ಮಂಗಳವಾರ, ಆಗಸ್ಟ್ 11, 2020
23 °C

ಗೊರವರ ಕುಣಿತದ ಕಲಾವಿದ ಪುಟ್ಟಮಲ್ಲೇಗೌಡ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಗೊರವರ ಕುಣಿತದ ಕಲಾವಿದ ರಾಮಸಮುದ್ರದ ಪುಟ್ಟಮಲ್ಲೇಗೌಡ (95) ಅವರು ಸೋಮವಾರ ರಾತ್ರಿ ತಮ್ಮ ನಿವಾಸದಲ್ಲಿ  ನಿಧನರಾದರು.

ವಯೋ ಸಹಜ‌ ಕಾಯಿಲೆಯಿಂದ‌ ಅವರು‌ ಬಳಲುತ್ತಿದ್ದರು. ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. 

ಬಾಲ್ಯದಿಂದಲೇ ಗೊರವರ ವೇಷ ಧರಿಸಿ ಕುಣಿತ ಆರಂಭಿಸಿದ್ದ ಪುಟ್ಟಮಲ್ಲೇಗೌಡರು, ಸ್ಥಳೀಯ ಕಲೆಯನ್ನು ದೇಶದ ವಿವಿಧೆಡೆಗೆ ಪಸರಿಸಿದ್ದರು.  ಅವರಿಗೆ ಜಾನಪದಶ್ರೀ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿಗಳು ಸಂದಿವೆ. 

ದೆಹಲಿ, ಪುದುಚೇರಿ, ಅಂಡಮಾನ್ ನಿಕೋಬಾರ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗೊರವರ ಕುಣಿತ ಪ್ರದರ್ಶನ ನೀಡಿದ್ದರು. 

ಅವರ ಪತ್ನಿ ಹಾಗೂ ಪುತ್ರ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು.

ಪ್ರಸ್ತುತ ತಮ್ಮ ಪುತ್ರಿಯ ಮನೆಯಲ್ಲಿ  ಅವರು ವಾಸವಿದ್ದರು.  ಮೃತರ ಅಂತ್ಯಕ್ರಿಯೆ ಮಂಗಳವಾರ ರಾಮಸಮುದ್ರದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು