ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಹಾಲು ಪೂರೈಸಲು ಹೈನುಗಾರರಿಗೆ ಸೂಚನೆ

Published 5 ಜೂನ್ 2023, 7:28 IST
Last Updated 5 ಜೂನ್ 2023, 7:28 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಸಮೀಪದ ಕಮರವಾಡಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಚಾಮುಲ್ ವತಿಯಿಂದ ಈಚೆಗೆ ಉದ್ಘಾಟಿಸಲಾಯಿತು.

ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ ಮಾತನಾಡಿ, ‘ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಹಾಲು ಉತ್ಪಾದಕರ ಸಂಘವನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಹಾಲು ಒಕ್ಕೂಟದ ಬೆಳವಣಿಗೆ ಸಾಧ್ಯವಾಗುತ್ತದೆ. ರಾಸುಗಳ ಬೆಳವಣಿಗೆಗೆ ಸೂಕ್ತವಾದ ಪಶು ಆಹಾರ ನೀಡಬೇಕು. ಇದರಿಂದ ರಾಸುಗಳು ಉತ್ತಮ ಗುಣಮಟ್ಟದ ಹಾಲನ್ನು ನೀಡುತ್ತವೆ. ಈಗಾಗಲೇ ಗುಣಮಟ್ಟದ ಲೀಟರ್ ಹಾಲಿಗೆ ₹ 32 ಕೊಡುವುದರ ಜತೆಗೆ ಪ್ರೋತ್ಸಾಹ ಧನವಾಗಿ ₹ 5‌ ನೀಡಲಾಗುತ್ತದೆ. ಹಾಲಿನ ಉತ್ಪಾದನೆ ಹೆಚ್ಚಿಸುವ ದೃಷ್ಟಿಯಿಂದ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ತೆರೆಯಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಹಾಲು ಒಕ್ಕೂಟದ ನಿರ್ದೇಶಕ ಬಸವರಾಜು ಮಾತನಾಡಿ, ‘58 ವರ್ಷ ಒಳಪಟ್ಟ ಹೈನುಗಾರರಿಗೆ ಜೀವವಿಮೆ ಮಾಡಿಸಲಾಗುತ್ತದೆ. ಜತೆಗೆ ರಾಸುಗಳಿಗೂ ವಿಮೆ ಮಾಡಿಸಲಾಗುತ್ತಿದೆ. ಬೇಸಿಗೆಯಲ್ಲಿ 2 ಲಕ್ಷ ಲೀಟರ್ ಹಾಲು ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿತ್ತು. ಈವಾಗ 70 ಸಾವಿರ ಲೀಟರ್ ಹಾಲು ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿದೆ. ಹೆಚ್ಚಿನ ಗುಣಮಟ್ಟದ ಹಾಲು ಉತ್ಪಾದನೆಗಾಗಿ ರೈತರಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.

ನಿರ್ದೇಶಕ ಸದಾಶಿವಮೂರ್ತಿ, ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ ಮೂರ್ತಿ, ಪ್ರಧಾನ ವ್ಯವಸ್ಥಾಪಕ ರಾಜಕುಮಾರ್, ಬಾಣಹಳ್ಳಿ ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ನಾಗೇಂದ್ರ ಕುಮಾರ್, ಡೇರಿ ಅಧ್ಯಕ್ಷ ಜಯಪ್ರಕಾಶ್, ರವಿ, ಎಸ್.ಮಹೇಶ್, ಕೊಟ್ಟೂರಪ್ಪ, ಶಿವಸ್ವಾಮಿ, ಕೆ.ಪಿ.ಮಹದೇವಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT