ಹನೂರು: ತಾಲ್ಲೂಕಿನ ಹಾಲೇರಿ ಕೆರೆಯ ಹೂಳು ತೆಗೆಯುವ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್ ಭಾನುವಾರ ಚಾಲನೆ ನೀಡಿದರು.

‘ಹಾಲೇರಿ ಕೆರೆ ಅಭಿವೃದ್ಧಿಪಡಿಸುವುದರಿಂದ ಜನರಿಗೆ ಹಾಗೂ ಜಾನುವಾರುಗಳಿಗೆ ನೀರಾವರಿ ಅನುಕೂಲವಾಗಲಿದೆ. ಮಲೆ ಮಹದೇಶ್ವರ ವನ್ಯಧಾಮದ ರಾಮಾಪುರ ವಲಯಕ್ಕೆ ಸೇರಿರುವ ಅರಣ್ಯ ಪ್ರದೇಶದ ಮಾರ್ಟಳ್ಳಿಯ ಈ ಕೆರೆಗೆ ಅರಣ್ಯ ಇಲಾಖೆಯ ಅನುದಾನದಲ್ಲಿ ₹30 ಲಕ್ಷ ವೆಚ್ಚದಲ್ಲಿ ಹೂಳು ತೆಗೆಯಲು ಜೆಸಿಬಿ ಮೂಲಕ ಚಾಲನೆ ನೀಡಲಾಗುತ್ತಿದೆ ಎಂದರು.

ಮಾರ್ಟಳ್ಳಿ ತಾಂಡಾಮೇಡು, ಕೋಟೆ ಪೊದೆ, ಮೇಟುತ್ತೇರು, ಸುಳ್ಳಾಡಿ, ಸಂದನ ಪಾಳ್ಯ ಹಾಗೂ ಸುತ್ತಲಿನ ಜನ ಜಾನುವಾರುಗಳಿಗೆ ರೈತರಿಗೆ ಹಾಲೇರಿ ಕೆರೆ ನೀರು ಬಳಕೆಯಾಗಲಿದೆ. ಅಂತರ್ಜಾಲ ಮಟ್ಟವು ಹೆಚ್ಚಾಗಲಿದೆ ಎಂದರು.

ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಮಲಿಂಗ, ಸದಸ್ಯರಾದ ಸೆಲ್ವಂ, ಗೋವಿಂದರಾಜು, ಮಾಜಿ ಸದಸ್ಯರಾದ ಹರಿ, ಲೋಕೇಶ್, ಮಾಜಿ ಸೈನಿಕ ಜೋಸೆಫ್, ಸೀನಪ್ಪ, ತಂಗವೇಲು, ಸೆಂಥಿಲ್, ಸಮನ್ಸ್, ಬೋಸ್ಕೊ, ಬಾಲಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.