ಚಾಮರಾಜನಗರ: ನಾಲ್ಕೈದು ದಿನಗಳ ಹಿಂದೆ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರ ಮುಖ್ಯ ರಸ್ತೆಯಲ್ಲಿ ಮುಖ್ಯ ಶಿಕ್ಷಕರೊಬ್ಬರು ಬೈಕ್ ನಿಂದ ಬಿದ್ದುಮೃತಪಟ್ಟರು. ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಅವರು ನಡೆಸಿದ ಯತ್ನ ವಿಫಲವಾಗಿ ಪ್ರಾಣವನ್ನೇ ಕಳೆದುಕೊಂಡರು.ರಸ್ತೆಯಲ್ಲಿ ಗುಂಡಿ ಇಲ್ಲದೇ ಇದ್ದರೆ ಅವರಿಗೆ ಏನೂ ಆಗುತ್ತಿರಲಿಲ್ಲ.

ರಸ್ತೆಗಳಲ್ಲಿ ಗುಂಡಿ ಸೃಷ್ಟಿಯಾಗಿರುವ ಸಮಸ್ಯೆ ಸಿದ್ದಯ್ಯನಪುರದ್ದು ಮಾತ್ರ ಅಲ್ಲ; ಜಿಲ್ಲೆಯಾದ್ಯಂತ ಸುತ್ತಾಡಿದರೆ ಅಡಿಗಡಿಗೂ ಹೊಂಡ ಗುಂಡಿಗಳಿಂದ, ಸಂಚಾರ ನಡೆಸಲು ಸರ್ಕಸ್ ಮಾಡಬೇಕಾದ ರಸ್ತೆಗಳು ಕಾಣಸಿಗುತ್ತವೆ. ವಾಹನ ಸವಾರರು ಅದರಲ್ಲೂ ದ್ವಿಚಕ್ರವಾಹನಗಳಲ್ಲಿ ಸಂಚರಿಸುವವರು ಜೀವ ಕೈಯಲ್ಲಿ ಹಿಡಿದುಕೊಂಡೇ ಸಾಗಬೇಕು.ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಗ್ರಾಮೀಣ ರಸ್ತೆಗಳು ಸೇರಿದಂತೆ ಬಹುತೇಕ ಎಲ್ಲ ರಸ್ತೆಗಳ ಸ್ಥಿತಿ ಭಿನ್ನವಾಗಿಲ್ಲ. ಹೊಂಡಗಳಿಲ್ಲ ರಸ್ತೆಗಳನ್ನು ಹುಡುಕಲು ಕಷ್ಟ ಪಡಬೇಕು.

ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 209ರಲ್ಲಿ, ಚಾಮರಾಜನಗರ ತಾಲ್ಲೂಕಿನ ಸುವರ್ಣಾವತಿ ಜಲಾಶಯದಿಂದ ಪುಣಜನೂರು ಗಡಿವರೆಗಿನ 22 ಕಿ.ಮೀ ರಸ್ತೆ, ರಾಷ್ಟ್ರೀಯ ಹೆದ್ದಾರಿ ಹೇಗಿರಬಾರದು ಎಂಬುದರ ಸಂಕೇತದಂತೆ ಇದೆ. ಎರಡು ತಿಂಗಳ ಹಿಂದೆ ಶೀಘ್ರವಾಗಿ ದುರಸ್ತಿ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ನೀಡಿರುವ ಭರವಸೆ ಸದ್ಯಕ್ಕೆ ಈಡೇರುವ ಲಕ್ಷಣ ಕಾಣುತ್ತಿಲ್ಲ.

ತಿಂಗಳ ಹಿಂದೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ದುರಸ್ತಿ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಅಲ್ಲಲ್ಲಿ ಜಲ್ಲಿ ರಾಶಿ ಹಾಕಿದ್ದು ಬಿಟ್ಟರೆ ಬೇರೇನೂ ಕೆಲಸ ಆಗಿಲ್ಲ. ಕಾಮಗಾರಿ ಸ್ಥಗಿತಗೊಂಡಿದೆ.

ಪ್ರತಿದಿನ ಸಾವಿರಾರು ಮಂದಿ ಸಂಚರಿಸುವ ಕೊಳ್ಳೇಗಾಲ-ಹನೂರು-ಮಹದೇಶ್ವರ ಬೆಟ್ಟದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಹನೂರುವರೆಗಿನ ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಗುಂಡಿಗಳೇ ಕಾಣ ಸಿಗುತ್ತವೆ. ಸಮಾಧಾನದ ಸಂಗತಿ ಎಂದರೆ, ಕೆ-ಶಿಪ್ ಯೋಜನೆ ಅಡಿ ಈ ರಸ್ತೆ ಅಭಿವೃದ್ಧಿ ಯಾಗಲಿದೆ. ಹನೂರು ಸಮೀಪ ಕಾಮಗಾರಿಯೂ ನಡೆಯುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದಿರುವುದರಿಂದ ಕಾಮಗಾರಿ ವಿಳಂಬವಾಗಿದೆ.

ಸದಾ ಅಪಾಯವನ್ನು ಆಹ್ವಾನಿಸುತ್ತಿರುವ ಜಿಲ್ಲೆಯ ಮತ್ತೊಂದು ಪ್ರಮುಖ ರಸ್ತೆ ಎಂದರೆ ಚಾಮರಾಜನಗರ ತಾಲ್ಲೂಕಿನ ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್ ವರೆಗಿನ 8 ಕಿ.ಮೀ ಉದ್ದದ ರಸ್ತೆ. ಐದಾರು ವರ್ಷಗಳಿಂದ ಇದರ ಅಭಿವೃದ್ಧಿ ಕಾಮಗಾರಿ ನನೆಗುದಿಗೆ ಬಿದ್ದಿದೆ.ರಸ್ತೆಯ ಉದ್ದಕ್ಕೂ ಹಳ್ಳ, ದಿಣ್ಣೆಗಳು, ಕೊರಕಲುಗಳು ಉಂಟಾಗಿವೆ. ಸೇತುವೆಗಳು ಇರುವ ಕಡೆಗಳಲ್ಲಿ ತಡೆಗೋಡೆಗಳು ಕುಸಿದಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಿಲ್ಲ. ಅಪಘಾತಗಳು ಉಂಟಾಗಿ ಸಾವು ನೋವುಗಳೂ ಸಂಭವಿಸಿವೆ.

ಸಂತೇಮರಹಳ್ಳಿಯಿಂದ 1.30 ಕಿ.ಮೀ ದೂರದವರೆಗೆ ಮಾತ್ರ ಅಭಿವೃದ್ಧಿಪಡಿಸಲು ₹4 ಕೋಟಿ ಅನುದಾನ ಬಿಡುಗಡೆಯಾಗಿದೆ. ಶಾಸಕ ಎನ್.ಮಹೇಶ್ ಭೂಮಿಪೂಜೆ ನೆರವೇರಿಸಿ 2 ತಿಂಗಳು ಕಳೆಯುತ್ತಾ ಬಂದಿದೆ. ಕಾಮಗಾರಿ ವಿಳಂಬವಾಗುತ್ತಿದೆ.

'ರಸ್ತೆ ಅಭಿವೃದ್ಧಿ ಪಡಿಸುವಾಗ ಆರಂಭದಲ್ಲಿ ನಿಧಾನವಾಗುತ್ತದೆ. ರಸ್ತೆಯಲ್ಲಿದ್ದ ಅಂಗಡಿ ಮುಂಗಟ್ಟುಗಳು ಹಾಗೂ ಮರಗಳನ್ನು ತೆರವುಗೊಳಿಸಲು ಸ್ವಲ್ಪ ಸಮಯ ಹಿಡಿದಿದೆ. ರಸ್ತೆ ಕಾಮಗಾರಿಯನ್ನು ಅದಷ್ಟು ಬೇಗನೇ ಮುಂದುವರಿಸಲಾಗುವುದು' ಎಂದು ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಮಾದೇಶ್ ಅವರು 'ಪ್ರಜಾವಾಣಿ'ಗೆ ತಿಳಿಸಿದರು.

ಹನೂರು ತಾಲ್ಲೂಕಿನ ರಸ್ತೆಗಳ ಸ್ಥಿತಿಯೂ ಇದುವೇ. ತಾಲ್ಲೂಕಿನ ಮೂಲಕ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ತೀರಾ ಹದಗೆಟ್ಟಿದ್ದು, ದಶಕಗಳಿಂದ ಡಾಂಬರನ್ನೇ ಕಾಣದಿರುವ ರಸ್ತೆಯ ಮೇಲೆ ಸಂಚರಿಸಲು ವಾಹನ ಸವಾರರು ಪರದಾಡುವಂತಾಗಿದೆ.

ಮಧುವನಹಳ್ಳಿಯಿಂದ ಲೊಕ್ಕನಹಳ್ಳಿ ಮೂಲಕ ತಮಿಳುನಾಡಿಗೆ ಹಾದು ಹೋಗುವ ಮುಖ್ಯಯನ್ನು ಎರಡು ವರ್ಷಗಳ ಹಿಂದೆಯಷ್ಟೇ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡದ ಕಾರಣ ಮಳೆ ನೀರು ರಸ್ತೆ ಮೇಲೆ ನಿಂತು ನಿರ್ಮಾಣವಾದ 6 ತಿಂಗಳಲ್ಲೆ ಕಿತ್ತು ಬರಲು ಪ್ರಾರಂಭವಾಯಿತು. ಮಧುವನಹಳ್ಳಿಯಿಂದ ಕಾಮಗೆರೆ ಅಡ್ಡ ರಸ್ತೆಯವರೆಗೆ ನಿರ್ಮಿಸಿದ್ದ ರಸ್ತೆ ಗುಂಡಿಮಯವಾಗಿದೆ. ಈ ಬಗ್ಗೆ, ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಗಳು ಪ್ರಕಟಗೊಂಡನಂತರ ಗುತ್ತಿಗೆದಾರರು ಅಲ್ಲಲ್ಲಿ ತೇಪೆ ಹಾಕುವ ಕಾರ್ಯ ಮಾಡಿದರೂ, ಕೆಲ ದಿನಗಳಲ್ಲಿ ಅದು ಕೂಡ ಕಿತ್ತು ಬಂದಿದೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಎನ್ಎಚ್ 766 ಮತ್ತು ಎನ್ಎಚ್ 212, ತಮಿಳುನಾಡು ಹಾಗೂ ಕೇರಳಕ್ಕೆ ಸಂಪರ್ಕ ಕಲ್ಪಿಸುತ್ತವೆ. ಈ ರಸ್ತೆಗಳು ಉತ್ತಮವಾಗಿವೆ. ಆದರೆ ಬಂಡೀಪುರ ಅಭಯಾರಣ್ಯದಲ್ಲಿ ಇಳಿಜಾರಿನ ಭಾಗದಲ್ಲಿ ನೀರು ಹರಿದು ಹೋಗಿ ದೊಡ್ಡ ಕೊರಕಲು ಉಂಟಾಗಿ ರಸ್ತೆ ಕಿರಿದಾಗಿದೆ. ವಾಹನಗಳು ಎದುರು ಬದುರಾಗಿ ಬರುವಾಗ ಸರಾಗ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಸುರಕ್ಷಿತ ಸಂಚಾರ ಎಂಬ ಕನಸು

ಜಿಲ್ಲೆಯ ಗ್ರಾಮೀಣ ರಸ್ತೆಗಳ ಸ್ಥಿತಿಯೂ ಭಿನ್ನವಾಗಿಲ್ಲ. ಬಹುತೇಕ ಗ್ರಾಮಗಳಿಗೆ ಸುಸಜ್ಜಿತ ರಸ್ತೆಗಳಿಲ್ಲ. ಕೆಲವು ಕಡೆಗಳಲ್ಲಿ ಈಗ ಕಾಮಗಾರಿ ಆರಂಭವಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಕಳಪೆ ಕಾಮಗಾರಿಯಿಂದಾಗಿ ರಸ್ತೆ ಹಾಳಾಗಿವೆ.

ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರದಿಂದ ಯಲಚೆಟ್ಟಿ ಗ್ರಾಮದವರೆಗಿನ ಸಂಪರ್ಕ ರಸ್ತೆ ಗುಂಡಿಗಳು ಬಿದ್ದು ಹಾಳಾಗಿದೆ. ಮಳೆಯಾದರೆ ರಸ್ತೆಯಲ್ಲಿ ನೀರು ನಿಲ್ಲುತ್ತದೆ.ಮಗುವಿನಹಳ್ಳಿಯಿಂದ ಕಲ್ಲಿಗೌಡನಹಳ್ಳಿ ಸಂಪರ್ಕದ ರಸ್ತೆ, ಹೊನ್ನೆಗೌಡನಹಳ್ಳಿಯಿಂದ ಗೋಪಾಲಪುರ, ಕಣ್ಣೇಗಾಲ ಸಂಪರ್ಕ ರಸ್ತೆಗಳು ಸಂಪೂರ್ಣ ಹಾಳಾಗಿದೆ.ಶಿವಪುರ ಗ್ರಾಮದಿಂದ ಮೊಮ್ಮಲಾಪುರ ರಸ್ತೆಯ ಕಾಮಗಾರಿ ನಿಂತು ರಸ್ತೆ ಗುಂಡಿಮಯವಾಗಿದೆ.

ಇತ್ತೀಚೆಗೆ ಹಿರಿಕಾಟಿ ಗೇಟಿನಿಂದ ಚಿಕ್ಕಾಟಿ ರಸ್ತೆಗೆ ಡಾಂಬರು ಹಾಕಲಾಗಿತ್ತು, ತೀರ ಕಳಪೆಯಾಗಿದ್ದರಿಂದ ಎರಡೇ ದಿನಕ್ಕೆ ಚಕ್ಕೆ ರೂಪದಲ್ಲಿ ಎದ್ದು ಹಾಳಾಯಿತು. ಇದನ್ನು ಸರಿಪಡಿಸಲು ಎಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಯಳಂದೂರು ತಾಲ್ಲೂಕಿನ ಪ್ರಮುಖ ರಸ್ತೆಗಳನ್ನು ಕೂಡಿಕೊಳ್ಳುವ ಗ್ರಾಮೀಣ ಹಾದಿಗಳು ಸಂಚಾರಕ್ಕೆ ಸುರಕ್ಷಿತವಾಗಿಲ್ಲ. ರಸ್ತೆಯ ನಡುವೆ ಸೃಷ್ಟಿಯಾಗಿರುವ ಗುಂಡಿಗಳು, ಕುಸಿದ ಅಂಚುಗಳು ಮತ್ತು ಕಲ್ಲು, ಮಣ್ಣಿನ ರಸ್ತೆಗಳು ಸವಾರರನ್ನು ಸ್ವಾಗತಿಸುತ್ತವೆ.

ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರ ಸಂಪರ್ಕಿಸುವ ಹಲವು ಗ್ರಾಮೀಣ ರಸ್ತೆಗಳು ದಶಕದ ಹಿಂದೆ ಡಾಂಬರು ಕಂಡಿವೆ. ಆದರೆ, ತಾಲ್ಲೂಕಿನ 28 ಗ್ರಾಮೀಣ ಭಾಗಗಳು ಸರ್ವಋತುರಸ್ತೆಗಳನ್ನು ಹೊಂದುವ ಗ್ರಾಮೀಣ ಜನರ ಆಸೆ ಇನ್ನೂ ಈಡೇರಿಲ್ಲ.ಬಿಳಿಗಿರಿರಂಗನ ಬೆಟ್ಟದ ರಸ್ತೆ ಪರಿಸರದ ಕಾರಣಗಳಿಂದ ಅಭಿವೃದ್ಧಿಗೊಂಡಿಲ್ಲ. ಇದರಿಂದ ಮಳೆಗಾಲದಲ್ಲಿ ರಸ್ತೆ ಅಂಚು ಕೊರೆಯುವುದು,ಮಣ್ಣು ಕಿತ್ತು ಬರುವುದು ಸಾಮಾನ್ಯವಾಗಿದೆ. ಗುಂಬಳ್ಳಿ-ಯರಗಂಬಳ್ಳಿ ಮೂಲಕ ಚಾಮರಾಜನಗರಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಸುಧಾರಣೆಕಂಡಿಲ್ಲ. ಕೃಷ್ಣಪುರದಿಂದ ಕೊಳ್ಳೇಗಾಲಕ್ಕೆ ತೆರಳುವ ಮಾರ್ಗ ಕೆಲವೆಡೆ ಡಾಂಬರು ಕಿತ್ತುಬಂದಿದ್ದು, ರಸ್ತೆ ವಿಸ್ತರಿಸುವ ಕೆಲಸಗಳು ಮುನ್ನಲೆಗೆ ಬಂದಿಲ್ಲ.

ಹನೂರು ತಾಲ್ಲೂಕಿನ ಅಜ್ಜೀಪುರದಿಂದ ಕಾಂಚಳ್ಳಿ, ಕೆ. ಗುಂಡಾಪುರ, ಗಂಗನದೊಡ್ಡಿ ಹಾಗೂ ಬಸಪ್ಪನದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹಾಳಾಗಿದೆ. ಇಲ್ಲಿ ಪ್ರತಿದಿನ ವಿವಿಧ ಗ್ರಾಮಗಳಿಂದ ನೂರಾರು ವಾಹನಗಳು ಸಂಚರಿಸುತ್ತವೆ. ಮೂರು ದಶಕಗಳಿಂದ ಈ ರಸ್ತೆ ಡಾಂಬರಿನ ಭಾಗ್ಯವನ್ನೇ ಕಂಡಿಲ್ಲ. ಮಳೆಗಾಲದಲ್ಲಿ ಸಂಚಾರ ದುಸ್ತರವಾಗುತ್ತದೆ. ಅಜ್ಜೀಪುರದಿಂದ ಎಲ್ಲೆಮಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯದ್ದೂ ಇದೇ ಸ್ಥಿತಿ. ದಶಕಗಳ ಹಿಂದೆ ಡಾಂಬರೀಕರಣ ಮಾಡಿದ್ದ ರಸ್ತೆಯಲ್ಲಿ ಜಲ್ಲಿಕಲ್ಲುಗಳೆಲ್ಲ ಮೇಲೆದ್ದು ಗುಂಡಿಗಳಾಗಿವೆ.ರಾಮಾಪುರದಿಂದ ಕೌದಳ್ಳಿಗೆ ಹೋಗುವ ರಸ್ತೆಯೂ ಕೆಟ್ಟು ಹೋಗಿದೆ.

ಹಳ್ಳ-ಕೊಳ್ಳದ ರಸ್ತೆ; ಸಂಚಾರ ಹೈರಾಣ

ಕೊಳ್ಳೇಗಾಲ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಳ್ಳ-ಕೊಳ್ಳದಿಂದ ಕೂಡಿದ್ದು, ಪ್ರತಿನಿತ್ಯ ವಾಹನ ಸವಾರರು ಪರದಾಡುತ್ತಿದ್ದಾರೆ.

ಕೊಳ್ಳೇಗಾಲ ನಗರದಿಂದ ಸಿದ್ದಯ್ಯನಪುರ, ಕೆಂಪನಪಾಳ್ಯ, ನರೀಪುರ- ಪಾಳ್ಯ ಗ್ರಾಮಗಳ ಸಂಪರ್ಕ ರಸ್ತೆ ಹದಗೆಟ್ಟಿದೆ. ದಿನವಿಡೀ ಸಂಚರಿಸುವ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ.

ಭಾರಿ ಹಳ್ಳ- ಕೊಳ್ಳದಿಂದ ಕೂಡಿರುವ ರಸ್ತೆಗಳಲ್ಲಿ ದಿನೆ ದಿನೇ ಅಫಘಾತ ಹೆಚ್ಚುತ್ತಿದ್ದು. ಜನರು ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚಾರಿಸುವ ಪರಿಸ್ಥಿತಿ ಉಂಟಾಗಿದೆ.ಮಳೆ ಬಿದ್ದರೆ ನಗರದ ರಸ್ತೆಗಳು ಕೆಸರು ಗದ್ದೆಗಳಾಂತಾಗುತ್ತವೆ.

ತಾಲ್ಲೂಕಿನ ನರೀಪುರ ಗ್ರಾಮದಿಂದ ಪಾಳ್ಯ ಗ್ರಾಮದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನಡೆದು 10 ತಿಂಗಳಾದರೂ ಕಾಮಗಾರಿ ಪ್ರಾರಂಭವಾಗಿಲ್ಲ. ರಸ್ತೆ ಸರಿಪಡಿಸಿ ಮತ್ತು ಕಾಮಗಾರಿ ಶುರು ಮಾಡಿ ಎಂದು ಗ್ರಾಮಸ್ಥರು ನಾಲ್ಕು ಬಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಆದರೂ ಕಾಮಗಾರಿ ಆರಂಭವಾಗಿಲ್ಲ.

ಜನರು ಏನಂತಾರೆ?

ರಾಷ್ಟ್ರೀಯ ಹೆದ್ದಾರಿ 209 ದುರಸ್ತಿ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಭರವಸೆ ಜಾರಿಯಾಗಿಲ್ಲ. ಭೂಮಿಪೂಜೆ ನಡೆದರೂ ಕಾಮಗಾರಿ ನಡೆದಿಲ್ಲ. ಅಲ್ಲಲ್ಲಿ ಜಲ್ಲಿ ರಾಶಿ ಹಾಕಿದ್ದನ್ನು ಬಿಟ್ಟರೆ ಬೇರೇನೂ ಆಗಿಲ್ಲ. ತಕ್ಷಣ ಕಾಮಗಾರಿ ಆರಂಭಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು

–ಅರುಣ್ ಕುಮಾರ್, ಚಾಮರಾಜನಗರ

ಯಳಂದೂರು ತಾಲ್ಲೂಕಿನಲ್ಲಿ ರಸ್ತೆ ಸರಿ ಇಲ್ಲದಿರುವುದರಿಂದ ಕೆಲವೆಡೆ ಸಂಚಾರ ದುಸ್ತರವಾಗಿದೆ. ರಸ್ತೆ ಬದಿ ಮುಳ್ಳು ಮತ್ತು ಕಲ್ಲುಗಳಿಂದ ಆವೃತವಾಗಿದ್ದು ಸಂಚಾರಕ್ಕೆ ಅಡಚಣೆ ಆಗಿದೆ. ಚಂಗಚಹಳ್ಳಿ ಮತ್ತು ಗೂಳಿಪುರ ಸಂಪರ್ಕಿಸುವರಸ್ತೆಯಲ್ಲಿ ಕಲ್ಲುಗಳು ಮೇಲೆದ್ದು, ಅಲ್ಲಲ್ಲಿ ಗುಂಡಿ ಬಿದ್ದಿದೆ. ಜನ ಸಂಚಾರಕ್ಕೆ ಗುಣಮಟ್ಟದ ರಸ್ತೆ ನಿರ್ಮಿಸಿಕೊಡಬೇಕು

–ಸಿದ್ದಪ್ಪ, ಗೂಳಿಪುರ

ಮಳೆಗಾಲದಲ್ಲಿ ವಾಹನ ಸವಾರರಿಗೆ ತ್ರಾಸ ಹೆಚ್ಚು. ಸೇತುವೆ ಮತ್ತು ಕಾಲುವೆಗಳ ಬಳಿ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು. ಬೆಟ್ಟದ ರಸ್ತೆಯನ್ನು ಸರ್ವಋತು ರಸ್ತೆಯಾಗಿಮೇಲ್ದರ್ಜೆಗೆ ಏರಿಸಬೇಕು. ಎಲ್ಲ ಗ್ರಾಮಗಳಿಗೂ ಉತ್ತಮ ರಸ್ತೆ ಇದ್ದರೆ ಬಸ್ ಸಂಚಾರ ಸುಗಮವಾಗಲಿದೆ

–ಮಹೇಶ್, ಯಳಂದೂರು

ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್ ವರೆಗಿನ 8 ಕಿ.ಮೀ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಸೇರಿಸುವ ಅಗತ್ಯವಿದೆ. ಹಾಗಾದರೆ, ರಸ್ತೆ ಯಾವಾಗಲೂ ಉತ್ತಮವಾಗಿರುತ್ತದೆ. ಈಗ ಕೆಲವೇ ಕಿಮೀ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದಾಗಿ ಜನರು ಎದುರಿಸುತ್ತಿರುವ ಸಮಸ್ಯೆ ಬಗೆ ಹರಿಯುವುದಿಲ್ಲ.

–ಕೆ.ಎಂ.ಮಹದೇವಯ್ಯ, ಕಾವುದವಾಡಿ

ಹನೂರು ತಾಲ್ಲೂಕಿನ ಹೆದ್ದಾರಿ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಅಧ್ವಾನಗೊಂಡಿವೆ. ತಾಲ್ಲೂಕಿನ ಅಭಿವೃದ್ಧಿಯಲ್ಲಿ ರಸ್ತೆ ಸಂಪರ್ಕವೂ ಅತ್ಯಂತ ಮುಖ್ಯ. ಹಾಗಾಗಿ ತಾಲ್ಲೂಕು ಆಡಳಿತ ಸುಸಜ್ಜಿತ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು

–ಮುರುಡೇಶ್ವರಸ್ವಾಮಿ, ಹನೂರು

ನರೀಪುರ ರಸ್ತೆಯಲ್ಲಿ ಸಂಚರಿಸಬೇಕಾದರೆ, ಪ್ರಾಣವನ್ನೇ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಸ್ಥಿತಿ ಬೇರೆ ಯಾವ ಗ್ರಾಮದವರಿಗೂ ಬರಬಾರದು. ತಕ್ಷಣ ಕಾಮಗಾರಿ ಆರಂಭಿಸಬೇಕು

–ಸಿದ್ದನಂಜು,ನರೀಪುರ ಗ್ರಾಮ, ಕೊಳ್ಳೇಗಾಲ ತಾಲ್ಲೂಕು

ರಾಷ್ಟ್ರೀಯ ಹೆದ್ದಾರಿ 209ರ ದುರಸ್ತಿ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ. ಕೆಲಸ ಸ್ಥಗಿತಗೊಂಡಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ

- ಎಸ್.ಸುರೇಶ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ

ನರೀಪುರ ಗ್ರಾಮದ ರಸ್ತೆ ಕಾಮಗಾರಿ ಮುಂದಿನವಾರದಿಂದ ಆರಂಭವಾಗುತ್ತದೆ. ಈ ಸಂಬಂಧ ಲೋಕೋಪಯೋಗಿ ಸಚಿವರೊಂದಿಗೆ ಮಾತನಾಡಿದ್ದೇನೆ
- ಆರ್.ನರೇಂದ್ರ, ಹನೂರು ಶಾಸಕ

ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ. ಮಂಜುನಾಥಸ್ವಾಮಿ, ಮಹದೇವ ಹೆಗ್ಗವಾಡಿಪುರ, ಮಲ್ಲೇಶ ಎಂ, ಬಿ.ಬಸವರಾಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.