ಚಾಮರಾಜನಗರ: ಭಾರತೀಯ ಸಹಕಾರ ಬ್ಯಾಂಕ್ 2023-24ನೇ ಸಾಲಿನಲ್ಲಿ ₹ 36 ಲಕ್ಷ ಲಾಭಗಳಿಸಿದ್ದು ಷೇರುದಾರರಿಗೆ ಡಿವಿಡೆಂಟ್ ನೀಡಲು ಕ್ರಮವಹಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಎನ್.ಬಿ.ರಾಜಶೇಖರ್ ತಿಳಿಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ 2023-24ನೇ ಸಾಲಿನ ಬ್ಯಾಂಕಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್ ಲಾಭದಲ್ಲಿ ಸದಸ್ಯರಿಗೆ ಶೇ.10 ರಷ್ಟು ಲಾಭಾಂಶ ನೀಡುವುದಾಗಿ ಘೋಷಿಸಿದರು.

ಕಳೆದ 24 ವರ್ಷಗಳಿಂದ ಬ್ಯಾಂಕ್ ಸದಸ್ಯರು ಮತ್ತು ಷೇರುದಾರರ ಹಿತದೃಷ್ಟಿಯಿಂದ ಬ್ಯಾಂಕ್ ಆರ್ಥಿಕ ವಹಿವಾಟು ನಡೆಸಿಕೊಂಡು ಬಂದಿದೆ. ಸಹಕಾರ ಕಾಯ್ದೆ ಮತ್ತು ರಿಸರ್ವ್ ಬ್ಯಾಂಕಿನ ನಿಯಮಗಳಿಗೆ ಬದ್ಧವಾಗಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಗ್ರಾಹಕರ ಸಹಕಾರದಿಂದ ಈ ವರ್ಷವೂ ₹ 36 ಲಕ್ಷ ಲಾಭಾಂಶ ಗಳಿಸಿದೆ ಎಂದು ತಿಳಿಸಿದರು.

ಪ್ರಸ್ತುತ ಬ್ಯಾಂಕ್‌ನಲ್ಲಿ 11,685 ಸದಸ್ಯರು ಇದ್ದು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಬ್ಯಾಂಕ್ ಶಾಖೆ ತೆರೆಯಲಾಗಿದೆ. ಡಿಜಿಟಲ್ ಬ್ಯಾಂಕಿಂಗ್, ನಿಶ್ಚಿತ ಠೇವಣಿ ಸೌಲಭ್ಯ, ಬ್ಯಾಂಕ್ ವ್ಯವಹಾರ ಸಂಪೂರ್ಣ ಗಣಕೀಕೃತಗೊಂಡಿದೆ. ಮೌಲ್ಯವರ್ಧಿತ ಸೇವೆಗಳಾದ ಕ್ಯೂಆರ್ ಕೋಡ್, ಮೊಬೈಲ್ ಆ್ಯಪ್ ಸೌಲಭ್ಯ ಪರಿಚಯಿಸಲಾಗುತ್ತಿದೆ. ಸದಸ್ಯರು, ಗ್ರಾಹಕರು ಠೇವಣಿ ಜಮೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಸಭೆಯಲ್ಲಿ ಉತ್ತಮ ಠೇವಣಿ ಇರಿಸಿರುವ, ಸಕಾಲದಲ್ಲಿ ಸಾಲ ಮರುಪಾವತಿ ಮಾಡಿರುವ ಸದಸ್ಯರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳು ಹಾಗೂ ಷೇರುದಾರರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ವೀಣಾ ಎಂ.ಎಸ್, ನಿರ್ದೇಶಕರಾದ ಪದ್ಮಾವತಿ ಬಾಯಿ, ಜಗದೀಶ್ ನಾಯಕ್, ನಾಗು ನಾಯ್ಕ್, ಕರುಣಾಕರ, ನಾಗೇಂದ್ರ, ಮಹದೇವಸ್ವಾಮಿ, ಕೃಷ್ಣನಾಯಕ್, ಪ್ರಭುಸ್ವಾಮಿ, ಶಿವಾಜಿ,ರಾಜಶೇಖರ್,ಉಪೇಂದ್ರ ಕುಮಾರ್, ವೃತ್ತಿಪರ ನಿರ್ದೇಶಕರಾದ ಪ್ರಸನ್ನ, ರೂಪಶ್ರೀ, ಸುಬ್ಬು, ವನಿತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.