ಅಧಿಕಾರಿಗಳಿಗೆ ದಿಗ್ಬಂಧನದ ಎಚ್ಚರಿಕೆ
‘ಹುಲಿ ಸೆರೆಗೆ ಇಟ್ಟ ಬೋನ್‍ನಲ್ಲಿ ಬಲಿಪ್ರಾಣಿಯಾಗಿ ಕಟ್ಟಿದ್ದ ಕರು ಮೇವು ನೀರಿಲ್ಲದೇ ಸತ್ತರೂ ಅರಣ್ಯ ಅಧಿಕಾರಿಗಳು ಸುಳಿದು ನೋಡಿಲ್ಲ. ತಡವಾಗಿ ಬಂದ ಕಾರಣಕ್ಕೆ ಬೋನ್‍ನಲ್ಲಿ ಕೂಡಿ ಹಾಕಿದ್ದನ್ನೇ ದೊಡ್ಡದು ಮಾಡಿ ರೈತರ ವಿರುದ್ಧ ಅರಣ್ಯ ಇಲಾಖೆಯವರು ಕೇಸು ದಾಖಲಿಸಿರುವುದು ಸರಿಯಲ್ಲ. ಕೂಡಲೇ ಕೇಸ್ ಹಿಂಪಡೆಯದಿದ್ದರೆ ಸಿಕ್ಕಿದ ಕಡೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರಿಗೆ ದಿಗ್ಬಂಧನ ವಿಧಿಸಬೇಕಾಗುತ್ತದೆ’ಎಂದು ರೈತ ಸಂಘಟನೆ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಎಚ್ಚರಿಸಿದರು.