ಯಳಂದೂರು: ‘ಮುಂಜಾನೆಯ ಮಂಜಿನ ಶೀತೋದಕದ ಸ್ಪರ್ಶ. ಮೈ, ಮನ ತರಗುಟ್ಟಿಸುವ ತಂಗಾಳಿ, ಭೂರಮೆಯ ಮೈಹೊದ್ದ ತಿಳಿ ಹಸಿರ ಹೊದಿಕೆಯ ಹಾದಿ, ಪಯಣದ ಹಾದಿಯಲ್ಲಿ ತುಷಾರದ ನಡುವೆ ಸಾಗುವ ಮೇಘ ಮಲ್ಲಾರ. ಮಂಜಿನ ಶಿಖರಗಳ ನಡುವೆ ಹೆಜ್ಜೆ ಇಡುವಾಗ ಧನ್ಯತೆಯ ಭಾವ...’ ಎಂದು ಒಂದೇವೇಗದಲ್ಲಿ ಉಸುರಿದರು ತಾಲ್ಲೂಕಿನ ಮಲಾರಪಾಳ್ಯದ ಪ್ರದೀಪ್.

ಪ್ರದೀಪ್ ಅವರು ಇತ್ತೀಚೆಗೆ ಕಾಶ್ಮೀರದ ಹುರ್ಮುಖ್ ಶಿಖರವನ್ನು ಯಶಸ್ವಿಯಾಗಿ ಏರಿ, ಅಲ್ಲಿ ತ್ರಿವರ್ಣಧ್ವಜ ಹಾಗೂ ನಾಡಧ್ವಜವನ್ನು ಬೀಸಿ ಬಂದಿದ್ದಾರೆ. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯು ಸೆ.3ರಿಂದ 15ರವರೆಗೆ ಆಯೋಜಿಸಿದ್ದ ಹರ್ಮುಖ್ ಶಿಖರ ಚಾರಣದಲ್ಲಿ ಪ್ರದೀಪ್ ಅವರು ಭಾಗವಹಿಸಿದ್ದಾರೆ.

ರಾಜ್ಯದ 21 ಯುವಕರುಇಂಡಿಯನ್ ಮೌಂಟನೇರಿಂಗ್ ಸಂಸ್ಥೆ ನೀಡುವ ಸ್ಕೀಯಿಂಗ್, ರಾಕ್ ಮತ್ತು ರಿವರ್ ಕ್ರಾಸಿಂಗ್ತರಬೇತಿ ಪಡೆದಿದ್ದರು. ಭಾರತ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ಜಿಲ್ಲಾ ಯುವ ಸಮಿತಿ ಅಧ್ಯಕ್ಷ ಆಗಿರುವ ಪ್ರದೀಪ್ ಅವರು ಈ ತಂಡದ ಭಾಗವಾಗಿದ್ದರು.

ವಿದ್ಯಾರ್ಥಿಗಳಲ್ಲಿ ಸಾಹಸ ಮನೋಭಾವ, ಪರಸರ ಸ್ನೇಹಿ ಚಟುವಟಿಕೆ, ಯೋಗ, ಧ್ಯಾನ ಮತ್ತುವ್ಯಾಯಾಮಗಳ ಮೂಲಕ ಮೌಲ್ಯಗಳನ್ನು ವೃದ್ಧಿಸುವುದು, ಜನ ಜೀವನದ ಸಾಂಸ್ಕೃತಿಕವೈವಿಧ್ಯದ ಪರಿಚಯ, ಜಾಗತಿಕ ತಾಪಮಾನದ ಏರಿಕೆಯಿಂದ ಹಿಮದ ಹೊದಿಕೆ ನಶಿಸುವುದನ್ನುತಿಳಿಸುವ ಪ್ರಯತ್ನವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತಾ ಬಂದಿದೆ.

‘ಹರ್ಮುಖ್ ಶಿಖರ 16,870 ಅಡಿ ಎತ್ತರವಾಗಿದ್ದು, ಬೀಚ್ ಮತ್ತು ಪೈನ್ ಮರಗಳ ಸಾಲು ಸದಾ ಸ್ವಾಗತಿಸುತ್ತವೆ. ಥಾಜಿವಾಸ್ ಪ್ರವಾಸಿ ಪ್ರಿಯರ ಮೆಚ್ಚಿನ ತಾಣ. ಸೋನಮಾರ್ಗ್ ಹಾದಿಕಠಿಣವಾಗಿದೆ. ಎಲ್ಲ ಋತುಮಾನಗಳಲ್ಲೂ ಹಿಮಚ್ಛಾದಿತವಾಗಿರುತ್ತದೆ. ಆದರೆ,ಸೂರ್ಯನ ಹೊನ್ನಿನ ಕಿರಣಗಳು ಮೇ-ಅಕ್ಟೋಬರ್ ನಡುವೆ ಹಿಮ ಹಾಸಿನಲ್ಲಿ ರಂಗೋಲಿಹಾಕುವುದುನ್ನು ಕಾಣಬಹುದು’ ಎನ್ನುತ್ತಾರೆ ಚಾರಣಿಗರು.

‘ಮೊದಲ ದಿನ ಕಲ್ಲು ಮಣ್ಣಿನ ಹಾದಿ. ನಂತರ ಸಣ್ಣಪುಟ್ಟ ಪೋನಿಟ್ರೇಲ್ ರಸ್ತೆಯಲ್ಲಿ ಪಯಣ. ಪ್ರತಿ ಸಂಜೆ ಟೆಂಟ್ಗಳಲ್ಲಿ ವಾಸ. ಸಬ್ಜಿ, ದಾಲ್, ರೋಟಿಯ ಊಟ. ಆದರೆ, ಕೊನೆಯ ಐದುದಿನಗಳು ಚಾರಣಿಗರಿಗೆ ಸವಾಲು. 1 ರಿಂದ 5 ಡಿಗ್ರಿ ಸೆಲ್ಸಿಯಸ್ಗೆ ಬದಲಾಗುವ ಹವಾಮಾನ, ರಾತ್ರಿಯಾದರೆಮೈ ಥರುಗುಟ್ಟಿಸುವ ಕುಳಿರ್ಗಾಳಿ. ಹೆಜ್ಜೆಯ ತಳಭಾಗದಲ್ಲಿ ಮಂಜಿನ ದೊಗರು,ಹೆಪ್ಪುಗಟ್ಟಿವ ಒರತೆಗಳನ್ನು ದಾಟಿಶಿಖರಾಗ್ರ ಮುಟ್ಟುವಾಗ ಸವಾಲು ಮತ್ತು ತಾಳ್ಮೆಯನ್ನು ಬೇಡುತ್ತದೆ ಹರ್ಮುಖ್ ಚಾರಣ’ ಎಂದು ಕಠಿಣ ಚಾರಣದ ಅನುಭವವನ್ನು ಬಿಚ್ಚಿಡುತ್ತಾರೆ ಪ್ರದೀಪ್.

‘ಹರ್ಮುಖ್ ಏರಿನಿಂತ ಸಮಯದಲ್ಲಿ ತ್ರಿವರ್ಣ ದ್ವಜ ಮತ್ತು ಕನ್ನಡ ಬಾವುಟ ಬಿಚ್ಚಿಕೊಂಡವು.ಹಿಮಾಲಯ ಶ್ರೇಣಿಯಲ್ಲಿ ನಾಡನ್ನು ಪ್ರತಿನಿಧಿಸಿದ ಸಂಭ್ರಮ ಎಲ್ಲ ಆಯಾಸವನ್ನುಮರೆಸಿತ್ತು. ತರಬೇತಿ ಅನುಭವಗಳು ಇಳಿಯುವಾಗ ಜತೆಯಾದವು. ಹಿಮ ಜಾರುತ್ತ, ನೆಲಮುಟ್ಟಿದ ಕ್ಷಣ ಮರೆಯಲಾಗ ಕ್ಷಣ. ಮತ್ತಷ್ಟು ಶಿಖರಗಳನ್ನು ಏರುವ ಕನಸುಗಳಿಗೆ ಆತ್ಮವಿಶ್ವಾಸ ತುಂಬಿದೆ’ ಎಂದು ಅವರು ವಿವರಿಸಿದರು.

ಹಿಮಾಲಯದ ಹರಮುಕುಟ ವಿಶೇಷ

ಮಹಾ ಹಿಮಾಲಯ ವಲಯದ ‘ಹರಮುಕುಟ'ದ ಹೃಸ್ವ ರೂಪವೇ ಮೌಂಟ್ ‘ಹರ್ಮುಖ್’. ಶಿವನ ನೆಲೆ. ಪರುಶುರಾಮ ಧ್ಯಾನಸ್ಥ ಸ್ಥಳ. ಹಾಗಾಗಿ, ಇದನ್ನು ಕಾಶ್ಮೀರದ ಕೈಲಾಸ ಎನ್ನಲಾಗುತ್ತದೆ.

ಜಮ್ಮು ಕಾಶ್ಮೀರ ರಾಜ್ಯದ ಗಂಡೇರ್ಬಾಲ್ ಜಿಲ್ಲೆಯಲ್ಲಿ ಈ ಸೇರಿದೆ. ನಲ್ಲಾ ಸಿಂದ್ದಕ್ಷಿಣದಲ್ಲಿ ಮತ್ತು ಕಿಶನ್ಗಂಗಾ ನದಿಗಳು ಉತ್ತರದಲ್ಲಿ ಹರಿಯುತ್ತವೆ. ಪಯಣದಲ್ಲಿಗಂಗಾಬಾಲ್ ಸರೋವರ, ಕಾಶ್ಮೀರ ಕಣಿವೆ, ಅರಿನ್ ಮತ್ತು ಕುದಾರ ಬಂಡಿಪೋರ್ ಹಿಂದೂಗಳ ಪವಿತ್ರ ಸ್ಥಳವಾಗಿದೆ. 1856ರಲ್ಲಿ ಇಂಗ್ಲೆಂಡ್ ಥಾಮಸ್ ಮಾಂಟ್ಗೊಮರಿ ಅವರು ಕೆ1 ಮತ್ತು ಕೆ2 ಶಿಖರಗಳನ್ನು ಸರ್ವೇ ನಡೆಸಿ, ಸಮೀಪದ ಹರ್ಮುಖವನ್ನು ಗುರುತಿಸಿದ. ಶ್ರೀನಗರ ನರನಾಗ್, ಹರ್ಬಾಲ್ ಮೂಲಕ ಚಾರಣಕ್ಕೆ ಹಲವು ಹಾದಿಗಳಿವೆ. ಶ್ರೀನಗರ, ಜಮ್ಮು ಮೂಲಕ ರಸ್ತೆ, ವಾಯು ಮತ್ತು ರೈಲಿನ ಮೂಲಕ ಇಲ್ಲಿಗೆ ತಲುಪಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.