‘ಆನೆಗೆ ವಯಸ್ಸಾಗಿದೆ. ಆಹಾರ ಹುಡುಕುವುದು ಕಷ್ಟವಾಗಿದೆ. ಸಂಜೆ ಸಮಯ ಅಕ್ಕಪಕ್ಕದ ಮನೆಗಳ ಸಮೀಪ ಸಂಚರಿಸುತ್ತದೆ. ಮಹಿಳೆ ಮತ್ತು ಮಕ್ಕಳು ಹೊರ ಬರುವುದು ಕಷ್ಟವಾಗಿದೆ. ತೆಂಗು, ಬಾಳೆಹಣ್ಣು, ಜೇನು ಅರಸಿ ತೇರಿನ ಬೀದಿ ಬದಿ ಬರುತ್ತಿದೆ. ಅರಣ್ಯ ಇಲಾಖೆ ಮಾನವೀಯ ದೃಷ್ಟಿಯಿಂದ ಆನೆಗೆ ಮೇವು ಪೂರೈಸಿ, ಮನೆಗಳತ್ತ ಬರದಂತೆ ಎಚ್ಚರ ವಹಿಸಬೇಕು’ ಎಂದು ನಿವಾಸಿ ಮಂಗಳಮ್ಮ ಒತ್ತಾಯಿಸಿದರು.