ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಮಹೇಶ್ ವಿರುದ್ಧ ಅಳವಡಿಸಿದ್ದ ಫ್ಲೆಕ್ಸ್ ತೆರವು

Published 23 ಏಪ್ರಿಲ್ 2024, 16:07 IST
Last Updated 23 ಏಪ್ರಿಲ್ 2024, 16:07 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಬಿಜೆಪಿ ರಾಜ್ಯ ಘಟಕದ  ಉಪಾಧ್ಯಕ್ಷ ಎನ್. ಮಹೇಶ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿರುವುದನ್ನು ಖಂಡಿಸಿ ಕೆಲ ಮುಖಂಡರು ಅವರ ವಿರುದ್ಧ ಫ್ಲೆಕ್ಸ್ ಅಳವಡಿಸಿದ್ದಾರೆ.

ಇಲ್ಲಿನ ಭೀಮ ನಗರದ ಎರಡು ಹೆಬ್ಬಾಗಿಲಲ್ಲೂ ಸಹ ಸಂವಿಧಾನದ ವಿರೋಧಿ ಹಾಗೂ ಸಮುದಾಯದ ದ್ರೋಹಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎನ್.ಮಹೇಶ್‌ಗೆ ಭೀಮ ನಗರಕ್ಕೆ ಪ್ರವೇಶವಿಲ್ಲ ಎಂದು ಫ್ಲೆಕ್ಸನ್ನು ಅಳವಡಿಸಿದ್ದಾರೆ. ಫ್ಲೆಕ್ಸ್ ಅಳವಡಿಸಿದ 30 ನಿಮಿಷಕ್ಕೆ ಭೀಮ ನಗರದ ಮುಖಂಡರು ಫ್ಲೆಕ್ಸನ್ನು ತೆರವು ಮಾಡಿಸಿದ್ದಾರೆ.

‘ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಇಂತಹ ಫ್ಲೆಕ್ಸ್‌ಗಳನ್ನು ಅಳವಡಿಸುವಂತಿಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸೋಣ ಯಾರೂ ಸಹ ಇದರ ಬಗ್ಗೆ ಮಾತನಾಡುವಂತಿಲ್ಲ’ ಎಂದು ಕೆಲ ಮುಖಂಡರು ಹೇಳಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT