ಚಾಮರಾಜನಗರ: ಆನೆಯ ಮೇಲೆ ಸೀಳು ನಾಯಿಗಳ ಗುಂಪು ದಾಳಿ ಮಾಡಲು ಯತ್ನಿಸುತ್ತಿರುವ, ವೈರಲ್ ಆಗಿರುವ ವಿಡಿಯೊ ತುಣುಕು ಹಳೆಯ ವಿಡಿಯೊವಾಗಿದ್ದು, ಬಿಆರ್‌ಟಿ ಅರಣ್ಯದ್ದಲ್ಲ, ನಾಗರಹೊಳೆಯದ್ದು ಎಂಬುದು ಗೊತ್ತಾಗಿದೆ.

ವನ್ಯಜೀವಿ ಛಾಯಾಗ್ರಾಹಕರಾದ ಮಿಥುನ್ ಹುನಗುಂದ ಅವರು ಈ ವಿಡಿಯೊವನ್ನು ಚಿತ್ರೀಕರಿಸಿದ್ದು, 2016ರ ಜುಲೈ 6ರಂದು ತಮ್ಮ ಫೇಸ್‌ಬುಕ್ ಪುಟದಲ್ಲಿ ‘ಸೈಜ್ ವರ್ಸಸ್ ನಂಬರ್ಸ್’ ಎಂಬ ತಲೆಬರಹದ ಅಡಿಯಲ್ಲಿ ಪ್ರಕಟಿಸಿದ್ದರು.

ಈ ವಿಡಿಯೊ ತುಣುಕು 59 ಸೆಕೆಂಡ್‌ಗಳಷ್ಟು ಇದೆ. ಈಗ ಇದೇ ವಿಡಿಯೊವನ್ನು ಕತ್ತರಿಸಿ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ನಡೆದಿರುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈಗ ವೈರಲ್ ಆಗಿರುವ ವಿಡಿಯೊ 29 ಸೆಕೆಂಡ್‌ಗಳಿಷ್ಟಿದೆ.

ವಿಡಿಯೊದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಿಥುನ್ ಹುನಗುಂದ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘2016ರಲ್ಲಿ ಕಬಿನಿ ಪ್ರದೇಶದಲ್ಲಿ ವಿಡಿಯೊ ಚಿತ್ರೀಕರಿಸಿದ್ದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.