ಕೊಳ್ಳೇಗಾಲ (ಚಾಮರಾಜನಗರ): ನಗರದ ಬಸ್ ನಿಲ್ದಾಣದಲ್ಲಿ ಶನಿವಾರ ಮಹದೇಶ್ವರ ಬೆಟ್ಟಕ್ಕೆ ತೆರಳುವ ಬಸ್‌ಗೆ ಹತ್ತಲು ಮಹಿಳೆಯರ ನಡುವೆ ಉಂಟಾದ ಪೈಪೋಟಿಯಲ್ಲಿ ಬಸ್‌ನ ಬಾಗಿಲು ಕಿತ್ತು ಬಂದಿದೆ.
ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ನಡೆಯುವ ಸೇವೆಯಲ್ಲಿ ಭಾಗವಹಿಸಲು ಬೆಟ್ಗಕ್ಕೆ ತೆರಳುವುದಕ್ಕಾಗಿ ಸಾವಿರಾರು ಮಂದಿ ಭಕ್ತರು ಕೊಳ್ಳೇಗಾಲದ ನಿಲ್ದಾಣದಲ್ಲಿ ಸೇರಿದ್ದರು.
ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಬಸ್ ಕೊರತೆ ಉಂಟಾಗಿತ್ತು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೀಗಾಗಿ ಬಸ್‌ಗಳಿಗೆ ಹತ್ತಲು ಪೈಪೋಟಿ ಕಂಡು ಬಂತು.
ಶನಿವಾರ ಮಧ್ಯಾಹ್ನ 3.45ರ ಹೊತ್ತಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದ ಬಸ್‌ಗೆ ಹತ್ತಲು ಮಹಿಳೆಯರು ಮುಗಿ ಬಿದ್ದರು. ತೆರೆದಿದ್ದ ಬಾಗಿಲ ಮೇಲೆ ಬಲಹಾಕಿ ಬಸ್ ಹತ್ತುವ ಭರದಲ್ಲಿ ಬಾಗಿಲು ಕಿತ್ತು ಬಂದಿದೆ. ನಂತರ ಮಹಿಳೆಯರನ್ನೆಲ್ಲ ಬಸ್‌ನಿಂದ ಕೆಳಗಿಳಿಸಿ ಬೇರೆ ಬಸ್‌ನಲ್ಲಿ ಕಳುಹಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.