಸಂತೋಷದ ವಿಷಯ. ಸಾರ್ವಜನಿಕರಲ್ಲಿ ಪೊಲೀಸರ ಮೇಲಿರುವ ಭಾವನೆ ಬದಲಾಗುತ್ತದೆ’ ಎಂದು ಪುರಸಭಾ ಸದಸ್ಯ ರಾಜಗೋಪಾಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.